ETV Bharat / business

'ಹಲ್ವಾ' ವಿತರಿಸಿ ಬಜೆಟ್​ ಮುದ್ರಣಕ್ಕೆ ಚಾಲನೆ ನೀಡಿದ ಸೀತಾರಾಮನ್​: ಫೆ.1ಕ್ಕೆ 'ನಿರ್ಮಲಾ' ಆಯವ್ಯಯ​ ಮಂಡನೆ - ವಾಣಿಜ್ಯ ಸುದ್ದಿ

ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್​ ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಬಜೆಟ್‌ ದಾಖಲಾತಿಗಳ ಮುದ್ರಣದ ಆರಂಭವನ್ನು ಸಾಂಕೇತಿಕವಾಗಿ ಬಿಂಬಿಸುವ 'ಹಲ್ವಾ' ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ನೆರೆದಿದ್ದ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಿದರು.

Budget halwa
ಬಜೆಟ್ ಹಲ್ವಾ
author img

By

Published : Jan 20, 2020, 4:18 PM IST

Updated : Jan 20, 2020, 4:37 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2020-21ನೇ ಸಾಲಿನ ಕೇಂದ್ರ ಬಜೆಟ್‌ನ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯ 'ಹಲ್ವಾ ಕಾರ್ಯಕ್ರಮ'ಕ್ಕೆ ಇಂದು ಚಾಲನೆ ನೀಡಿದ್ರು.

ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್​ ಅನ್ನು ಫೆಬ್ರವರಿ 1ರಂದು ಮಂಡಸಲಿದ್ದಾರೆ. ಬಜೆಟ್‌ ದಾಖಲಾತಿಗಳ ಮುದ್ರಣದ ಆರಂಭವನ್ನು ಸಾಂಕೇತಿಕವಾಗಿ ಬಿಂಬಿಸುವ 'ಹಲ್ವಾ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೆರೆದಿದ್ದ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಿದರು.

ಈ ವೇಳೆ, ಹಣಕಾಸು ಖಾತೆಯ ಸಹಾಯಕ ಸಚಿವ ಅನುರಾಗ್‌ ಠಾಕೂರ್‌, ಸಿಬಿಡಿಟಿ, ಸಿಬಿಐಸಿ ಸೇರಿದಂತೆ ಇಲಾಖೆಗಳ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರತಿ ವರ್ಷ ಸಾಂಪ್ರದಾಯಿಕವಾಗಿ ದೊಡ್ಡ ಕಡಾಯಿಯೊಂದರಲ್ಲಿ ಸಿಹಿ ಹಲ್ವಾ ತಯಾರಿಸಿ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ವಿತರಿಸಿಕೊಂಡು ಬರಲಾಗುತ್ತಿದೆ.

'ಹಲ್ವಾ' ವಿತರಿಸಿ ಬಜೆಟ್​ ಮುದ್ರಣಕ್ಕೆ ಚಾಲನೆ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಸಿಹಿ ವಿತರಣೆಯ ಬಳಿಕ ಬಜೆಟ್‌ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಹಾಗೂ ಸಹಕರಿಸುವ ಸಿಬ್ಬಂದಿ ಲೋಕಸಭೆಯಲ್ಲಿ ಬಜೆಟ್‌ ಮಂಡನೆಯಾಗುವ ತನಕ ಹಣಕಾಸು ಸಚಿವಾಲಯದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಕುಟುಂಬದ ಜತೆಗಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಬಜೆಟ್‌ನ ಗೌಪ್ಯತೆಯನ್ನು ರಕ್ಷಿಸಲು ಈ ನಿಯಮಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

Intro:Body:

The 2020 Union Budget process kicks off officially on Monday with the customary 'halwa' ceremony marking the start of printing documents for the Budget.

New Delhi: The Union Finance Minister Nirmala Sitharaman presided over halwa ceremony om Monday at North Block to mark the beginning of printing of the Budget 2020 documents.

Conclusion:
Last Updated : Jan 20, 2020, 4:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.