ETV Bharat / business

ಕೊರೊನಾದಿಂದ ಗೃಹ ಉಳಿತಾಯ ಕುಸಿತ : ಮುಂದಿನ 4 ತಿಂಗಳು ಗ್ರಾಹಕರ ಖರ್ಚಿನ ಯೋಜನೆ ಹೀಗಿದೆ.. - ಕೊರೊನಾ ವೈರಸ್​ನಿಂದ ವೇತನ ಕಡಿತ

8,240 ಪ್ರತಿಕ್ರಿಯೆಗಳಲ್ಲಿ 68 ಪ್ರತಿಶತದಷ್ಟು ಗ್ರಾಹಕರು ಕೋವಿಡ್​-19 ಸಾಂಕ್ರಾಮಿಕ ಸಮಯದ ಕಳೆದ 8 ತಿಂಗಳಲ್ಲಿ ತಮ್ಮ ಮನೆಯ ಉಳಿತಾಯ ಕುಸಿದಿದೆ ಎಂದಿದ್ದಾರೆ. ಹಬ್ಬದ ಋತುವಿನಲ್ಲಿ ಗ್ರಾಹಕರ ಖರ್ಚಿನ ನಡವಳಿಕೆ, ಮುಂದಿನ ನಾಲ್ಕು ತಿಂಗಳು ಖರ್ಚಿನ ಯೋಜನೆಗಳು, ಗಳಿಕೆ ಮತ್ತು ಉಳಿತಾಯ ಪರಿಸ್ಥಿತಿಯ ಬಗ್ಗೆಯೂ ಸಮೀಕ್ಷೆ ನಡೆಸಲಾಯಿತು..

cash
ಹಣ
author img

By

Published : Dec 15, 2020, 6:42 PM IST

ನವದೆಹಲಿ : ಉದ್ಯೋಗ ನಷ್ಟ, ವೇತನ ಕಡಿತ ಅಥವಾ ಪಾವತಿ ವಿಳಂಬದಿಂದಾಗಿ ಕೋವಿಡ್​-19 ಸಾಂಕ್ರಾಮಿಕ ಸಮಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮನೆಯ ಉಳಿತಾಯ ಕುಸಿತವಾಗಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.

ಲೋಕಲ್ ಸರ್ಕಲ್ಸ್‌ನ ಗ್ರಾಹಕ ಸಮೀಕ್ಷೆಯ ದ್ವಿ ವಾರ್ಷಿಕ ಮೂಡ್ ಪ್ರಕಾರ, ಸಾಂಕ್ರಾಮಿಕ ರೋಗದ ಒಂಬತ್ತು ತಿಂಗಳ ಅವಧಿಯಲ್ಲಿ ಅನೇಕ ಗ್ರಾಹಕರು ಉದ್ಯೋಗ ನಷ್ಟ ಮತ್ತು ವೇತನ ಕಡಿತದ ಮಧ್ಯೆ ತಮ್ಮ ವೈಯಕ್ತಿಕ ಹಣಕಾಸಿನಲ್ಲಿನ ದೈತ್ಯ ಕುಸಿತದಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದಿದೆ.

8,240 ಪ್ರತಿಕ್ರಿಯೆಗಳಲ್ಲಿ 68 ಪ್ರತಿಶತದಷ್ಟು ಗ್ರಾಹಕರು ಕೋವಿಡ್​-19 ಸಾಂಕ್ರಾಮಿಕ ಸಮಯದ ಕಳೆದ 8 ತಿಂಗಳಲ್ಲಿ ತಮ್ಮ ಮನೆಯ ಉಳಿತಾಯ ಕುಸಿದಿದೆ ಎಂದಿದ್ದಾರೆ. ಹಬ್ಬದ ಋತುವಿನಲ್ಲಿ ಗ್ರಾಹಕರ ಖರ್ಚಿನ ನಡವಳಿಕೆ, ಮುಂದಿನ ನಾಲ್ಕು ತಿಂಗಳು ಖರ್ಚಿನ ಯೋಜನೆಗಳು, ಗಳಿಕೆ ಮತ್ತು ಉಳಿತಾಯ ಪರಿಸ್ಥಿತಿಯ ಬಗ್ಗೆಯೂ ಸಮೀಕ್ಷೆ ನಡೆಸಲಾಯಿತು.

ಪೆಟ್ರೋಲ್, ಡೀಸೆಲ್​ ದರ ಏರಿಕೆಯ ಗಾಯಕ್ಕೆ ಸಿಲಿಂಡರ್ ಬೆಲೆಯ ಬರೆ: ಮತ್ತೆ ₹__ಹೆಚ್ಚಳ

ಸಮೀಕ್ಷೆಯು ಭಾರತದ 302 ಜಿಲ್ಲೆಗಳ ಗ್ರಾಹಕರಿಂದ 44,000ಕ್ಕೂ ಅಧಿಕ ಪ್ರತಿಕ್ರಿಯೆಗಳನ್ನು ಪಡೆದಿದೆ. 62 ಪ್ರತಿಶತದಷ್ಟು ಪುರುಷರು ಮತ್ತು 38 ಪ್ರತಿಶತ ಮಹಿಳೆಯರಿದ್ದಾರೆ. 55 ಪ್ರತಿಶತದಷ್ಟು ಜನರು ಶ್ರೇಣಿ- I, ಶೇ.26 ಶ್ರೇಣಿ- II, ಮತ್ತು ಶೇ.19ರಷ್ಟು III, IV ಮತ್ತು ಗ್ರಾಮೀಣ ಜಿಲ್ಲೆಗಳಿಂದ ಪ್ರತಿಕ್ರಿಯಿಸಿದ್ದಾರೆ.

ಸುಮಾರು 50 ಪ್ರತಿಶತದಷ್ಟು ಗ್ರಾಹಕರು ಮುಂದಿನ ನಾಲ್ಕು ತಿಂಗಳಲ್ಲಿ ವಿವೇಚನಯುಕ್ತ ಉತ್ಪನ್ನ ಅಥವಾ ಆಸ್ತಿ ಖರೀದಿಸಲು ಖರ್ಚು ಮಾಡುವ ಯೋಜನೆ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಶೇ.10ರಷ್ಟು ಜನರು ಮುಂದಿನ ನಾಲ್ಕು ತಿಂಗಳಲ್ಲಿ ವಿವೇಚನೆಯುಕ್ತವಾಗಿ 50,000 ರೂ.ಯಷ್ಟು ಖರೀದಿ ಮೇಲೆ ಖರ್ಚು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. 21 ಪ್ರತಿಶತದಷ್ಟು ಜನರು ಈ ಅವಧಿಯಲ್ಲಿ 10,000-50,000 ರೂ. ವಿನಿಯೋಗಿಸಲಿದ್ದಾರೆ.

ಗ್ರಾಹರಕ ಖರ್ಚಿನ ಈ ನಡೆಯು 2020-21ರ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೇಡಿಕೆಯ ಕುಸಿತ ಕಂಡ ಆರ್ಥಿಕತೆಯ ಅನೇಕ ಕ್ಷೇತ್ರಗಳಿಗೆ ಒಳ್ಳೆಯ ಸುದ್ದಿ ಎಂಬುದನ್ನು ಅರ್ಥೈಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.