ETV Bharat / business

ಹೊಸ ಐಟಿ ನೀತಿಗಳ ಅನುಷ್ಠಾನದ ಮಾಹಿತಿ ತಕ್ಷಣವೇ ಹಂಚಿಕೊಳ್ಳುವಂತೆ ಸೋಷಿಯಲ್​ ಮೀಡಿಯಾಗಳಿಗೆ ಕೇಂದ್ರದ ತಾಕೀತು

author img

By

Published : May 26, 2021, 8:58 PM IST

ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಪ್ರಕಾರ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ನೇಮಕಗೊಂಡ ಸ್ಥಳೀಯ ಮುಖ್ಯ ಅಧಿಕಾರಿ, ಬಂದ ದೂರು ಮತ್ತು ಕುಂದುಕೊರತೆ ಪರಿಹಾರ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯ ವಿವರ ಹಾಗೂ ಸಂಪರ್ಕಿಸುವ ಮಾಹಿತಿಯನ್ನು ಸಚಿವಾಲಯ ಕೋರಿದೆ ಎಂದು ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ.

social media
social media

ನವದೆಹಲಿ: ಹೊಸ ಡಿಜಿಟಲ್ ನಿಯಮಗಳ ಅನುಸರಣೆಯ ಸ್ಥಿತಿಗತಿಯನ್ನು ಈ ತಕ್ಷಣವೇ ಹಂಚಿಕೊಂಡು ವರದಿ ನೀಡುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ.

'ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ' ನೀಡಿದ ನೋಟಿಸ್​ನಲ್ಲಿ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಪ್ರಾಮಾಣಿಕ ನಡೆಗಳನ್ನು ಅನುಸರಿಸುವುದು ಸರ್ಕಾರದ ಬಯಸುತ್ತದೆ ಎಂದು ಐಟಿ ಸಚಿವಾಲಯ ಹೇಳಿದೆ.

ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಪ್ರಕಾರ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ನೇಮಕಗೊಂಡಿ ಸ್ಥಳೀಯ ಮುಖ್ಯ ಅಧಿಕಾರಿ, ಬಂದ ದೂರು ಮತ್ತು ಕುಂದುಕೊರತೆ ಪರಿಹಾರ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯ ವಿವರ ಹಾಗೂ ಸಂಪರ್ಕಿಸುವ ಮಾಹಿತಿಯನ್ನು ಸಚಿವಾಲಯ ಕೋರಿದೆ ಎಂದು ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ.

ಮೂಲ ಕಂಪನಿ ಅಥವಾ ಅಂಗಸಂಸ್ಥೆ ಯಾವುದೇ ದೇಶದಲ್ಲಿ ಇರಬಹುದು. ಭಾರತದಲ್ಲಿ ವಿವಿಧ ಸೇವೆಗಳನ್ನು ಒದಗಿಸುತ್ತಿದ್ದರೇ ಐಟಿ ಕಾಯ್ದೆ ಮತ್ತು ಮೇಲಿನ ನಿಯಮಗಳ ಸಂದರ್ಭದಲ್ಲಿ ಎಸ್‌ಎಸ್‌ಎಂಐ (ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ) ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತವೆ ಎಂದಿದೆ.

ಈ ನಿಯಮಗಳ ಅನುಸರಣೆ ಖಚಿತಪಡಿಸಿಕೊಳ್ಳುವ ಭಾಗವಾಗಿ, ಈ ಕೆಳಗಿನ ಮಾಹಿತಿಯನ್ನು ಒದಗಿಸಲು ಕೋರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯ ವ್ಯಾಪ್ತಿಯಲ್ಲಿ ಬರುವ ಅಪ್ಲಿಕೇಷನ್‌ನ ಹೆಸರು, ವೆಬ್‌ಸೈಟ್ ಮತ್ತು ಸೇವೆಯಂತಹ ವಿವರಗಳ ಹೊರತಾಗಿ, ಸಚಿವಾಲಯವು ಮೂವರು ಪ್ರಮುಖ ಸಿಬ್ಬಂದಿಗಳ ವಿವರ ಮತ್ತು ಭಾರತದ ವೇದಿಕೆಯ ಭೌತಿಕ ಸಂಪರ್ಕ ವಿಳಾಸ ಕೋರಿದೆ.

ಹೊಸ ನಿಯಮಗಳನ್ನು ಅನುಸರಿಸುವ ಸ್ಥಿತಿಗತಿಗಳ ಬಗ್ಗೆ ವರದಿ ಮಾಡಲು ತಾಕೀತು ಮಾಡಿದೆ.

ಇದನ್ನೂ ಓದಿ: 4 ಕೋಟಿ ದಾಟಿದ NPS, APY: ₹ 6 ಲಕ್ಷ ಕೋಟಿ ಜಮೆ, 30 ದಿನಗಳಲ್ಲಿ ಲಕ್ಷ ಕೋಟಿ ರೂ. ಸೇರ್ಪಡೆ!

ನಿಮ್ಮನ್ನು ಎಸ್‌ಎಸ್‌ಎಂಐ ಎಂದು ಪರಿಗಣಿಸದಿದ್ದರೆ, ದಯವಿಟ್ಟು ನೀವು ಒದಗಿಸಿದ ಪ್ರತಿಯೊಂದು ಸೇವೆಗಳಲ್ಲಿ ನೋಂದಾಯಿತ ಬಳಕೆದಾರರನ್ನೂ ಒಳಗೊಂಡಂತೆ ಕಾರಣಗಳನ್ನು ಒದಗಿಸಿ. ಐಟಿ ನಿಯಮಗಳ ಒಳಗೆ ಅನುಮತಿಸಬಹುದಾದ ಯಾವುದೇ ಹೆಚ್ಚುವರಿ ಮಾಹಿತಿ ಪಡೆಯುವ ಹಕ್ಕಿ ಸರ್ಕಾರ ಹೊಂದಿದೆ ಎಂದು ಪ್ಲಾಟ್​ಫಾರ್ಮ್​ಗಳ ಗಮನಕ್ಕೆ ತಂದಿದೆ.

ಹೊಸ ನಿಯಮಗಳನ್ನು ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್​ಆ್ಯಪ್​​ನಂತಹ ಸೋಷಿಯಲ್​ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದು ಕೊರತೆ ಪರಿಹಾರ ಅಧಿಕಾರಿಗಳ ನಿವಾಸ, ನೇಮಕ ಸೇರಿದಂತೆ ಇತರ ಮಾಹಿತಿ ಹಂಚಿ ಕೊಳ್ಳಬೇಕಿದೆ.

ನಿಯಮಗಳನ್ನು ಪಾಲಿಸದಿದ್ದಲ್ಲಿ ಈ ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಮಧ್ಯವರ್ತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತವೆ. ಯಾವುದೇ ಮೂರನೇ ವ್ಯಕ್ತಿಗೆ ಮಾಹಿತಿ ಮತ್ತು ಡೇಟಾ ಹಂಚಿಕೊಂಡಿದ್ದರೇ ಅವುಗಳನ್ನೇ ಜವಾಬ್ದಾರಿಯನ್ನಾಗಿ ಮಾಡಲಾಗುವುದು. ಇನ್ನೊಂದು ಅರ್ಥದಲ್ಲಿ ದೂರುಗಳು ಬಂದ ಸಂದರ್ಭದಲ್ಲಿ ಅವನ್ನು ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರಾಗಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.