ETV Bharat / business

ಅನ್​ಲಾಕ್​ ವೇಳೆ ಭಾರತಕ್ಕೆ ಹರಿದು ಬಂದ ವಿದೇಶಿ ವಿನಿಮಯ ಮೀಸಲು ಎಷ್ಟು ಗೊತ್ತೇ? - ಕರೆನ್ಸಿ ಮಾರುಕಟ್ಟೆ

ಕಳೆದ ವಾರ ತೀವ್ರ ಕುಸಿತ ಕಂಡಿದ್ದ ವಿದೇಶಿ ವಿನಿಮಯ ಮೀಸಲು ಈ ವಾರ 1.27 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ. 506.84 ಬಿಲಿಯನ್​ ಡಾಲರ್ ಗೆ ಏರಿಕೆಯಾಗಿದೆ. ಜೂ.19ರಂದು ಕೊನೆಗೊಂಡಿದ್ದ ಕಳೆದ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 2.08 ಬಿಲಿಯನ್ ಡಾಲರ್​ನಷ್ಟು ಇಳಿಕೆಯಾಗಿ 505.57 ಬಿಲಿಯನ್ ಡಾಲರ್​ಗೆ ಕುಸಿದಿತ್ತು ಎಂದು ಆರ್​ಬಿಐ ಅಂಕಿಂಶಗಳು ತಿಳಿಸಿವೆ.

Forex reserves
ವಿದೇಶಿ ವಿನಿಮಯ
author img

By

Published : Jul 4, 2020, 5:15 AM IST

ಮುಂಬೈ: ಕಳೆದ ವಾರದಲ್ಲಿ ತೀವ್ರ ಕುಸಿದ ಕಂಡಿದ್ದ ದೇಶದ ವಿದೇಶಿ ವಿನಿಮಯ ಸಂಗ್ರಹವು ಜೂನ್ 26ಕ್ಕೆ ಕೊನೆಗೊಂಡ ವಾರದಲ್ಲಿ 27 1.27 ಬಿಲಿಯನ್ ಏರಿಕೆ ಕಂಡು 506.84 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಆರ್‌ಬಿಐನ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಕಳೆದ ವಾರ ತೀವ್ರ ಕುಸಿತ ಕಂಡಿದ್ದ ವಿದೇಶಿ ವಿನಿಮಯ ಮೀಸಲು ಈ ವಾರ 1.27 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ. 506.84 ಬಿಲಿಯನ್​ ಡಾಲರ್​ಗೆ ಏರಿಕೆಯಾಗಿದೆ. ಜೂ.19ರಂದು ಕೊನೆಗೊಂಡಿದ್ದ ಕಳೆದ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 2.08 ಬಿಲಿಯನ್ ಡಾಲರ್​ನಷ್ಟು ಇಳಿಕೆಯಾಗಿ 505.57 ಬಿಲಿಯನ್ ಡಾಲರ್​ಗೆ ಕುಸಿದಿತ್ತು ಎಂದು ಆರ್​ಬಿಐ ಅಂಕಿಂಶಗಳು ತಿಳಿಸಿವೆ.

ಜೂನ್ 5ಕ್ಕೆ ಕೊನೆಗೊಂಡ ವಾರದಲ್ಲಿ ಮೊದಲ ಬಾರಿಗೆ ಮೀಸಲು ಅರ್ಧ ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಅದು 8.22 ಬಿಲಿಯನ್ ಡಾಲರ್​ಗೆ ಏರಿಕೆಯಾಗಿ 501.70 ಬಿಲಿಯನ್ ಡಾಲರ್​​ಗೆ ತಲುಪಿದೆ. ಇದು ಜೂನ್ 12ಕ್ಕೆ ಕೊನೆಗೊಂಡ ವಾರದಲ್ಲಿ ಜೀವಿತಾವಧಿಯ ಗರಿಷ್ಠ 507.64 ಬಿಲಿಯನ್ ಡಾಲರ್‌ ಮುಟ್ಟಿದೆ.

ಜೂನ್ 26ಕ್ಕೆ ಕೊನೆಗೊಂಡ ವಾರದಲ್ಲಿ ಒಟ್ಟಾರೆ ನಿಕ್ಷೇಪಗಳ ಪ್ರಮುಖ ಅಂಶವಾಗಿರುವ ವಿದೇಶಿ ಕರೆನ್ಸಿ ಆಸ್ತಿಗಳ (ಎಫ್‌ಸಿಎ) ಹೆಚ್ಚಳದಿಂದಾಗಿ ಮೀಸಲು ನಿಧಿ ಏರಿಕೆಯಾಗಿದೆ.

ಚಿನ್ನದ ಮೀಸಲು 707 ಮಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 33.52 ಬಿಲಿಯನ್ ಡಾಲರ್ ನಷ್ಟಾಗಿದೆ. ಐಎಂಎಫ್​ನಿಂದ ವಿಶೇಷವಾಗಿ ಹಿಂತೆಗೆಯಬಹುದಾದ ಹಕ್ಕುಗಳ ಮೊತ್ತ 3 ಮಿಲಿಯನ್ ಡಾಲರ್​ನಷ್ಟು ಕಡಿಮೆ ಮಾಡಲಾಗಿದ್ದು, 1.44 ಬಿಲಿಯನ್ ಡಾಲರ್​ಗೆ ಇಳಿಕೆಯಾಗಿದೆ. ಆದರೆ, ಐಎಂಎಫ್​ನಲ್ಲಿ ದೇಶದ ಮೀಸಲು ಸ್ಥಿತಿ 3 ಮಿಲಿಯನ್ ಡಾಲರ್​ನಷ್ಟು ಏರಿಕೆಯಾಗಿದ್ದು 4.27 ಬಿಲಿಯನ್​ಗೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.