ETV Bharat / business

ಕಂಪನಿಗಳ ಚೇತರಿಕೆ ಭಾರತದಲ್ಲಿ ಉದ್ಯೋಗಗಳನ್ನ ಹೆಚ್ಚಿಸಬಹುದು: ಸಮೀಕ್ಷೆ - ಬೇಡಿಕೆಯ ಚೇತರಿಕೆ

ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಶೇ 5ರಷ್ಟು ಕಂಪನಿಗಳು ಹೆಚ್ಚಿನ ಸಿಬ್ಬಂದಿಯನ್ನು ಸೇರಿಸಲು ಯೋಜಿಸುತ್ತಿವೆ. ಕೋವಿಡ್-19 ಮಧ್ಯೆಯೂ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಿರುವುದು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ ಮೂಡಿಸಿರಬಹುದು ಎಂದು ಸಮೀಕ್ಷೆಯೊಂದು ಹೇಳಿದೆ.

employment
employment
author img

By

Published : Jun 11, 2020, 12:28 PM IST

ನವದೆಹಲಿ: ಲಾಕ್‌ಡೌನ್‌ನಿಂದ ಉಂಟಾದ ಬೇಡಿಕೆಯ ರೇಖೆಯ ಬದಲಾವಣೆ ಮತ್ತು ಆರ್ಥಿಕ ಕುಸಿತವು ಭಾರತದ ಉದ್ಯೋಗ ಮಾರುಕಟ್ಟೆಗೆ ತೀವ್ರವಾಗಿ ಹೊಡೆತ ನೀಡಿದೆ.

ಕಂಪನಿಗಳು ತಮ್ಮ ಉದ್ಯೋಗಿಗಳನ್ನು ತರ್ಕಬದ್ಧಗೊಳಿಸುವುದರೊಂದಿಗೆ ಹಲವು ತಿಂಗಳುಗಳ ಲಾಕ್‌ಡೌನ್ ಬಳಿಕ ಅನ್​ಲಾಕ್​ಗೊಂಡಿದೆ. ಇದರಿಂದ ಕೇವಲ 5 ಶೇಕಡಾ ಕಂಪನಿಗಳು ಮಾತ್ರ ಈ ವರ್ಷದಲ್ಲಿ ಹಾಗೂ ಮುಂದಿನ ಮೂರು ತಿಂಗಳಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಪ್ರಯತ್ನಿಸಲಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಭಾರತದ ಉದ್ಯೋಗ ಮಾರುಕಟ್ಟೆಯ ಕೇವಲ ಶೇ 5ರಷ್ಟು ಕಂಪನಿಗಳು ಹೆಚ್ಚಿನ ಸಿಬ್ಬಂದಿಯನ್ನು ಸೇರಿಸಲು ಯೋಜಿಸುತ್ತಿವೆ. ಕೋವಿಡ್-19 ಮಧ್ಯೆಯೂ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಿರುವುದು ಈ ಹಣಕಾಸು ವರ್ಷದ ಅಂತ್ಯದ ಮೊದಲು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ ಮೂಡಿಸಿವೆ.

ಭಾರತದ ಉದ್ಯೋಗ ಅಥವಾ ಉದ್ಯೋಗ ಮಾರುಕಟ್ಟೆಯು ಕಂಪನಿಗಳ ಬೇಡಿಕೆಯ ಚೇತರಿಕೆಯ ಮೇಲೆ ಅವಲಂಬಿತವಾಗಿದೆ. ಕಂಪನಿಯ ಆರ್ಥಿಕ ಸ್ಥಿತಿ ಸುಧಾರಿತಗೊಂಡರೆ ಭವಿಷ್ಯದಲ್ಲಿ ಉದ್ಯೋಗದ ಬೆಳವಣಿಗೆಯಾಗಲು ಸಹಾಯವಾಗಲಿದೆ. ಇದರಿಂದ ಭಾರತವು ಶೀಘ್ರದಲ್ಲೇ ಹೆಚ್ಚಿನ ಸಂಖ್ಯೆಯ ಯುವಕರಿಗೆ ಉದ್ಯೋಗವನ್ನು ಒದಗಿಸುವ ಸ್ಥಿತಿಯಲ್ಲಿರಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.