ನವದೆಹಲಿ: ಭಾರತದ ಡೀಸೆಲ್ ಬಳಕೆ ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ ಈ ತಿಂಗಳ ಮೊದಲಾರ್ಧದಲ್ಲಿ ಶೇ 8.8ರಷ್ಟು ಏರಿಕೆಯಾಗಿದ್ದು, ಮಾರ್ಚ್ ನಂತರದ ಮೊದಲ ವಾರ್ಷಿಕ ಹೆಚ್ಚಳವಾಗಿದೆ.
ಕೋವಿಡ್-19 ಸೋಂಕು ಹಬ್ಬುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ನಿರ್ಬಂಧಗಳನ್ನು ವಿಧಿಸಲಾಯಿತು. ಈ ವೇಳೆ, ಪ್ರಾಥಮಿಕ ಉದ್ಯಮದ ಮಾಹಿತಿಯ ಪ್ರಕಾರ, ತೈಲ ಬಳಕೆಯು ಗಣನೀಯ ಪ್ರಮಾಣಲ್ಲಿ ಇಳಿಕೆ ಆಗಿತ್ತು.
ದೇಶದಲ್ಲಿ ಸಂಸ್ಕರಿಸಿದ ಇಂಧನ ಬೇಡಿಕೆಯ ಸರಿ ಸುಮಾರು ಎರಡು - ಐದನೇ ಭಾಗ ಹೊಂದಿರುವ ಡೀಸೆಲ್ ಮಾರಾಟವು ಒಟ್ಟು 2.65 ಮಿಲಿಯನ್ ಟನ್ಗಳಷ್ಟಿದೆ. ದೇಶದ ಅಗ್ರ ಸಂಸ್ಕರಣಾ ಮತ್ತು ಇಂಧನ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪ್ ಸಂಗ್ರಹಿಸಿದ ಪ್ರಾಥಮಿಕ ಡೇಟಾದಲ್ಲಿದೆ.
ಅಕ್ಟೋಬರ್ 1-15ರ ಅವಧಿಯಲ್ಲಿ ಪೆಟ್ರೋಲ್ ಮಾರಾಟವು ಶೇ 1.5ರಷ್ಟು ಏರಿಕೆಯಾಗಿದ್ದು, ಹಿಂದಿನ ವರ್ಷಕ್ಕಿಂತ 9,82,000 ಟನ್‌ಗಳಿಗೆ ತಲುಪಿದೆ ಎಂದು ಡೇಟಾ ತಿಳಿಸಿದೆ.