ನವದೆಹಲಿ: ದೇಶದಲ್ಲಿ ಕೋವಿಡ್ ಅಬ್ಬರದಿಂದ ಜನ ಸಂಕಷ್ಟ ಅನುಭಿಸುತ್ತಿದ್ದಾರೆ. ಇದರಿಂದ ಇನ್ನೂ ಹೊರ ಬಾರದೆ ಪರದಾಡುತ್ತಿರುವ ನಡುವೆಯೇ ಸಹಿಸುದ್ದಿಯೊಂದು ಹೊರಬಿದ್ದಿದೆ. ಭಾರತದ ಆರ್ಥಿಕ ಸಂಪತ್ತು 2020 ರಲ್ಲಿ ಶೇಕಡಾ 11 ರಷ್ಟು ಬೆಳವಣಿಗೆಯೊಂದಿಗೆ 3.4 ಟ್ರಿಲಿಯನ್ ಡಾಲರ್ ಗೆ ತಲುಪಿದೆ ಎಂದು ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆ ಹೇಳಿದೆ.
ಭಾರತದ ಆರ್ಥಿಕ ಸಂಪತ್ತಿನಲ್ಲಿ ಶೇ.11 ರಷ್ಟು ಬೆಳವಣಿಗೆ 2020ಕ್ಕೆ 5 ವರ್ಷಗಳ ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರಕ್ಕೆ ಸಮವಾಗಿದೆ ಎಂದು ಬಿಸಿಜಿ ನೀಡಿರುವ ವರದಿಯಲ್ಲಿ ಸ್ಪಷ್ಟಪಡಿಸಿದೆ. ವ್ಯಕ್ತಿಯೋರ್ವನ ಹೊಣೆಗಾರಿಕೆಗಳು ಹಾಗೂ ಚಿನ್ನಾಭರಣಗಳಂತಹ ನೈಜ ಸಂಪತ್ತನ್ನು ಹೊರತುಪಡಿಸಿ ಇರುವ ಒಟ್ಟಾರೆ ಸಂಪತ್ತನ್ನು ಆರ್ಥಿಕ ಸಂಪತ್ತು ಎನ್ನಲಾಗುತ್ತದೆ. ಆರ್ಥಿಕ ಸಂಪತ್ತು ಏರಿಕೆಯಾಗಿರುವುದಕ್ಕೆ ಪೂರಕವೆಂಬಂತೆ ಕಳೆದ ಏಪ್ರಿಲ್ ನಿಂದ ಸ್ಟಾಕ್‌ಗಳಲ್ಲಿ ಏರಿಕೆ ಮುಂದುವರೆದಿದೆ.
5 ವರ್ಷಗಳ ಕಾಲ ಆರ್ಥಿಕ ಸಂಪತ್ತಿನಲ್ಲಿ ವೇಗವಾದ ವಿಸ್ತರಣೆಯನ್ನು ಕಾಣಲಿದ್ದೇವೆ. 2025 ರ ವೇಳೆಗೆ ಈ ಬೆಳವಣಿಗೆ ದರ 5.5 ಟ್ರಿಲಿಯನ್ ಗೆ ತಲುಪುವ ವೇಳೆಗೆ ಶೇ.10 ರಷ್ಟು ಕುಸಿತ ಕಾಣಲಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ. ವೈಯಕ್ತಿಕ ಬೆಳವಣಿಗೆಯ ಶೇಕಡಾವಾರಿನಲ್ಲಿ ಭಾರತ 2025 ರ ವೇಳೆಗೆ ಮುನ್ನಡೆ ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ರಿಯಲ್ ಎಸ್ಟೇಟ್, ಗ್ರಾಹಕ ಬಳಕೆ ವಸ್ತುಗಳು, ಬೆಲೆಬಾಳುವ ವಸ್ತುಗಳು, ಚಿನ್ನಾಭರಣಗಳ ಸೇರಿದಂತೆ ರಿಯಲ್ ಅಸೆಟ್‌ಗಳ ದೃಷ್ಟಿಯಿಂದ ಇವುಗಳ ಮೌಲ್ಯ 2020 ರಲ್ಲಿ 12.4 ಟ್ರಿಲಿಯನ್ ಗೆ ಅಂದರೆ ಶೇ.14 ರಷ್ಟು ಏರಿಕೆ ಕಂಡಿದೆ.