ನವದೆಹಲಿ : ಭಾರತದ ವಿದೇಶಿ ವ್ಯಾಪಾರ ನೀತಿ (ಎಫ್‌ಟಿಪಿ) 2015-20 ಸಾಲಿನದನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. 2021ರ ಮಾರ್ಚ್ 31ರವರೆಗೆ ವಿದೇಶಿ ವ್ಯಾಪಾರ ನೀತಿ ಅನ್ವಯವಾಗುತ್ತಿತ್ತು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ಈ ಪ್ರಕಟಣೆ ಹೊರಡಿಸಿದೆ. 2021ರ ಮಾರ್ಚ್ 31ರವರೆಗೆ ಮಾನ್ಯವಾಗಿರುವ ಅಸ್ತಿತ್ವದಲ್ಲಿರುವ ವಿದೇಶಿ ವ್ಯಾಪಾರ ನೀತಿ 2015-2020 ಅನ್ನು 2021ರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದಿದೆ.
ಇದನ್ನೂ ಓದಿ: ನಿನ್ನೆಯ ಅಮೆರಿಕ ಮಾರುಕಟ್ಟೆಯ ಪ್ರಭಾವಕ್ಕೆ 657 ಅಂಕ ಕಳೆದುಕೊಂಡ ಸೆನ್ಸೆಕ್ಸ್!
ಪ್ರಸ್ತುತ ನೀತಿಯು 2015ರ ಏಪ್ರಿಲ್ 1ರಿಂದ ಜಾರಿಗೆ ಬಂದಿತ್ತು. ಇದು ವಾಯ್ದೆ 2020ರ ಮಾರ್ಚ್ 31ವರೆಗೆ ಅಂದರೇ 5 ವರ್ಷಗಳ ತನಕ ಅನ್ವಯಿಸುತ್ತದೆ. ಆದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷ ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಮುಂದೂಡಿಕೆ ಮಾಡಲಾಗಿದೆ.