ನವದೆಹಲಿ: ದಟ್ಟವಾದ ಮಂಜು ಹಬ್ಬಿ ಅಸ್ಪಷ್ಟ ಬೆಳಕಿನಿಂದಾಗಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಶನಿವಾರ 40ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವಿಳಂಬ ಕಂಡುಬಂತು.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಮಂದ ಬೆಳಕು ಮತ್ತು ಸಿಎಟಿ III ಬಿ ತರಬೇತಿ ಪಡೆದ ಪೈಲಟ್‌ಗಳಿಂದಾಗಿ ವಿಮಾನ ಸೇವೆಗಳಲ್ಲಿ ವಿಳಂಬವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಬೆಳಗ್ಗೆ 1.30ರ ಸುಮಾರಿಗೆ ಭಾರಿ ಮಂಜು ವಿಮಾನ ನಿಲ್ದಾಣವನ್ನು ಆವರಿಸಲಾರಂಭಿಸಿತ್ತು. ಕಡಿಮೆ ಗೋಚರತೆಯು ಬೆಳಗ್ಗೆ 7 ಗಂಟೆಯವರೆಗೆ ಇತ್ತು. ಈ ನಂತರ ಸಾಮಾನ್ಯ ಕಾರ್ಯಾಚರಣೆಗಳು ಪುನಾರಂಭಗೊಂಡವು.
ಇದನ್ನೂ ಓದಿ: ಕೊರೊನಾ ವೈರಸ್ ಕುರಿತು ಚೀನಾ ಮುಖ್ಯ ಮಾಹಿತಿ ಹಂಚಿಕೊಂಡಿಲ್ಲ: ಮತ್ತೆ ಗುಡುಗಿದ ಅಮೆರಿಕ
ದೆಹಲಿ ವಿಮಾನ ನಿಲ್ದಾಣವು ತಾಂತ್ರಿಕವಾಗಿ ಉತ್ತಮವಾದ ಸಿಎಟಿ (ವರ್ಗ) ಐಐಬಿ ಐಎಲ್ಎಸ್ ವ್ಯವಸ್ಥೆಯನ್ನು ಹೊಂದಿದೆ. ಇದು ರನ್‌ವೇ ಗೋಚರತೆ ಕೇವಲ 50 ಮೀಟರ್ ಇದ್ದಾಗಲೂ ಕಂಪ್ಲೈಂಟ್ ವಿಮಾನ ಮತ್ತು ತರಬೇತಿ ಪಡೆದ ಪೈಲಟ್‌ಗಳಿಗೆ ಇಳಿಯಲು ಅನುವು ಮಾಡಿಕೊಡುತ್ತದೆ.
ಈ ವರ್ಷ ನೂತನ ವಾಯು ಸಂಚಾರ ನಿಯಂತ್ರಣ ಟವರ್, ಥರ್ಮಲ್ ಇಮೇಜಿಂಗ್ ಕ್ಯಾಮರಾ ಮತ್ತು 24x7 ಸೋಷಿಯಲ್ ಮೀಡಿಯಾ ಕಮಾಂಡ್ ಸೆಂಟರ್ ಅನ್ನು ಮಂದ ಬೆಳಕಿನ ಕಾರ್ಯಾಚರಣೆ ನಿರ್ವಹಿಸಲು ಬಳಸಲಾಗುತ್ತಿದೆ.