ದೆಹಲಿ: ತೃಣಮೂಲ ಸಂಸದೆ ಮಾಹುವಾ ಮೊಯಿತ್ರಾ ಲೋಕಸಭೆಯಲ್ಲಿ ಇಂದು ಹಲವಾರು ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಮೊಯಿತ್ರಾ ಅವರು ಲೋಕಸಭೆಯಲ್ಲಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರು, ಲಾಕ್ಡೌನ್ ಮತ್ತು ವಲಸೆ ಕಾರ್ಮಿಕರ ವಿಷಯವನ್ನಿಟ್ಟುಕೊಂಡು ಮಾತನಾಡಿದ್ರು. ಇವರ ಆಕ್ರಮಣಕಾರಿ ಭಾಷಣಕ್ಕೆ ವಿಶ್ವ ಬ್ಯಾಂಕ್ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಕೃಷಿ ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ತಿದ್ದುಪಡಿಗೆ ಸಿದ್ದ: ಪ್ರಧಾನಿ ಮೋದಿ
ಬಂಗಾಳಿ ಅರ್ಥಶಾಸ್ತ್ರಜ್ಞ, ಮಾಹುವಾ ಅವರ ಭಾಷಣವನ್ನು ವಿಶ್ವದ ಅತ್ಯುತ್ತಮ ಸಂಸತ್ತಿನ ಭಾಷಣ ಎಂದು ಕರೆದರು. ಕೃಷಿ ಕಾನೂನುಗಳು, ವಲಸೆ ಕಾರ್ಮಿಕರ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ಮೊಹುವಾ ಮೊಯಿತ್ರಾ ಅವರ ಭಾಷಣವು ವಿಶ್ವದ ಅತ್ಯುತ್ತಮ ಸಂಸತ್ತಿನ ಭಾಷಣಗಳಲ್ಲಿ ಒಂದಾಗಿದೆ ಎಂದು ಕೌಶಿಕ್ ಅವರು ಟ್ವೀಟ್ ಮಾಡಿ, ಸಂಸದೆಯ ಗುಣಗಾಮ ಮಾಡಿದ್ದಾರೆ.