ನವದೆಹಲಿ: ಕೊರೊನಾ ಮತ್ತು ಇತರ ಆರೋಗ್ಯ ಸಂಬಂಧಿತ ತಪ್ಪು ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಯಿಂದ ತೆಗೆದುಹಾಕಲು 'ದಿ ಹೆಲ್ದಿ ಇಂಡಿಯನ್ ಪ್ರಾಜೆಕ್ಟ್' (THIP)ನೊಂದಿಗೆ ಫೇಸ್‌ಬುಕ್ ಕೈಜೋಡಿಸಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್ ಮತ್ತು ಇನ್‌ಸ್ಟಾಗ್ರಾಂನಾದ್ಯಂತ 18 ದಶಲಕ್ಷಕ್ಕೂ ಹೆಚ್ಚು ಹಾನಿಕಾರಕ ತಪ್ಪು ಮಾಹಿತಿಗಳನ್ನು ತೆಗೆದುಹಾಕಿತ್ತು. ಜೊತೆಗೆ ಫ್ಯಾಕ್ಟ್ ಚೆಕ್ಕಿಂಗ್ ಸಹಾಯದಿಂದ 167 ದಶಲಕ್ಷಕ್ಕೂ ಹೆಚ್ಚು ನಕಲಿ ಸುದ್ದಿ ಪೋಸ್ಟ್‌ಗಳನ್ನು ಲೇಬಲ್ ಮಾಡಿದೆ.
THIP ಜೊತೆಗಿನ ಪಾಲುದಾರಿಕೆಯಲ್ಲಿ ಆರೋಗ್ಯ ಸಂಬಂಧಿತ ತಪ್ಪು ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ನಿಗ್ರಹಿಸಲು ಸಹಾಯವಾಗಿದೆ ಎಂದು ಫೇಸ್‌ಬುಕ್ ಹೇಳಿದೆ. ಇನ್ನು ಇಂಗ್ಲಿಷ್, ಹಿಂದಿ, ಬೆಂಗಾಲಿ, ಪಂಜಾಬಿ ಮತ್ತು ಗುಜರಾತಿ ಭಾಷೆಗಳಲ್ಲಿರುವ ಆರೋಗ್ಯ, ಔಷಧಗಳು, ಆಹಾರ ಮತ್ತು ಚಿಕಿತ್ಸೆಯ ಬಗ್ಗೆ ದಾರಿತಪ್ಪಿಸುವ ಸುದ್ದಿಗಳನ್ನು ತೆಗೆದುಹಾಕಲು ಫ್ಯಾಕ್ಟ್ ಚೆಕ್ಕಿಂಗ್ ತಂಡ ವೈದ್ಯಕೀಯ ವೃತ್ತಿಪರರೊಂದಿಗೆ ಕೆಲಸ ಮಾಡಿದೆ.
-
Big responsibility. Even bigger if we consider the great work #FactCheckers are already doing around the world. We hope we live up to the standards set by them and do some good work. #Facebook @ThipMedia #FactCheck @factchecknet https://t.co/X6UK61pyfR
— The Healthy Indian Project (@ThipMedia) June 16, 2021 " class="align-text-top noRightClick twitterSection" data="
">Big responsibility. Even bigger if we consider the great work #FactCheckers are already doing around the world. We hope we live up to the standards set by them and do some good work. #Facebook @ThipMedia #FactCheck @factchecknet https://t.co/X6UK61pyfR
— The Healthy Indian Project (@ThipMedia) June 16, 2021Big responsibility. Even bigger if we consider the great work #FactCheckers are already doing around the world. We hope we live up to the standards set by them and do some good work. #Facebook @ThipMedia #FactCheck @factchecknet https://t.co/X6UK61pyfR
— The Healthy Indian Project (@ThipMedia) June 16, 2021
ಜಾಗತಿಕವಾಗಿ, 60 ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಷಯ ಮೇಲ್ವಿಚಾರಣೆಗೆ ಸಹಾಯ ಮಾಡುವ 80 ಫ್ಯಾಕ್ಟ್ - ಚೆಕ್ಕಿಂಗ್ ಪಾಲುದಾರರೊಂದಿಗೆ ಫೇಸ್‌ಬುಕ್ ಕಾರ್ಯನಿರ್ವಹಿಸುತ್ತಿದೆ. ಫೇಸ್‌ಬುಕ್‌ನ ಸತ್ಯ - ಪರಿಶೀಲನೆ ಪಾಲುದಾರರಿಗೆ ಸ್ವತಂತ್ರ, ಪಕ್ಷೇತರ ಇಂಟರ್ನ್ಯಾಷನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ ಮೂಲಕ ಪ್ರಮಾಣೀಕರಿಸಲಾಗಿದೆ.
10 Fact Checking
ಭಾರತದಲ್ಲಿ ಫೇಸ್‌ಬುಕ್ 10 ಫ್ಯಾಕ್ಟ್-ಚೆಕಿಂಗ್ ಪಾಲುದಾರರನ್ನು ಹೊಂದಿದೆ. ಇದು ಯುಎಸ್ ನಂತರದ ಬೃಹತ್ ಪ್ರಮಾಣದಲ್ಲಿ ಪಾಲುದಾರರನ್ನ ಒಳಗೊಂಡ ದೇಶವಾಗಿದೆ. ಇದರಲ್ಲಿ ಇಂಡಿಯಾ ಟುಡೆ ಗ್ರೂಪ್, ವಿಶ್ವಾಸ್ ನ್ಯೂಸ್ (ಡೈನಿಕ್ ಜಾಗ್ರನ್), ಫ್ಯಾಕ್ಟ್ಲಿ, ನ್ಯೂಸ್ ಮೊಬೈಲ್, ಫ್ಯಾಕ್ಟ್ ಕ್ರೆಸೆಂಡೋ, ಬೂಮ್ ಲೈವ್, ಎಎಫ್‌ಪಿ, ನ್ಯೂಸ್ ಚೆಕರ್ ಮತ್ತು ಕ್ವಿಂಟ್ ಸೇರಿದ್ದಾರೆ.
ಭಾರತೀಯ ಭಾಷೆಗಳಲ್ಲಿ ಹಿಂದಿ, ಬಂಗಾಳಿ, ತೆಲುಗು, ಮಲಯಾಳಂ, ತಮಿಳು, ಮರಾಠಿ, ಪಂಜಾಬಿ, ಉರ್ದು, ಗುಜರಾತಿ, ಅಸ್ಸಾಮೀಸ್ ಮತ್ತು ಕನ್ನಡ ಸೇರಿವೆ. ಇನ್ನು ಯಾರಾದರೂ ಸತ್ಯ-ಪರಿಶೀಲಿಸಿದ ಪೋಸ್ಟ್ ಅನ್ನು ಹಂಚಿಕೊಳ್ಳಲು ಪ್ರಯತ್ನಿಸಿದರೆ ಸಮುದಾಯದ ಸದಸ್ಯರಿಗೆ ಪಾಪ್ - ಅಪ್ ಸೂಚನೆಯನ್ನು ನೀಡಲಾಗುತ್ತದೆ. ಇದರಿಂದ ಜನರು ಏನು ಓದಬೇಕು, ನಂಬಬೇಕು ಮತ್ತು ಹಂಚಿಕೊಳ್ಳಬೇಕು ಎಂದು ಸ್ವತಃ ನಿರ್ಧರಿಸಬಹುದು.
ಫೇಸ್‌ಬುಕ್ 10 ಫ್ಯಾಕ್ಟ್-ಚೆಕಿಂಗ್ ಸಂಸ್ಥೆಗಳೊಂದಿಗೆ (ಭಾರತದಲ್ಲಿ ಫ್ಯಾಕ್ಟ್ಲಿ ಮತ್ತು ಕ್ವಿಂಟ್ ಸೇರಿದಂತೆ) ಫೆಲೋಶಿಪ್ ಅನ್ನು ಪ್ರಾರಂಭಿಸಿದೆ.