ETV Bharat / business

GST ಪರಿಣಾಮ: ಕಳೆದ 4 ವರ್ಷಗಳಲ್ಲಿ ಈ 400 ವಸ್ತುಗಳಲ್ಲಿ ದಾಖಲೆ ಮಟ್ಟದ ಇಳಿಕೆ!

2017ರ ಜುಲೈ 1ರಂದು ಜಾರಿಗೆ ಬಂದಿರುವ ಜಿಎಸ್​ಟಿ ನಾಲ್ಕು ವರ್ಷಗಳ ಪೂರೈಕೆ ಮಾಡಿದ್ದು, ಈ ಸಂದರ್ಭದಲ್ಲಿ ಅನೇಕ ವಸ್ತುಗಳ ಮೇಲಿನ ಬೆಲೆ ಕಡಿಮೆಯಾಗಿವೆ.

Four years of GST
Four years of GST
author img

By

Published : Jun 30, 2021, 3:59 PM IST

ನವದೆಹಲಿ: ಭಾರತದ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ(GST) ಶುರುವಾಗಿ ನಾಲ್ಕು ವರ್ಷಗಳು ಪೂರೈಕೆಗೊಂಡಿವೆ. 2017ರ ಜುಲೈ 1ರಿಂದ ಆರಂಭಗೊಂಡಿದ್ದ ಜಿಎಸ್​​ಟಿ ಗ್ರಾಹಕರಿಗೆ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಕೂಡ ಮಾಡಿದೆ.

ಜಿಎಸ್​ಟಿ ಜಾರಿಗೊಂಡ ಬಳಿಕ ದೇಶದಲ್ಲಿ ಅನೇಕ ವಸ್ತುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ಪ್ರಮುಖವಾಗಿ ಹೇರ್​ ಆಯಿಲ್​, ಟೂತ್​ಪೆಸ್ಟ್​, ವಾಟರ್​ ಹೀಟರ್​​ ಸೇರಿದಂತೆ ಅನೇಕ ವಸ್ತುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಿಕೊಂಡಿದೆ.

  • Studies have found that the introduction of GST and the resultant removal of inter-state barriers resulted in a 20% reduction in turnaround times in the transport sector. #4yearsofGST
    (1/2)

    — Ministry of Finance (@FinMinIndia) June 30, 2021 " class="align-text-top noRightClick twitterSection" data=" ">

ಯಾವೆಲ್ಲ ವಸ್ತುಗಳಲ್ಲಿ ಇಳಿಕೆ

ಜನಸಾಮಾನ್ಯರು ಬಳಕೆ ಮಾಡುವ ಹೇರ್​ ಆಯಿಲ್​, ಟೂತ್​ಪೆಸ್ಟ್​, ಸಾಬೂನ್​ಗಳ ಬೆಲೆಯಲ್ಲಿ ಶೇ 29.3ರಿಂದ ಶೇ 18ಕ್ಕೆ ಇಳಿಕೆಯಾಗಿದೆ. ಫ್ರಿಡ್ಜ್​, ವಾಷಿಂಗ್​ ಮಶಿನ್​, ವ್ಯಾಕ್ಯೂಮ್​ ಕ್ಲೀನರ್​, ಗ್ರೈಂಡರ್ಸ್​, ಮಿಕ್ಸರ್​​ಗಳು, ಹೇರ್​ ಕ್ಲಿಪ್ಪರ್​​, ವಾಟರ್ ಹೀಟರ್​, ಹೇರ್​ ಡ್ರೈಯರ್​​, ಎಲೆಕ್ಟ್ರಿಕ್​​ ಐರನ್​ ಬಾಕ್ಸ್​, ಟಿವಿಗಳ ಮೇಲೆ ಶೇ. 31.3ರಿಂದ ಜಿಎಸ್​ಟಿ 18ಕ್ಕೆ ಇಳಿಕೆಯಾಗಿದ್ದು, ಇದಕ್ಕೆ ಮುಖ್ಯ ಕಾರಣವಾಗಿದ್ದು ಜಿಎಸ್​ಟಿ ಎಂದು ಹಣಕಾಸು ಇಲಾಖೆ ಹೇಳಿಕೊಂಡಿದೆ.

ಸಿನಿಮಾ ಟಿಕೆಟ್​ಗಳಲ್ಲಿ ಹೆಚ್ಚಿನ ಇಳಿಕೆ ಕಂಡು ಬಂದಿದ್ದು, ಇದೀಗ ಅದನ್ನ ಶೇ. 12ಕ್ಕೆ ತರಲಾಗಿದೆ ಎಂದು ಹೇಳಲಾಗಿದೆ. ನಿತ್ಯ ಬಳಕೆ ಮಾಡುವ ವಸ್ತುಗಳ ಮೇಲಿನ ಜಿಎಸ್​ಟಿ ಕೇವಲ ಶೇ. 5 ಹಾಗೂ 1ರಷ್ಟಿದೆ.

ರೆಸ್ಟೋರೆಂಟ್​ಗಳಲ್ಲೂ ಕಡಿಮೆ ಹಣ ನೀಡುವಂತಾಗಿದೆ ಎಂದು ಅದು ಮಾಹಿತಿ ಹಂಚಿಕೊಂಡಿದೆ. ಜಿಎಸ್​ಟಿ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ರಿಯಾಯಿತಿ ನೀಡಲಾಗಿದ್ದು, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳ ಮೇಲೂ ತೆರಿಗೆ ಕಡಿಮೆಯಾಗಿದೆ.

ಜಿಎಸ್‌ಟಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ರಿಯಾಯಿತಿಗಳನ್ನು ನೀಡಲಾಗಿದೆ. ರಸಗೊಬ್ಬರಗಳ ಮೇಲೆ ಜಿಎಸ್‌ಟಿಯಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. ಕೃಷಿ ಯಂತ್ರೋಪಕರಣಗಳಲ್ಲಿ ತೆರಿಗೆ ಪ್ರಮಾಣ ಶೇ. 15,18ರಿಂದ ಶೇ. 12ಕ್ಕೆ ಇಳಿದಿದೆ. ಇದು ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 400 ಸರಕು ಹಾಗೂ 80 ಸೇವೆಗಳ ಮೇಲೆ ಜಿಎಸ್​ಟಿ ದರ ಕಡಿಮೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನೇಕ ರೀತಿಯಲ್ಲಿ ಪ್ರಯೋಜನವಾಗಿದೆ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.