ETV Bharat / business

ಬ್ಲ್ಯಾಕ್​ ಮನಿ, ಬೇನಾಮಿ ಆಸ್ತಿ ಸೇರಿ 14 ತೆರಿಗೆ ಕಾಯ್ದೆಗಳ ತಿದ್ದುಪಡಿ: ನಿರ್ಮಲಾ ಸೀತಾರಾಮನ್​

author img

By

Published : Jul 18, 2019, 7:18 PM IST

ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, ಕಪ್ಪು ಹಣ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಹಣಕಾಸು ಕಾಯ್ದೆ- 2015, ಹಣಕಾಸು ಕಾಯ್ದೆ 2004 ಮತ್ತು ಬೇನಾಮಿ ಕಾಯ್ದೆಗಳು ತಿದ್ದುಪಡಿ ಮಾಡಲಾಗುತ್ತಿರುವ ಏಳು ನೇರ ತೆರಿಗೆ ಕಾನೂನುಗಳಲ್ಲಿ ಸೇರಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಪರೋಕ್ಷ ತೆರಿಗೆಯನ್ನು ಇನ್ನಷ್ಟು ಸರಳೀಕರಣಗೊಳಿಸಲು ಇದಕ್ಕೆ ಸಂಬಂಧಿಸಿದ ಏಳು ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿದಂತೆ ಐದು ಪ್ರಮುಖ ವಿಭಾಗಗಳಲ್ಲಿ ಹಣಕಾಸು ಮಸೂದೆಯ ಮೂಲಕ ಕಾನೂನುಗಳಿಗೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಲೋಕಸಭೆಯಲ್ಲಿ ಅವರು ತಿಳಿಸಿದರು.

ಪರೋಕ್ಷ ತೆರಿಗೆಗೆ ಸಂಬಂಧಿಸಿದ ಏಳು ಕಾಯ್ದೆಗಳ ತಿದ್ದುಪಡಿ ಹೊರತಾಗಿ, ನೇರ ತೆರಿಗೆಗೆ ಸಂಬಂಧಿಸಿದ 7 ಕಾನೂನುಗಳಿಗೂ ಸರ್ಕಾರ ಬದಲಾವಣೆಗಳನ್ನು ತರಲಿದೆ. ಬದಲಾವಣೆ ಆಗಲಿರುವ ಕಾನೂನುಗಳಲ್ಲಿ ಪರೋಕ್ಷ ತೆರಿಗೆ ವಿಧಾನವು ಹೆಚ್ಚು ಸರಳ ಹಾಗೂ ಪರಿಣಾಮಕಾರಿ ಆಗಿರಲಿವೆ ಎಂದು ಭರವಸೆ ನೀಡಿದ್ದಾರೆ.

ಮೇಕ್ ಇನ್ ಇಂಡಿಯಾದ ಕಾರ್ಯಸೂಚಿಯನ್ನು ಇನ್ನಷ್ಟು ಬಲಗೊಳಿಸಲು ಹಾಗೂ ದೇಶದ ಆಂತರಿಕ ಉತ್ಪಾದನಾ ಚಟುವಟಿಕೆಗಳಿಗೆ ಹೆಚ್ಚಿನ ಚಾಲನಾ ಶಕ್ತಿ ತುಂಬಲು ತೆರಿಗೆ ಕಾನೂನುಗಳಲ್ಲಿ ಬದಲಾವಣೆ ತರುವ ಅಗತ್ಯವಿದೆ. ಇದರಲ್ಲಿನ ಐದು ತಿದ್ದುಪಡಿಗಳು 'ಎಂಎಸ್​ಎಂಇ' ವಲಯಕ್ಕೆ ಅನುಕೂಲ ಆಗಲಿವೆ ಎಂದು ನಿರ್ಮಲಾ ಸ್ಪಷ್ಟನೆ ನೀಡಿದ್ದಾರೆ.

ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, ಕಪ್ಪು ಹಣ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಹಣಕಾಸು ಕಾಯ್ದೆ- 2015, ಹಣಕಾಸು ಕಾಯ್ದೆ 2004 ಮತ್ತು ಬೇನಾಮಿ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗುತ್ತಿರುವ ಏಳು ನೇರ ತೆರಿಗೆ ಕಾನೂನುಗಳಲ್ಲಿ ಸೇರಿವೆ ಎಂದು ಸೀತಾರಾಮನ್ ಹೇಳಿದರು.

ಪರೋಕ್ಷ ತೆರಿಗೆ ಕಾಯ್ದೆಗಳಲ್ಲಿ ಕಸ್ಟಮ್ಸ್ ಕಾಯ್ದೆ, ಸುಂಕ ಕಾಯ್ದೆ, ಸರಕು ಮತ್ತು ಸೇವೆಗಳ ಕಾಯ್ದೆ (ಜಿಎಸ್‌ಟಿ), ಹಣಕಾಸು ಕಾಯ್ದೆ- 2002, 2018ರ ಹಣಕಾಸು ಕಾಯ್ದೆ ಮತ್ತು ಇತರೆ ಕಾಯ್ದೆಗಳು ಸೇರಿವೆ ಎಂದು ಮಾಹಿತಿ ನೀಡಿದ್ದಾರೆ.

ಸೆಬಿ ಕಾಯ್ದೆ ಸೇರಿದಂತೆ ಹಣಕಾಸು ಮಾರುಕಟ್ಟೆಗಳಿಗೆ ಸಂಬಂಧಿಸಿದ 8 ಕಾಯ್ದೆಗಳನ್ನು ತಿದ್ದುಪಡಿಗೆ ಒಳಪಡಿಸಲಾಗುತ್ತಿದೆ. ಬೇನಾಮಿ ಕಾಯ್ದೆ, ಸೆಬಿ ಕಾಯ್ದೆ ಮತ್ತು ಪಿಎಂಎಲ್‌ಎ ಕಾಯ್ದೆ ಸೇರಿದಂತೆ ಇತರೆ ಕಾನೂನುಗಳ ತಿದ್ದುಪಡಿಗೆ ಆರ್‌ಎಸ್‌ಪಿ ಸದಸ್ಯ ಎನ್. ಕೆ. ಪ್ರೇಮಚಂದ್ರನ್ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಇದಕ್ಕೆ ಅನುಮತಿ ನೀಡದಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.