ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಚಿನ್ನವು 10 ಗ್ರಾಂಗೆ 464 ರೂ.ಗಳಷ್ಟು ಇಳಿಕೆ ಕಂಡು 47,705 ರೂ.ಗೆ ವಹಿವಾಟು ನಡೆಸಿದೆ. ಹಿಂದಿನ ವಹಿವಾಟಿನಲ್ಲಿ, ಚಿನ್ನವು 464 ರೂ.ನಷ್ಟು ಇಳಿದು, 10 ಗ್ರಾಂಗೆ 48,169 ರೂ.ಗೆ ನಿಗದಿಯಾಗಿತ್ತು. ಬೆಳ್ಳಿ 723 ರೂ.ನಷ್ಟು ಇಳಿದು, ಇಳಿದು ಕೆ.ಜಿ.ಗೆ 71,143 ರೂ. ದರದಲ್ಲಿ ಮಾರಾಟವಾಯಿತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,858 ಡಾಲರ್‌ಗೆ ಮತ್ತು ಬೆಳ್ಳಿ ಔನ್ಸ್‌ಗೆ 27.70 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
"ಹಳದಿ ಲೋಹದ ಬೆಲೆ ಇಳಿಕೆಯಾಗಿದ್ದರಿಂದ ಗ್ರಾಹಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ವ್ಯಾಪಾರಿಗಳು ಮತ್ತು ಹೂಡಿಕೆದಾರರು ಬುಧವಾರ ಯುಎಸ್ ಎಫ್‌ಒಎಂಸಿ ಸಭೆಯಿಂದ ಹೊಸ ಪ್ರಚೋದಕಗಳಿಗಾಗಿ ಕಾಯುತ್ತಿದ್ದಾರೆ." ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.
"ದುರ್ಬಲ ಡಾಲರ್ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಬಹುದು. ಚಿನ್ನದ ಬೆಲೆಗಳು ಒಂದು ವಾರಕ್ಕಿಂತಲೂ ಕಡಿಮೆಯಾಗಿದೆ. ಈ ವಾರ ಯುಎಸ್ ಫೆಡರಲ್ ರಿಸರ್ವ್ ನೀತಿ ಸಭೆಯತ್ತ ಎಲ್ಲರ ಗಮನ ಹರಿಯಲಿದೆ" ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಉಪಾಧ್ಯಕ್ಷ (ಸರಕುಗಳ ಸಂಶೋಧನೆ) ನವನೀತ್ ದಮಾನಿ ತಿಳಿಸಿದ್ದಾರೆ.