ಗುವಾಹಟಿ: ಸಿಎಎ ವಿರೋಧಿ ಪ್ರತಿಭಟನೆ ಮತ್ತು ಇತ್ತೀಚಿನ ದೆಹಲಿ ಹಿಂಸಾಚಾರದಿಂದ ಹೂಡಿಕೆದಾರರ ಮನೋಭಾವ ಕಡಿಮೆಯಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೂಡಿಕೆದಾರರು ದೇಶದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದರು.
ದೆಹಲಿ ಹಿಂಸಾಚಾರ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ ಕೇಳಿದಾಗ, 'ಈ ಬಗ್ಗೆ ವಿದೇಶಿ ಹೂಡಿಕೆದಾರರ ಭಾವನೆಗಳು ಕಡಿಮೆಯಾಗಿಲ್ಲ. ಆದರೆ, ಕೊರೊನಾ ವೈರಸ್ ಬಗ್ಗೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ದುಗುಡು ವ್ಯಕ್ತಪಡಿಸಿದ್ದಾರೆ ಎಂದರು.
ಕೈಗಾರಿಕೆ ಮತ್ತು ಆರ್ಥಿಕತೆಯ ಮೇಲೆ ಕೊರೊನಾ ವೈರಸ್ ಸಂಭವನೀಯ ಪರಿಣಾಮ ಇರಲಿದೆ. ಮುಂದಿನ ಎರಡು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೇ ಕಚ್ಚಾ ವಸ್ತುಗಳ ಕೊರತೆ ಉಂಟಾಗಬಹುದು. ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಮತ್ತು ಉದ್ಯಮಕ್ಕೆ ಹೇಗೆಲ್ಲ ನೆರವಾಗಬಹುದು ಎಂಬುದರ ಬಗ್ಗೆಯೂ ಕೆಲಸ ಚಿಂತಿಸುತ್ತಿದ್ದೇವೆ ಎಂದು ಸೀತಾರಾಮನ್ ಅವರು ಹೇಳಿದರು.