ETV Bharat / business

ದೇಶದಲ್ಲಿ ಮತ್ತಷ್ಟು ಸಂಕಷ್ಟ: ಆರ್ಥಿಕ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ ಪಯಣ - Fitch Ratings revises India's outlook

ಭಾರತದ ಆರ್ಥಿಕತೆ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ ಪಯಣಿಸುತ್ತಿದೆ ಎಂದು ಪರಿಷೃತ ಫಿಚ್ ರೇಟಿಂಗ್ಸ್​​​​​​​ ಗುರುವಾರ ಆತಂಕ ವ್ಯಕ್ತಪಡಿಸಿದೆ.

Fitch Ratings revises India's outlook to negative from stable
ವಾಣಿಜ್ಯ
author img

By

Published : Jun 18, 2020, 3:02 PM IST

ನವದೆಹಲಿ: ಸಾಂಕ್ರಾಮಿಕ ರೋಗ ಕೊರೊನಾ ವೈರಸ್​​​ ದೇಶದ ಅಭಿವೃದ್ಧಿಯನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆ. ಅಲ್ಲದೇ, ಸಾರ್ವಜನಿಕ ಸಾಲದ ಹೊರೆಗೆ ಸಂಬಂಧಿಸಿದ ಸವಾಲುಗಳು ಎದುರಾಗಿವೆ. ಹೀಗಾಗಿ, ಭಾರತದ ಆರ್ಥಿಕತೆ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ ಪಯಣಿಸುತ್ತಿದೆ ಎಂದು ಪರಿಷೃತ ಫಿಚ್ ರೇಟಿಂಗ್ಸ್​​​​​​​ ಗುರುವಾರ ತಿಳಿಸಿದೆ.

ದೇಶದ ಸಾರ್ವಭೌಮ ರೇಟಿಂಗ್ ಅನ್ನು 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 'ಬಾ-2'ಗಿನ ಕಡಿಮೆ ಹೂಡಿಕೆ ದರ್ಜೆಗೆ ಇಳಿಸಿದ ಕುರಿತು ಈ ತಿಂಗಳ ಆರಂಭದಲ್ಲೇ ರೇಟಿಂಗ್​ ಏಜೆನ್ಸಿ ಮೂಡೀಸ್​ ತಿಳಿಸಿತ್ತು. ಇದಾದ ನಂತರ ಆರ್ಥಿಕತೆ ಈ ಪರಿಸ್ಥಿತಿಗೆ ಬಂದಿದೆ.

ಭಾರತದ ಪಿಚ್​​ ರೇಟಿಂಗ್​ ಹೇಗಿದೆ ಎಂಬುದರ ಕುರಿತು ದೀರ್ಘಕಾಲೀನ ವಿದೇಶಿ - ಕರೆನ್ಸಿ ನೀಡುವವರ ಡೀಫಾಲ್ಟ್​​ ರೇಟಿಂಗ್ (ಐಡಿಆರ್)​​​​​ ಸ್ಥಿರದಿಂದ ಋಣಾತ್ಮಕಕ್ಕೆ ತಿರುಗಿದೆ. ಈ ಕುರಿತು ಪರಿಷ್ಕರಿಸಿ ಮತ್ತು ರೇಟಿಂಗ್​ ಅನ್ನು ಬೆಟರ್​ ಬಿಸಿನೆಸ್​​ ಬ್ಯರೋ (ಬಿಬಿಬಿ) ದೃಢಪಡಿಸಿದೆ ಎಂದು ಪಿಚ್​ ರೇಟಿಂಗ್​ ಏಜೆನ್ಸಿ ಹೇಳಿದೆ.

ಮಾರ್ಚ್​​ 2021ಕ್ಕೆ ಅಂತಿಮವಾಗಲಿರುವ ಆರ್ಥಿಕ ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳು ಶೇ. 5ರಷ್ಟು ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಇದಕ್ಕೆಲ್ಲ ಕಾರಣ ಕೊರೊನಾ ಪ್ರೇರಿತ ಲಾಕ್​ಡೌನ್​. 2022ರ ಆರ್ಥಿಕ ವರ್ಷದಲ್ಲಿ ಶೇ.9.5ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭರವಸೆ ಮೂಡಿಸಿದೆ.

ಹೆಚ್ಚಿನ ಸಾರ್ವಜನಿಕ ಸಾಲದ ಹೊರೆಗೆ ಸಂಬಂಧಿಸಿದ ನೂರಾರು ಸವಾಲುಗಳನ್ನು ಎದರಿಸಬೇಕಿದೆ. ಪ್ರಸ್ತುತ ಮೂಲ ಆದಾಯಕ್ಕೆ ಕುತ್ತು ಬಿದ್ದಿರುವ ಪರಿಣಾಮ ಆರ್ಥಿಕತೆ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಅದು ಹೇಳಿದೆ. ಅದಷ್ಟೇ ಅಲ್ಲ, ಕೋವಿಡ್​​-19 ಪ್ರಕರಣಗಳು ನಿರಂತರ ಏರುತ್ತಿರುವ ಪರಿಣಾಮ ಸಾಕಷ್ಟು ಅಪಾಯಗಳಿಗೆ ಎಡೆಮಾಡಿಕೊಡುತ್ತದೆ ಎಂದು ಮುನ್ಸೂಚನೆ ನೀಡಿದೆ.

ವಿಶೇಷವಾಗಿ ಹಣಕಾಸು ಕ್ಷೇತ್ರದಲ್ಲಿ ಈ ಹಿಂದೆ ಅಂದುಕೊಂಡಂತೆ ಭಾರತವು ಶೇ.6 ರಿಂದ 7ರವರೆಗೆ ನಿರಂತರ ಬೆಳವಣಿಗೆ ದರಕ್ಕೆ ಮರಳಲಿದೆಯೇ, ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್, ಭಾರತದ ಒಟ್ಟು ದೇಶೀಯ ಉತ್ಪನ್ನವನ್ನು (ಜಿಡಿಪಿ) 2021 ರಲ್ಲಿ ಶೇ.4ರಷ್ಟು ಸಂಕುಚಿತಗೊಳಿಸಿದೆ. ಮತ್ತು ಅದು 2022ರ ಆರ್ಥಿಕ ವರ್ಷದಲ್ಲಿ ಶೇ 8.7 ರಷ್ಟು ಬೆಳವಣಿಗೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಆದಾಯದ ಮೇಲಿನ ತೀವ್ರ ಬೆಳವಣಿಗೆ ಮಂದಗತಿ, ಹಣಕಾಸಿನ ಕೊರತೆ ಮತ್ತು ಸಾರ್ವಜನಿಕ ವಲಯದ ಸಾಲ ಅನುಪಾತಗಳ ಪ್ರಭಾವದಿಂದಾಗಿ, ಸರ್ಕಾರದ ಖರ್ಚು ನಿಗ್ರಹದ ಹೊರತಾಗಿಯೂ ಭಾರತದ ಹಣಕಾಸಿನ ಮಾಪನಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಸರ್ಕಾರದ ಸಾಲದ ಪ್ರಮಾಣವು 2020-21 ಆರ್ಥಿಕ ವರ್ಷದಲ್ಲಿ ಶೇ.71 ರಿಂದ 84.5ಕ್ಕೆ ಏರಲಿದೆ ಎಂದು ನಿರೀಕ್ಷಿಸುತ್ತದೆ.

ಅಲ್ಲದೆ, ಭಾರತದ ಮಧ್ಯಮ ಅವಧಿಯ ಜಿಡಿಪಿ ಬೆಳವಣಿಗೆ ಬ್ಯಾಂಕಿಗ್​ ವಲಯದಲ್ಲಿ ಹೊಸ ಸವಾಲುಗಳು ಸೃಷ್ಟಿಯಾಗಲಿವೆ. ಹಾಗೆಯೇ ಹಣಕಾಸು ಕಂಪನಿಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದಿದೆ. ಹೀಗಾಗಿ, ಹಣಕಾಸಿನ ತೀವ್ರ ಕೊರತೆ ಉಂಟಾಗಲಿದೆ. ಇದು ಅಪಾಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.