ನವದೆಹಲಿ: ಕೋವಿಡ್ -19 ಪೀಡಿತ ವಲಯಕ್ಕೆ ಪ್ರಮುಖ ಪರಿಹಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1.1 ಲಕ್ಷ ಕೋಟಿ ರೂ. ಮೀಸಲಿರಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ. ಮತ್ತು ಇತರ ಕ್ಷೇತ್ರಗಳಿಗೆ ಹೆಚ್ಚುವರಿ 60,000 ಕೋಟಿ ರೂ. ನಿಡುವುದಾಗಿ ಹೇಳಿದ್ದಾರೆ.
ಈ ಯೋಜನೆಯು ದೇಶದ ಎಂಟು ಮೆಟ್ರೋ ಪ್ರದೇಶಗಳನ್ನು ಹೊರತುಪಡಿಸಿ ಇತರ ನಗರಗಳಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಒಳಗೊಂಡಿದೆ.
ಇತರ ಪ್ರಮುಖ ನಿರ್ಧಾರಗಳು:
- ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಯೋಜನೆಯನ್ನು ಘೋಷಿಸಲಾಯಿತು. ಈ ಹಿಂದೆ 3 ಲಕ್ಷ ಕೋಟಿ ರೂ.ಗಳ ಇಸಿಎಲ್‌ಜಿಎಸ್‌ನಲ್ಲಿ ಈಗಾಗಲೇ 2.69 ಲಕ್ಷ ಕೋಟಿ ರೂ. ಈ ಯೋಜನೆಯನ್ನು ಎಂಎಸ್‌ಎಂಇ ವಲಯದತ್ತ ಗುರಿ ಮಾಡಲಾಗಿದೆ. ಈವರೆಗೆ 12 ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ), 25 ಖಾಸಗಿ ಬ್ಯಾಂಕುಗಳು ಮತ್ತು 31 ಬ್ಯಾಂಕೇತರ ಹಣಕಾಸು ನಿಗಮಗಳು (ಎನ್‌ಬಿಎಫ್‌ಸಿ) ಈ ಯೋಜನೆಯ ಫಲ ಪಡೆದಿವೆ.
- ಕ್ರೆಡಿಟ್ ಗ್ಯಾರಂಟಿ ಯೋಜನೆಯು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ 25 ಲಕ್ಷ ರೂ. ಸಾಲ ನೀಡುವುದಾಗಿದೆ. ಇದನ್ನು 1.25 ಲಕ್ಷ ರೂ.ವರೆಗೆ ಸಾಲ ನೀಡಲು ಬಳಸಲಾಗುತ್ತದೆ. ಬಡ್ಡಿದರ ಎಂಸಿಎಲ್ಆರ್ ಜೊತೆಗೆ ಶೇ2ರಷ್ಟಾಗಿರುತ್ತದೆ.
- ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಯೋಜನೆ ಘೋಷಿಸಲಾಯಿತು. ಈ ಯೋಜನೆಯಡಿ, 11,000ಕ್ಕೂ ಹೆಚ್ಚು ಪ್ರವಾಸಿ ಗೈಡ್ಗಳಿಗೆ ಶೇ 100ರಷ್ಟು ಖಾತರಿಯೊಂದಿಗೆ ಆರ್ಥಿಕ ನೆರವು ನೀಡಲಾಗುವುದು. ಏಜೆನ್ಸಿಗೆ 10 ಲಕ್ಷ ರೂ., ಪ್ರವಾಸಿ ಗೈಡ್ಗಳಿಗೆ 1 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಸರ್ಕಾರದ ಅಂದಾಜಿನ ಪ್ರಕಾರ, ಇದು 10,700ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಗೈಡ್ಗಳಿಗೆ ಸಹಾಯ ಮಾಡಲಿದೆ. ಈ ಯೋಜನೆಯನ್ನು ಪ್ರವಾಸೋದ್ಯಮ ಸಚಿವಾಲಯವು ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ (ಎನ್‌ಸಿಜಿಟಿಸಿ) ಮೂಲಕ ನಿರ್ವಹಿಸಲಿದೆ.
- ಭಾರತಕ್ಕೆ ಪ್ರಯಾಣವನ್ನು ಉತ್ತೇಜಿಸಲು 5 ಲಕ್ಷ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡಲಾಗುವುದು. ಮಾರ್ಚ್ 2022ರವರೆಗೆ ಅಥವಾ 5 ಲಕ್ಷ ವೀಸಾಗಳು ಖಾಲಿಯಾಗುವವರೆಗೆ ಈ ಯೋಜನೆ ಮಾನ್ಯವಾಗಿರುತ್ತದೆ. ಈ ಕ್ರಮಕ್ಕೆ ಒಟ್ಟು 100 ಕೋಟಿ ರೂ. ಮೀಸಲಿರಿಸಲಾಗಿದೆ.
ಸರ್ಕಾರದ ಅಂದಾಜಿನ ಪ್ರಕಾರ, 2019ರಲ್ಲಿ 10.93 ಮಿಲಿಯನ್ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದು, 30 ಬಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿದ್ದಾರೆ. ಸರಾಸರಿ ಪ್ರವಾಸಿಗರು ದಿನಕ್ಕೆ 2,400 ರೂ. ಖರ್ಚು ಮಾಡಿದ್ದಾರೆ.