ನವದೆಹಲಿ: 12 ಸಂಖ್ಯೆಗಳನ್ನು ಒಳಗೊಂಡ ವಿಶಿಷ್ಟ ಗುರುತಿನ ಚೀಟಿ ಆಧಾರ್ ಅನ್ನು ಬ್ಯಾಂಕ್ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ಜೋಡಗೆ ಮಾರ್ಚ್ 31ಕೆ ಕೊನೆಯ ದಿನವೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ವಾಯಿದೆ ಗಡುವಿಗೆ ಇನ್ನೂ ಎರಡು ದಿನವಷ್ಟೇ ಬಾಕಿ ಇದ್ದು, ಜೋಡಣೆ ಆಗಿದಿದ್ದರೇ ಏನಾಗುತ್ತದೆ ಎಂಬ ಪ್ರಶ್ನೆ ಪ್ಯಾನ್ ಕಾರ್ಡ್ದಾರರಲ್ಲಿ ಮೂಡಿದೆ.
ಕೋಟ್ಯಂತರ ರೂ. ವ್ಯಯಿಸಿ ಆಧಾರ್ ಕಾರ್ಡ್ಗೆ ಪ್ಯಾನ್ ನಂಬರ್ ಲಿಂಕ್ ಮಾಡುವಂತೆ ಐಟಿ ಜಾಹೀರಾತು ಮೂಲಕ ಸೂಚಿಸಿತ್ತು. ಆದರೆ, ನಂಬರ್ ಜೋಡಣೆ ಮಾಡದೇ ಹೋದರೆ ಏನಾಗುತ್ತದೆ ಎಂಬುದರ ಕುರಿತು ಐಟಿ ಇಲಾಖೆ ಇದುವರೆಗೂ ಸ್ಪಷ್ಟನೆ ಸಹ ನೀಡಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಫೈಲ್, ವಾಣಿಜ್ಯಾತ್ಮಕ ಬಳಕೆ, ಬ್ಯಾಂಕಿಂಗ್ ವಹಿವಾ
You can still file your Income Tax Return for A.Y. 2018-19 ( F.Y. 2017-18 ) by 31st March, 2019 with late fee if you have not filed yet. pic.twitter.com/G6juCzKA1z
— Income Tax India (@IncomeTaxIndia) March 25, 2019 " class="align-text-top noRightClick twitterSection" data="
">You can still file your Income Tax Return for A.Y. 2018-19 ( F.Y. 2017-18 ) by 31st March, 2019 with late fee if you have not filed yet. pic.twitter.com/G6juCzKA1z
— Income Tax India (@IncomeTaxIndia) March 25, 2019You can still file your Income Tax Return for A.Y. 2018-19 ( F.Y. 2017-18 ) by 31st March, 2019 with late fee if you have not filed yet. pic.twitter.com/G6juCzKA1z
— Income Tax India (@IncomeTaxIndia) March 25, 2019
ಒಂದು ವೇಳೆ ಜೋಡಣೆ ಮಾಡದೇ ಹೋದರೆ, ಶಾಶ್ವತ ಖಾತೆ ಸಂಖ್ಯೆ ರದ್ದಾಗುವುದೇ ಎನ್ನುವ ಅನುಮಾನಕ್ಕೆ, ಅಂತಹ ಸಾಧ್ಯತೆಗಳು ಇಲ್ಲವೆಂದು ಕೆಲವರು ಅಭಿಪ್ರಾಯಟ್ಟಿದ್ದಾರೆ. ಇದಕ್ಕೂ ಮೊದಲು ಆಧಾರ್- ಪ್ಯಾನ್ ಜೋಡಣೆ 2018ರ ಜೂನ್ 30ಕ್ಕೆ ಕೊನೆಯ ದಿನವಾಗಿತ್ತು. ಜನರು ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸದೇ ಇದ್ದಾಗ ಮತ್ತೆ ದಿನಾಂಕವನ್ನು ಮುಂದೂಡಿದೆ.
ಪ್ಯಾನ್ ಮತ್ತು ಆಧಾರ್ ಈಗಾಗಲೇ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ?
* ಐಟಿಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ https://www.incometaxindiaefiling.gov.inಗೆ ಭೇಟಿ ನೀಡಿ
* ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಲಿಂಕ್ ಆಧಾರ್ (Link Aadhaar) ಆಯ್ಕೆ ಕ್ಲಿಕ್ ಮಾಡಿ
* ಆ ಪುಟದಲ್ಲಿ ''ನೀವು ಈಗಾಗಲೇ ಲಿಂಕ್ ಮಾಡಿದ್ದರೆ, ಆ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸಿದರೆ ಇಲ್ಲಿ ಕ್ಲಿಕ್ಕಿಸಿ'' ಎಂಬ ಅರ್ಥದ ಸಂದೇಶ ಬಾಕ್ಸ್ ಕಾಣಿಸುತ್ತದೆ. ಅಲ್ಲಿರುವ Link Aadhaar ಅನ್ನುವುದನ್ನು ಕ್ಲಿಕ್ ಮಾಡಿ
* ಪ್ಯಾನ್ ಮತ್ತು 12 ಆಧಾರ್ ಸಂಖ್ಯೆಯನ್ನು ಕೊಟ್ಟಿರುವ ಖಾಲಿ ಬಾಕ್ಸ್‌ನಲ್ಲಿ ಭರ್ತಿ ಮಾಡಿ
* View Link Aadhaar Status (ಆಧಾರ್ ಜೋಡಣೆಯ ಪ್ರದರ್ಶಿಸು) ಅನ್ನುವುದನ್ನು ಕ್ಲಿಕ್ ಮಾಡಿ
* ಆಗ ನಿಮ್ಮ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶ ಬಾಕ್ಸ್ನ ತೆರೆಯ ಮೇಲೆ ಕಾಣಿಸುತ್ತದೆ
ಹೊಸದಾಗಿ ಜೋಡಣೆ ಮಾಡುವ ವಿಧಾನ
* https://www.incometaxindiaefiling.gov.ingಗೆ ಭೇಟಿ ನೀಡಿ
* ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್ (Link Aadhar) ಆಯ್ಕೆ ಕ್ಲಿಕ್ ಮಾಡಿ
* ಲಿಂಕ್ ಆಧಾರ್ ಡೈಲಾಗ್ ಬ್ಯಾಕ್ಸ್ ತೆರೆದುಕೊಳ್ಳುತ್ತದೆ.
* ಡೈಲಾಗ್ ಬಾಕ್ಸ್‌ನಲ್ಲಿ ಸೂಚಿಸಲಾದ: ಪ್ಯಾನ್ ನಂ., ಆಧಾರ್ ನಂಬರ್, ಆಧಾರ್ ಕಾರ್ಡ್ನಲ್ಲಿ ನಮೋದಿತ ಹೆಸರು ಭರ್ತಿ ಮಾಡಿ
*ಕ್ಯಾಪ್ಚನ್ ಕೋಡ್ ಸಂಖ್ಯೆ ನಮೋದಿಸಿ: (ದಿವ್ಯಾಂಗರಿಗೆ ಓಟಿಪಿ ನಂಬರ್ ಪಡೆಯುವ ಅವಕಾಶವಿದೆ)
* ಹಸಿರು ಪೆಟ್ಟಿಗೆಯಲ್ಲಿನ ಲಿಂಕ್ ಆಧಾರ್ (Link Aadhar) ಆಯ್ಕೆ ಮಾಡಿಕೊಂಡರೆ ಆಧಾರ್ ಜೋಡಣೆಯಾದ ಬಾಕ್ಸ್ ತೆರೆದುಕೊಳ್ಳುತ್ತದೆ
ಎಸ್ಎಂಎಸ್ ಮುಖಾಂತರ ಆಧಾರ್ ಜೋಡಣೆ
* ಅಂತರ್ಜಾಲ ಸಂಪರ್ಕವಿಲ್ಲದೇ ಮೊಬೈಲ್ ಎಸ್ಎಂಎಸ್ ಬಳಸಿ ಪ್ಯಾನ್- ಆಧಾರ್ ಜೋಡಣೆ ಮಾಡಬಹುದು. ಆಧಾರ್ನ 12 ವಿಶಿಷ್ಟ ಸಂಖ್ಯೆಗಳನ್ನು 567678 ಅಥವಾ 56161ಗೆ ಸಂದೇಶ ರವಾನಿಸಬಹುದು
ಸಂದೇಶ ಕಳುಹಿಸುವ ವಿಧಾನ
ಯುಐಡಿಪ್ಯಾನ್<ಸ್ಥಳ>12 ವಿಶೇಷ ಸಂಖ್ಯೆಗಳು<ಸ್ಥಳ>ಪ್ಯಾನ್ 10 ವಿಶೇಷ ಸಂಖ್ಯೆಗಳು
UIDPAN<space>12-digit Aadhaar><space>10-digit PAN
ಉದಾ: UIDPAN 444455556666 BBUDA8686Q