ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 446 ರೂ. ಏರಿಕೆಯಾಗಿದ್ದು, ಮಂಗಳವಾರ 22k ಚಿನ್ನ 46,460 ರೂ. ಮತ್ತು 24k ಚಿನ್ನ 48,080 ರೂ. ಗೆ ತಲುಪಿದೆ. ಜಾಗತಿಕ ಬೆಲೆಬಾಳುವ ಲೋಹದ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ ಮತ್ತು ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಗೆ 22k ಚಿನ್ನ 45,550 ರೂ. ಮತ್ತು 24k ಚಿನ್ನ 47,830 ರೂ. ಇದೆ. ಹಿಂದಿನ ವಹಿವಾಟಿನಲ್ಲಿ, ಬೆಲೆಬಾಳುವ ಲೋಹವು 10 ಗ್ರಾಂಗೆ 46,014 ರೂ.ದರದೊಂದಿಗೆ ವಹಿವಾಟು ಕೊನೆಗೊಳಿಸಿತ್ತು. ಬೆಳ್ಳಿ ಕೂಡ ಪ್ರತಿ ಕೆಜಿಗೆ 888 ರೂ. ಏರಿಕೆಯಾಗಿದ್ದು, 62,452 ರೂ. ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆಜಿ ಬೆಳ್ಳಿಗೆ 61,564 ರೂ. ದರ ಇತ್ತು.
ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ 3 ಪೈಸೆ ಇಳಿಕೆ ಕಂಡು 74.27 ರೂ. ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ ಚಿನ್ನದ ಬೆಲೆ 1,793 ಡಾಲರ್‌ಗಳಷ್ಟು ಹೆಚ್ಚಿದೆ ಮತ್ತು ಬೆಳ್ಳಿ ಪ್ರತಿ ಔನ್ಸ್‌ಗೆ 23.88 ಡಾಲರ್‌ನಷ್ಟಿದೆ.
ಓದಿ: ಈ ರಾಜ್ಯದಲ್ಲಿ ಆನ್ಲೈನ್ನಲ್ಲೇ ಮದ್ಯ ಖರೀದಿಗೆ ಅವಕಾಶ.. ಇಂದಿನಿಂದ ಜಾರಿ!