ಬೆಂಗಳೂರು: ವಾಲ್ಮಾರ್ಟ್ ಒಡೆತನದ ಇಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಮಾರ್ಚ್‌ನಿಂದ ತನ್ನ ಪೂರೈಕೆ ಸರಪಳಿ ವಿಭಾಗದಲ್ಲಿ 23,000 ಜನರನ್ನು ವಿವಿಧ ಸಾಮರ್ಥ್ಯಗಳಲ್ಲಿ ನೇಮಿಸಿಕೊಂಡಿದೆ ಎಂದು ಕಂಪನಿ ತಿಳಿಸಿದೆ.
ವೈರಸ್ ವಿರುದ್ಧ ಹೋರಾಡಲು ಜನರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ದೇಶಾದ್ಯಂತ ಇ - ಕಾಮರ್ಸ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ನಮ್ಮ ಪೂರೈಕೆ ಸರಪಳಿಯನ್ನು ಹೆಚ್ಚಿಸುವ ಅಗತ್ಯವಿದೆ. ಹೀಗಾಗಿ, ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ಪರೀಕ್ಷಾ ಸಮಯದಲ್ಲಿ ಅವರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಎಲ್ಲ ಹೊಸ ನೇಮಕಾತಿಗಳನ್ನು ನಮ್ಮ ಆರೋಗ್ಯ ಮತ್ತು ಕ್ಷೇಮ ಉಪಕ್ರಮಗಳೊಂದಿಗೆ ಕೈಗೊಳ್ಳಲಾಗುವುದು ಎಂದು ಫ್ಲಿಪ್‌ಕಾರ್ಟ್‌ನ ಸಪ್ಲೈ ಚೈನ್‌ನ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಹೇಳಿದರು.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ದೇಶಾದ್ಯಂತ ರಾಜ್ಯಗಳು ಇಕಾಮರ್ಸ್ನ ಅನಗತ್ಯ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವುದನ್ನು ನಿಷೇಧಿಸಿದ ವೇಳೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ಅನಿವಾರ್ಯವಲ್ಲದ ವಿಭಾಗದಲ್ಲಿ ತನ್ನ ಶೇ 90ಕ್ಕಿಂತ ಹೆಚ್ಚಿನ ಆರ್ಡರ್ಗಳನ್ನು ಪಡೆಯುವ ಫ್ಲಿಪ್‌ಕಾರ್ಟ್, ಆನ್‌ಲೈನ್ ದಿನಸಿಗಳ ಬೇಡಿಕೆಯ ಏರಿಕೆ ಪೂರೈಸಲು ತನ್ನ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ. ಹೆಚ್ಚಿನ ಜನರು ಎರಡನೇ ಕೋವಿಡ್ ಅಲೆಯಿಂದ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಈ ತ್ರೈಮಾಸಿಕದಲ್ಲಿ ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಇತರ ನಗರಗಳಲ್ಲಿ ದಿನಸಿಗಾಗಿ ತನ್ನ ಸ್ಥಳೀಯ ಕೇಂದ್ರಗಳ ಸಾಮರ್ಥ್ಯವನ್ನು 8 ಲಕ್ಷ ಚದರ ಅಡಿ ವಿಸ್ತರಿಸಲು ಯೋಜಿಸಿದೆ ಎಂದು ಕಂಪನಿ ತಿಳಿಸಿದೆ.