ETV Bharat / business

3.6 ಬಿಲಿಯನ್ ಡಾಲರ್ ಹೂಡಿಕೆ ಸಂಗ್ರಹಿಸಿದ ಫ್ಲಿಪ್​ಕಾರ್ಟ್: ಗ್ರಾಹಕ ಇಂಟರ್ನೆಟ್ ವ್ಯವಸ್ಥೆ ಅಭಿವೃದ್ಧಿಗೆ ಬಳಕೆ

author img

By

Published : Jul 12, 2021, 4:21 PM IST

ಗ್ರಾಹಕರಿಗೆ ಸುಲಭ ಲಭ್ಯತೆ ಮತ್ತು ಮೌಲ್ಯಗಳೊಂದಿಗೆ ಭಾರತದಲ್ಲಿ ಗ್ರಾಹಕ ಅಂತರ್ಜಾಲ ಪರಿಸರ ವ್ಯವಸ್ಥೆಯನ್ನು ಪರಿವರ್ತನೆಗೊಳಿಸಲು ಫ್ಲಿಪ್‌ಕಾರ್ಟ್‌ ಬದ್ಧವಾಗಿದ್ದು, ಹೀಗಾಗಿ 3.6 ಬಿಲಿಯನ್‌ ಹೂಡಿಕೆಯನ್ನು ಸಂಗ್ರಹಿಸಿದ್ದಾಗಿ ಹೇಳಿದೆ.

ಫ್ಲಿಪ್​ಕಾರ್ಟ್
Flipkart

ಬೆಂಗಳೂರು: ಫ್ಲಿಪ್​ಕಾರ್ಟ್ ಏಫ್​ ಗ್ರೂಪ್‌ ಭಾರತದಲ್ಲಿ ಡಿಜಿಟಲ್‌ ವಾಣಿಜ್ಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನೆಲೆಗೆ ತರುವ ಉದ್ದೇಶದಿಂದ 3.6 ಬಿಲಿಯನ್‌ ಹೂಡಿಕೆಯನ್ನು ಸಂಗ್ರಹಿಸಿದ್ದಾಗಿ ಹೇಳಿದೆ. ಈ ಹೂಡಿಕೆಯನ್ನು ಪ್ರಮುಖ ಜಾಗತಿಕ ಹೂಡಿಕೆದಾರರಾದ ಸವರಿನ್‌ ಫಂಡ್​ಗಳು, ಖಾಸಗಿ ಇಕ್ವಿಟಿ ಮತ್ತು ವಾಲ್‌ಮಾರ್ಟ್‌ ಏಫ್​ನ ಪೂರಕ ಹೂಡಿಕೆ ವ್ಯವಸ್ಥೆಗಳ ಮೂಲಕ ಮಾಡಲಾಗಿದೆ.

ಹೂಡಿಕೆ ಕ್ರೋಢೀಕರಣವನ್ನು ಹಣಕಾಸು ಹೂಡಿಕೆದಾರರಾದ ಜಿಐಸಿ, ಕೆನಡಾದ ನಿವೃತ್ತಿ ವೇತನ ಹೂಡಿಕೆ ಮಂಡಳಿ (ಸಿಪಿಪಿ ಇನ್‌ವೆಸ್ಟ್‌ಮೆಂಟ್ಸ್‌), ಸಾಫ್ಟ್‌ ಬ್ಯಾಂಕ್‌ ವಿಷನ್‌ ಫಂಡ್‌ 2 ಮತ್ತು ವಾಲ್ ಮಾರ್ಟ್ ಮತ್ತು ಡಿಸ್‌ರಪ್ಟ್‌ ಎಡಿಯ ಸವರಿನ್‌ ಫಂಡ್​ಗಳು, ಖತಾರ್‌ ಇನ್‌ವೆಸ್ಟ್‌ ಮೆಂಟ್‌ ಅಥಾರಿಟಿ, ಖಝಾನಾ ನಾಸಿನಲ್‌ ಬೆರ್ಹಾದ್, ಮರ್ಕ್ಯೂಯಿ ಇನ್‌ವೆಸ್ಟರ್ಸ್‌ ಟೀಸೆಂಟ್‌, ವಿಲ್ಲೋಗ್ಬಿ ಕ್ಯಾಪಿಟಲ್‌, ಅಂತಾರಾ ಕ್ಯಾಪಿಟಲ್‌, ಫ್ರಾಂಕ್ಲಿನ್‌ ಟೆಂಪ್ಲೆಟನ್‌ ಮತ್ತು ಟೈಗರ್‌ ಗ್ಲೋಬಲ್‌ಗಳ ಮೂಲಕ ಸಂಗ್ರಹಿಸಲಾಗಿದೆ. ಈ ಗುಂಪುಗಳ ಒಟ್ಟು ಹೂಡಿಕೆಯ ಅನಂತರದ ಮೊತ್ತವು 37.6 ಬಿಲಿಯನ್‌ ಆಗಿದೆ.

ಈ ಬೆಳವಣಿಗೆಯ ಕುರಿತಾಗಿ ಪ್ರತಿಕ್ರಿಯಿಸಿದ ಫ್ಲಿಪ್‌ಕಾರ್ಟ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಕಲ್ಯಾಣ್‌ ಕೃಷ್ಣಮೂರ್ತಿ ಅವರು, ಗ್ರಾಹಕರಿಗೆ ಸುಲಭ ಲಭ್ಯತೆ ಮತ್ತು ಮೌಲ್ಯಗಳೊಂದಿಗೆ ಭಾರತದಲ್ಲಿ ಗ್ರಾಹಕ ಅಂತರ್ಜಾಲ ಪರಿಸರ ವ್ಯವಸ್ಥೆಯನ್ನು ಪರಿವರ್ತನೆಗೊಳಿಸಲು ಫ್ಲಿಪ್‌ಕಾರ್ಟ್‌ ಬದ್ಧವಾಗಿದೆ. ಹೂಡಿಕೆದಾರರ ಹೂಡಿಕೆಯು ಭಾರತದಲ್ಲಿ ಡಿಜಿಟಲ್‌ ವಾಣಿಜ್ಯದ ಮೇಲಿನ ಭರವಸೆ ಮತ್ತು ಫ್ಲಿಪ್‌ಕಾರ್ಟ್‌ ಮೇಲಿನ ಭರವಸೆಯನ್ನು ಪ್ರತಿಬಿಂಬಿಸುತ್ತದೆ. ನಾವು ಗ್ರಾಹಕರ ಸೇವೆಯಲ್ಲಿ ತೊಡಗಿಕೊಂಡಿದ್ದು, ಇದು ಕಿರಾಣಿ ಅಂಗಡಿಗಳು ಸೇರಿದಂತೆ ಭಾರತದ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ವ್ಯಾಪಾರ ನಡೆಸುವ ಉದ್ಯಮದಾರರ ಅಭಿವೃದ್ಧಿಗೆ ನೆರವು ನೀಡಲಿದೆ. ನಾವು ಮೇಡ್‌ ಇನ್‌ ಇಂಡಿಯಾ ತಂತ್ರಜ್ಞಾನದೊಂದಿಗೆ ಹೊಸ ಹೊಸ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ಗ್ರಾಹಕರ ಅನುಭವಗಳನ್ನು ಪರಿವರ್ತಿಸುವುದರೊಂದಿಗೆ ವಿಶ್ವ ದರ್ಜೆಯ ಪೂರೈಕೆ ವ್ಯವಸ್ಥೆಯೊಂದನ್ನು ನಡೆಸುವಲ್ಲಿ ಮುಂದುವರಿಯಲಿದ್ದೇವೆ ಎಂದು ಹೇಳಿದ್ದಾರೆ.

ಫ್ಲಿಪ್‌ಕಾರ್ಟ್‌ ಭಾರತದಲ್ಲಿ ತ್ವರಿತವಾಗಿ ಬೆಳವಣಿಗೆಯಾಗುತ್ತಿರುವ ಗ್ರಾಹಕ ವಲಯಕ್ಕೆ ಬೇಕಾದ ರೀತಿಯಲ್ಲಿ ತಂತತ್ರಜ್ಞಾನ, ಪೂರೈಕೆ ವ್ಯವಸ್ಥೆ, ಮೂಲಸೌಕರ್ಯ ವ್ಯವಸ್ಥೆಗಳನ್ನು ಸ್ಥಾಪಿಸುವತ್ತ ಮುಂದುವರಿಯಲಿದೆ. ಅನೌಪಚಾರಿಕ ವಾಣಿಜ್ಯ ವಿಭಾಗಗಳಿಗೆ ತಂತ್ರಜ್ಞಾನದ ಶಕ್ತಿಯನ್ನು ಬಳಸುವುದಕ್ಕಾಗಿ ಈ ಗುಂಪು ನೆರವು ನೀಡಲಿದೆ. ಇದರಲ್ಲಿ ಸಣ್ಣ ಉದ್ದಿಮೆದಾರರಿಗೆ ಅವಕಾಶವನ್ನು ನೀಡಲಿದ್ದು, ಕಿರಾಣಿ ಅಂಗಡಿಗಳನ್ನು ಡಿಜಟಲೀಕರಣ ಮಾಡುವ ಮತ್ತು ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಹೇಳಿದರು.

ಸಿಪಿಪಿ ಹೂಡಿಕೆಯ ಮೂಲ ಉದ್ದೇಶ ಏಷ್ಯಾದ ಗೃಹ ಬಳಕೆಯ ಮೇಲೆ ಕೇಂದ್ರೀಕೃತವಾಗಿದೆ. ಮುಂದಿನ ದಶಕಗಳಲ್ಲಿ ಮಧ್ಯಮ ವರ್ಗದ ಬೆಳವಣಿಗೆ, ಹೆಚ್ಚಿದ ಇಂಟರ್ನೆಟ್‌ ಬಳಕೆಯ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ ಈ ಬೆಳವಣಿಗೆಯ ಪ್ರಮುಖ ನೇತಾರನಾಗಲಿದೆ ಎಂದು ನಾವು ನಂಬಿದ್ದೇವೆ ಎಂದು ಸಿಪಿಪಿ ಇನ್‌ವೆಸ್ಟ್‌ ಮೆಂಟ್‌ನ ಏಷ್ಯಾದ ಫಂಡಮೆಂಟಲ್‌ ಈಕ್ವಿಟೀಸ್‌ನ ಮುಖ್ಯಸ್ಥರು ಮತ್ತು ಆಡಳಿತ ನಿರ್ದೇಶಕರಾದ ಆಗಸ್‌ ಟ್ಯಾಂಡಿಯೊನೊ ಅವರು ಹೇಳಿದ್ದಾರೆ.

ಸಾಫ್ಟ್‌ ಬ್ಯಾಂಕ್‌ನ ಹೂಡಿಕೆ ಸಲಹೆಗಾರರ ಪಾಲುದಾರರಾದ ಲ್ಯಾಡಿಯಾ ಜೆಟ್‌ ಅವರು ಹೇಳುವಂತೆ ಏಷ್ಯಾದ ಅತಿ ದೊಡ್ಡ ಇ-ಕಾಮರ್ಸ್‌ ಹೂಡಿಕೆಯ ನಮ್ಮ ವೇದಿಕೆ ಮೂಲಕ ಈ ಪ್ರದೇಶದಲ್ಲಿ ಡಿಜಿಟಲ್‌ ವಾಣಿಜ್ಯವು ಬೆಳವಣಿಗೆ ಪಥದಲ್ಲಿರುವುದನ್ನು ಸಾಫ್ಟ್‌ ಬ್ಯಾಂಕ್‌ ಮಂಡಳಿ ಗಮನಿಸಿದೆ. ಇದು ಯುವ ಗ್ರಾಹಕರ ಬಯಕೆಯಂತೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಯ್ಕೆಯನ್ನು ಮಾಡಲು ಪೂರಕವಾಗಿದ್ದು, ಈ ಮೂಲಕ ಫ್ಲಿಪ್‌ಕಾರ್ಟ್‌ ಭಾರತd 5 ಟ್ರಿಲಿಯನ್‌ ಆರ್ಥಿಕತೆಯನ್ನು ಹೊಂದಬೇಕೆನ್ನುವ ಕನಸಿಗೆ ಪೂರಕವಾಗಿದೆ ಎಂದಿದ್ದಾರೆ.

ಫ್ಲಿಪ್‌ಕಾರ್ಟ್‌ನಲ್ಲಿ ನಾವೇಕೆ ಹೂಡಿಕೆ ಮಾಡಿದ್ದೇವೆ ಮತ್ತು ಅದನ್ನು ಇನ್ನೂ ಮುಂದುವರಿಸಿದ್ದೇವೆ ಎಂದ್ರೆ ಫ್ಲಿಪ್‌ಕಾರ್ಟ್‌ನ ವ್ಯವಹಾರವು ದೊಡ್ಡ ವ್ಯವಹಾರವಾಗಿದ್ದು ಅಪೂರ್ವ ಬೆಳವಣಿಗೆಯನ್ನು ಹೊಂದಿದೆ. ಜತೆಗೆ ಇದು ಒಟ್ಟಾರೆಯಾಗಿ ಭಾರತದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಾಲ್‌ಮಾರ್ಟ್ ಇಂಟರ್ ನ್ಯಾಷನಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರಾದ ಜ್ಯೂಡಿತ್‌ ಮೆಕೆನ್ನಾ ಅವರು ಹೇಳಿದ್ದಾರೆ.

ಭಾರತದಲ್ಲಿ ಡಿಜಿಟಲೀಕರಣ ಮತ್ತು ಇ ಕಾಮರ್ಸ್‌ನ ಅದ್ಭುತ ಬೆಳವಣಿಗೆಯ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ. ಈ ಬೆಳವಣಿಗೆಯಿಂದ ಲಾಭ ಪಡೆಯಲು ಫ್ಲಿಪ್‌ಕಾರ್ಟ್‌ ಉತ್ತಮ ಸ್ಥಾನದಲ್ಲಿದೆ ಎಂಬುದನ್ನು ನಾವು ನಂಬಿದ್ದೇವೆ ಅಂತಾ ಫ್ರಾಂಕ್ಲಿನ್‌ ಟೆಂಪಲ್ಟನ್‌ ಎಮರ್ಜಿಂಗ್‌ ಮಾರ್ಕೆಟ್ಸ್‌ ಇಕ್ವಿಟಿಯ ಅಧಿಕಾರ ಕ್ಷೇತ್ರ ನಿರ್ವಹಣೆಯ ನಿರ್ದೇಶಕ ಸುಕುಮಾರ್‌ ರಾಜಾಹ್‌ ಹೇಳಿದ್ದಾರೆ.

ಭಾರತದಾದ್ಯಂತ ಫ್ಲಿಪ್‌ಕಾರ್ಟ್‌ 350 ಮಿಲಿಯನ್‌ ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, ಪ್ರಮುಖ ವಿಭಾಗಗಳಾದ ಫ್ಯಾಶನ್‌, ಪ್ರವಾಸ, ದಿನಸಿ ವಸ್ತುಗಳು ಮುಂತಾದವುಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದು ಭಾರತದಲ್ಲಿ ಪ್ರಬುದ್ಧಗೊಳ್ಳುತ್ತಿರುವ ಡಿಜಿಟಲ್‌ ವಾಣಿಜ್ಯ ಉದ್ಯಮ ಕ್ಷೇತ್ರವನ್ನು ಪ್ರತಿಬಿಂಬಿಸುತ್ತದೆ. ಸಮೂಹದ ಫ್ಯಾಶನ್‌ ಘಟಕವಾದ ಮಿಂತ್ರಾ, ಈ ವಿಭಾಗದಲ್ಲಿ ನಾಯಕನಾಗಿ ಹೊರಹೊಮ್ಮಿದ್ದು, ಫ್ಲಾಶನ್‌ ಕ್ಷೇತ್ರದಲ್ಲಿ ಸಮಗ್ರ ಮತ್ತು ಅತ್ಯಾಧುನಿಕ ಆಯ್ಕೆಗಳೊಂದಿಗೆ ಇತ್ತೀಚಿನ ಸಂಗ್ರಹಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಇದರೊಂದಿಗೆ ಗುಂಪಿನ ಮೂಲ ಸಾಮರ್ಥ್ಯವಾದ ಫ್ಲಿಪ್‌ಕಾರ್ಟ್‌ನ ಪೂರೈಕೆ ವ್ಯವಸ್ಥೆ ಇಕಾರ್ಟ್‌, ವೇರ್‌ಹೌಸ್‌ಗಳಿಗೆ ಮೂಲಸೌಕರ್ಯ ಹೂಡಿಕೆಯೊಂದಿಗೆ 1ಲಕ್ಷಕ್ಕೂ ಮಿಕ್ಕಿ ಉದ್ಯೋಗಿಗಳನ್ನು ಹೊಂದಿದ್ದು, ಭಾರತದ ಶೇ.90ಕ್ಕೂ ಹೆಚ್ಚಿನ ಪಿನ್‌ಕೋಡ್‌ಗಳಿಗೆ ಸಮರ್ಥವಾಗಿ ಪೂರೈಕೆ ಮಾಡುತ್ತಿದೆ.

ಫ್ಲಿಪ್‌ಕಾರ್ಟ್‌ ಮಾರುಕಟ್ಟೆ ತಾಣದಲ್ಲಿ 3 ಲಕ್ಷಕ್ಕೂ ಅಧಿಕ ನೋಂದಾಯಿತ ಮಾರಾಟಗಾರರಿದ್ದು, ಇವರಲ್ಲಿ ಶೇ. 60 ರಷ್ಟಕ್ಕೂ ಹೆಚ್ಚಿನವರು 2ನೇ ಹಂತದ ನಗರದವರು. ಜತೆಗೆ ಭಾರತದಾದ್ಯಂತ 1.6 ಮಿಲಿಯನ್‌ಗೂ ಅಧಿಕ ಕಿರಾಣಿ ಅಂಗಡಿಯವರೊಂದಿಗೆ ಪ್ಲಿಪ್‌ಕಾರ್ಟ್‌ ಸಂಯೋಜನೆ ಹೊಂದಿದ್ದು, ಕೊನೆಯವರೆಗೆ ಪೂರೈಕೆ ವ್ಯವಸ್ಥೆ, ಕಿರಾಣಿಗಳಿಗೆ ಪೂರಕ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ. ಸಣ್ಣ ಉದ್ದಿಮೆದಾರರಿಗೆ, ಸಣ್ಣ ಸಮುದಾಯ ಇತ್ಯಾದಿ 7.5 ಲಕ್ಷಕ್ಕೂ ಅಧಿಕ ಕುಶಲಕರ್ಮಿಗಳಿಗೆ ಫ್ಲಿಪ್‌ಕಾರ್ಟ್‌ 'ಸಮರ್ಥ್' ಕಾರ್ಯಕ್ರಮದ ಮೂಲಕ ನೆರವು ನೀಡುತ್ತಿದೆ.

ಇನ್ನು ಫೋನ್‌ಪೇ ಕೂಡ ಹೆಚ್ಚಿನ ಪಾಲುದಾರಿಕೆಯನ್ನು ಹೊಂದಿದೆ. ಇದರಲ್ಲಿ 300 ಮಿಲಿಯನ್‌ಗೂ ಹೆಚ್ಚು ಬಳಕೆದಾರರಿದ್ದು 2, 3 ನೇ ಹಂತದ ನಗರಗಳಲ್ಲೇ ಮಾಸಿಕ 1 ಬಿಲಿಯನ್‌ ವಹಿವಾಟು ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.