ನವದೆಹಲಿ: ಫೆಬ್ರವರಿಯಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಶೇ 3.6ರಷ್ಟು ಕುಗ್ಗಿದೆ ಎಂದು ಅಧಿಕೃತ ಅಂಕಿ - ಅಂಶಗಳು ತಿಳಿಸಿವೆ.
ಗಣಿಗಾರಿಕೆ ಉತ್ಪಾದನೆಯು ಶೇ 5.5ರಷ್ಟು ಕುಸಿದಿದ್ದರೆ, ಫೆಬ್ರವರಿಯಲ್ಲಿ ವಿದ್ಯುತ್ ಉತ್ಪಾದನೆಯು ಶೇ 0.1ರಷ್ಟು ಏರಿಕೆಯಾಗಿದೆ. 2020ರ ಫೆಬ್ರವರಿಯಲ್ಲಿ ಐಐಪಿ ಶೇ 5.2ರಷ್ಟು ಏರಿಕೆಯಾಗಿತ್ತು. ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಐಐಪಿ ಶೇ 11.3ರಷ್ಟು ಸಂಕುಚಿತಗೊಂಡಿತ್ತು. 2019-20ರ ಇದೇ ಅವಧಿಯಲ್ಲಿ ಶೇ 1ರಷ್ಟು ಬೆಳವಣಿಗೆಗೆ ಹೊಂದಿತ್ತು.
ಕಳೆದ ವರ್ಷ ಮಾರ್ಚ್‌ನಿಂದ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೈಗಾರಿಕಾ ಉತ್ಪಾದನೆಯು ಶೇ 18.7ರಷ್ಟು ಸಂಕುಚಿತಗೊಂಡಿದೆ.