ETV Bharat / business

ಹೊಸ ಐಟಿ ನಿಯಮಗಳು ಗೂಗಲ್ ಸರ್ಚ್ ಎಂಜಿನ್‌ಗೆ ಅನ್ವಯಿಸಲ್ಲ: ಹೈಕೋರ್ಟ್​ ಸೂಚನೆಗೆ ಪ್ರತಿಕ್ರಿಯೆ - ಗೂಗಲ್ ಸರ್ಚ್ ಎಂಜಿನ್

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ನ್ಯಾಯಪೀಠವು ಕೇಂದ್ರ, ದೆಹಲಿ ಸರ್ಕಾರ, ಇಂಟರ್​ನೆಟ್ ಸೇವಾ ಪೂರೈಕೆದಾರರ ಸಂಘ, ಫೇಸ್‌ಬುಕ್, ಅಶ್ಲೀಲ ತಾಣ ಮತ್ತು ಮಹಿಳೆಗೆ ನೋಟಿಸ್ ಜಾರಿಗೊಳಿಸಿದ್ದು, ಜುಲೈ 25ರೊಳಗೆ ಪ್ರತಿಕ್ರಿಯೆ ನೀಡುವಂತೆ ಗೂಗಲ್‌ಗೂ ಸೂಚಿಸಿದೆ.

Google
Google
author img

By

Published : Jun 2, 2021, 3:42 PM IST

ನವದೆಹಲಿ: ಗೂಗಲ್ ಎಲ್ಎಲ್ ಸಿ ಡಿಜಿಟಲ್ ಮಾಧ್ಯಮಕ್ಕಾಗಿ ಮಾಹಿತಿ ತಂತ್ರಜ್ಞಾನ ನಿಯಮಗಳು ತನ್ನ ಸರ್ಚ್ ಇಂಜಿನ್​ಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದ್ದು, ಈ ಸಂಬಂಧಿತ ಸಮಸ್ಯೆಯನ್ನು ಎದುರಿಸುವಾಗ ಕಂಪನಿಯ ನಿಯಮಗಳನ್ನು ಅನ್ವಯಿಸುವ ಏಕ ನ್ಯಾಯಾಧೀಶರ ಆದೇಶವಾದ ಅಂತರ್ಜಾಲದಿಂದ ಆಕ್ಷೇಪಾರ್ಹ ವಿಷಯ ತೆಗೆದುಹಾಕುವುದನ್ನು ಬದಿಗಿಡುವಂತೆ ದೆಹಲಿ ಹೈಕೋರ್ಟ್​ಗೆ ಒತ್ತಾಯಿಸಿದೆ.

ಕೆಲವು ದುಷ್ಕರ್ಮಿಗಳು ಮಹಿಳೆಯ ಛಾಯಾಚಿತ್ರಗಳನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್ಲೋಡ್​ ಮಾಡಿದ ವಿಚಾರಣೆ ನಿರ್ವಹಿಸುವಾಗ ಏಕ ಸದಸ್ಯರ ನ್ಯಾಯಾಧೀಶರ ತೀರ್ಮಾನ ಬಂದಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಕಂಟೆಂಟ್​ ಅನ್ನು ವರ್ಲ್ಡ್ ವೈಡ್ ವೆಬ್‌ನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗುವುದಿಲ್ಲ. ತಪ್ಪಾದ ಪಾರ್ಟಿಗಳು ಇತರ ಸೈಟ್​ಗಳಲ್ಲಿ ಮರು ಪೋಸ್ಟ್ ಮಾಡಿದವು ಎಂದಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ನ್ಯಾಯಪೀಠವು ಕೇಂದ್ರ, ದೆಹಲಿ ಸರ್ಕಾರ, ಇಂಟರ್​ನೆಟ್ ಸೇವಾ ಪೂರೈಕೆದಾರರ ಸಂಘ, ಫೇಸ್‌ಬುಕ್, ಅಶ್ಲೀಲ ತಾಣ ಮತ್ತು ಮಹಿಳೆಗೆ ನೋಟಿಸ್ ಜಾರಿಗೊಳಿಸಿದ್ದು, ಜುಲೈ 25ರೊಳಗೆ ಪ್ರತಿಕ್ರಿಯೆ ನೀಡುವಂತೆ ಗೂಗಲ್‌ಗೆ ಸೂಚಿಸಿದೆ.

ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ಹೊರಡಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಏಕ ಸದಸ್ಯ ನ್ಯಾಯಮೂರ್ತಿ ತಮ್ಮ ಏಪ್ರಿಲ್ 20ರ ತೀರ್ಪಿನಲ್ಲಿ, ಹೊಸ ನಿಯಮಗಳ ಪ್ರಕಾರ ಒದಗಿಸಿದಂತೆ ತನ್ನ ಸರ್ಚ್ ಎಂಜಿನ್ ಅನ್ನು 'ಸಾಮಾಜಿಕ ಮಾಧ್ಯಮ ಮಧ್ಯವರ್ತಿ' ಅಥವಾ 'ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ' ಎಂದು ತಪ್ಪಾಗಿ ನಿರೂಪಿಸಿದ್ದಾರೆ ಎಂದು ಗೂಗಲ್ ವಾದಿಸಿದೆ.

"ಏಕ ನ್ಯಾಯಾಧೀಶರು ಹೊಸ ನಿಯಮಗಳು 2021 ಅನ್ನು ಮೇಲ್ಮನವಿಯ ಸರ್ಚ್ ಎಂಜಿನ್‌ಗೆ ತಪ್ಪಾಗಿ ಅರ್ಥೈಸಿದ್ದಾರೆ ಮತ್ತು ತಪ್ಪಾಗಿ ಬಳಸಿದ್ದಾರೆ. ಏಕ ನ್ಯಾಯಾಧೀಶರು ಐಟಿ ಕಾಯ್ದೆಯ ವಿವಿಧ ವಿಭಾಗಗಳನ್ನು ಮತ್ತು ಅದರ ಮೇಲೆ ಸೂಚಿಸಲಾದ ಪ್ರತ್ಯೇಕ ನಿಯಮಗಳನ್ನು ಸಂಯೋಜಿಸಿದ್ದಾರೆ. ಅಂತಹ ಎಲ್ಲ ಅಪರಾಧಗಳು ಮತ್ತು ನಿಬಂಧನೆಗಳನ್ನು ಒಟ್ಟುಗೂಡಿಸಿ ಟೆಂಪ್ಲೇಟ್ ಆದೇಶಗಳನ್ನು ಅಂಗೀಕರಿಸಿದ್ದಾರೆ. ಇದು ಕಾನೂನಿನಲ್ಲಿ ಕೆಟ್ಟದ್ದಾಗಿದೆ ಎಂದು ಏಪ್ರಿಲ್ 20ರ ತೀರ್ಪಿನ ವಿರುದ್ಧ ಮೇಲ್ಮನವಿಯಲ್ಲಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.