ETV Bharat / business

4,000 ರೂ. ಆ್ಯಪ್​ ಸಾಲಕ್ಕೆ ಪ್ರಾಣ ಕಳ್ಕೊಂಡ ಯುವಕ: ಸಾಲ ಕೊಟ್ಟವರ ಕಾಟ ಕೇಳಿದ್ರೆ ಬೆಚ್ಚಿಬೀಳ್ತಿರಾ! - ತ್ವರಿತ ಸಾಲ ಆ್ಯಪ್​ ಆತ್ಮಹತ್ಯೆ ಕೇಸ್

ಬ್ಯಾಂಕ್​ಗಳಿಂದ ಸಾಲ ಪಡೆಯಲು ಓಡುವ ದಿನಗಳು ಮುಗಿದಿವೆ. ಇತ್ತೀಚಿನ ದಿನಗಳಲ್ಲಿ ತ್ವರಿತ ಸಾಲದ ಅಪ್ಲಿಕೇಷನ್‌ಗಳು ಅಗತ್ಯವಿರುವವರಿಗೆ ಕೇವಲ ಎರಡು ನಿಮಿಷಗಳಲ್ಲಿ ಕೂದಲು ಕೊಂಕದಷ್ಟು ವೇಗವಾಗಿ ಸಾಲ ಒದಗಿಸುತ್ತವೆ. ಅಷ್ಟೇ ವೇಗವಾಗಿ ಅಪಾಯ ಮತ್ತು ತೊಂದರೆಗಳನ್ನು ತಂದೊಡ್ಡುತ್ತಿವೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಇಲ್ಲಿದೆ.

instant loan apps
ಆ್ಯಪ್ ಸಾಲ
author img

By

Published : Dec 26, 2020, 4:28 PM IST

ಚೆಂಗಲ್ಪಟ್ಟು: ಸುಲಭವಾಗಿ ದಿಢೀರ್‌ ಎಂದು ಸಾಲ ನೀಡುವ ಆ್ಯಪ್‌ ಆಧಾರಿತ ಕಂಪನಿಗಳ ಸಾಲದ ಸುಳಿಗೆ ಸಿಲುಕಿದ ಹಲವರ ಪೈಕಿ ಕೆಲವರು ಮರುಪಾವತಿ ವೇಳೆಯ ಕಿರುಕುಳ, ಅಪಮಾನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ಆತ್ಮಹತ್ಯೆಯ ಬೆನ್ನಲ್ಲೇ ತಮಿಳುನಾಡಿನಲ್ಲಿ ಇಂಥದ್ದೇ ಪ್ರಕರಣ ಮರುಕಳಿಸಿದೆ.

ತಮಿಳುನಾಡಿನ ಚೆಂಗಲ್ಪಟ್ಟು ಮೂಲದ ಯುವಕ ತಕ್ಷಣ ಸಾಲ ನೀಡುವ ಆ್ಯಪ್‌ನಿಂದ ಪಡೆದ ಹಣವನ್ನು ಮರುಪಾವತಿಸದ ಕಾರಣ ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಕುಟುಂಬ ಸದಸ್ಯರು ಅಕ್ರಮ ಸಾಲದ ಆ್ಯಪ್‌ಗಳನ್ನು ನಿಷೇಧಿಸಲು ಸರ್ಕಾರವನ್ನು ಕಣ್ಣೀರು ಹಾಕುತ್ತಾ ಒತ್ತಾಯಿಸುತ್ತಿದ್ದಾರೆ.

ಬ್ಯಾಂಕ್​ಗಳಿಂದ ಸಾಲ ಪಡೆಯಲು ಓಡುವ ದಿನಗಳು ಮುಗಿದಿವೆ. ಇತ್ತೀಚಿನ ದಿನಗಳಲ್ಲಿ ತ್ವರಿತ ಸಾಲದ ಅಪ್ಲಿಕೇಷನ್‌ಗಳು ಅಗತ್ಯವಿರುವವರಿಗೆ ಕೇವಲ ಎರಡು ನಿಮಿಷಗಳಲ್ಲಿ ಕೂದಲು ಕೊಂಕದಷ್ಟು ವೇಗವಾಗಿ ಸಾಲ ಒದಗಿಸುತ್ತವೆ. ಅಷ್ಟೇ ವೇಗವಾಗಿ ಅಪಾಯ ಮತ್ತು ತೊಂದರೆಗಳನ್ನು ತಂದೊಡ್ಡುತ್ತಿವೆ. ತಕ್ಷಣದ ಖರ್ಚನ್ನು ಪೂರೈಸಲು ಪಡೆದ ಸುಲಭವಾದ ತ್ವರಿತ ಸಾಲವು, ಬಡ್ಡಿ ಮತ್ತು ಶುಲ್ಕದಂತಹ ಹೆಚ್ಚುವರಿ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ.

ತ್ವರಿತ ಸಾಲದ ಅಪ್ಲಿಕೇಷನ್‌ಗಳು ಜನರಿಗೆ ಗಂಭೀರ ತೊಂದರೆಗಳನ್ನು ಉಂಟುಮಾಡುತ್ತಿವೆ. ಅವು ಹಣದ ನಷ್ಟವನ್ನು ಮಾತ್ರವಲ್ಲದೆ ಜನರ ಜೀವವನ್ನೂ ಆಪೋಷಣ ತೆಗೆದುಕೊಳ್ಳುತ್ತಿವೆ.

ಚೆಂಗಲ್ಪಟ್ಟು ಜಿಲ್ಲೆಯ ಪಾಲಯನೂರ್ ಸಲೈನ ಯುವಕ ವಿವೇಕ್ ಕೆಲವು ದಿನಗಳ ಹಿಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಆತ್ಮಹತ್ಯೆಗೆ ಕಾರಣ ಆಗಿದ್ದು ಕೇವಲ 4,000 ರೂ. ಸಾಲ ಮಾತ್ರವೇ. ವಿವೇಕ್, ಪ್ರೈವೇಟ್​ ಕನ್ಸರ್ನ್​ನಲ್ಲಿ ಕೆಲಸ ಮಾಡುತ್ತಿದ್ದ. ತಮ್ಮ ತಂದೆಯ ವೈದ್ಯಕೀಯ ವೆಚ್ಚ ಪೂರೈಸಲು ತ್ವರಿತ ಸಾಲದ ಅಪ್ಲಿಕೇಷನ್‌ನಿಂದ 4,000 ರೂ. ಸಾಲ ಪಡೆದಿದ್ದ.

ಸಾಲ ಪಡೆದ ಬಳಿಕ ಆ್ಯಪ್​ನವರಿಗೆ ವಾರಕ್ಕೆ 300 ರೂ. ಅಸಲು ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಆಗಲಿಲ್ಲ. ಸಾಲ ನೀಡಿದ ಕಂಪನಿಯು ಅವನಿಗೆ ಅನೇಕ ರೀತಿಯಲ್ಲಿ ತೊಂದರೆ ಮತ್ತು ಮಾನಸಿಕ ಸಂಕಟವನ್ನುಂಟು ಮಾಡಿತ್ತು. ಇದರಿಂದ ಬೇಸತ್ತ ವಿವೇಕ್ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.

ಓದಿ: ದಿಲ್ಲಿಯವರು ನನಗೆ ಪ್ರಜಾಪ್ರಭುತ್ವದ ಪಾಠ ಹೇಳುತ್ತಿದ್ದಾರೆ: ರಾಹುಲ್​ಗೆ ಮೋದಿ ತಿರುಗೇಟು

ಆ್ಯಪ್ ತನ್ನ ಮೊಬೈಲ್ ಫೋನ್‌ನಿಂದ ಎಲ್ಲಾ ಸಂಪರ್ಕ ವಿವರಗಳನ್ನು ಸಂಗ್ರಹಿಸಿ ತನ್ನ ಸಂಬಂಧಿಕರು, ಸ್ನೇಹಿತರು ಮತ್ತು ಸ್ಥಳೀಯ ನಿವಾಸಿಗಳಿಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಅವಮಾನಿಸಿದೆ. ಸಾಲವನ್ನು ಸಂಗ್ರಹಿಸಿದ ನಂತರ ವಿವೇಕ್ ಕಂಪನಿಯನ್ನು ವಂಚಿಸಿದ್ದಾನೆ ಎಂದು ಅವನ ಬಗ್ಗೆ ಪ್ರಚಾರ ಮಾಡಿದ್ದಾರೆ. ಇದರಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ದಿಕ್ಕು ತೋಚದಂತಾಗಿ ಆತ್ಮಹತ್ಯೆ ಹಾದಿ ಹಾಯ್ದುಕೊಂಡಿದ್ದಾನೆ. ಮನೆಗೆ ಒಬ್ಬನೇ ಮಗನಾದ ವಿವೇಕ್​ನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಅಕಾಲಿಕ ಸಾವ ಬೇರೆ ಯಾರಿಗೂ ಬಾರದೆ ಇರಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿ, ಅನಧಿಕೃತ ಆ್ಯಪ್ ನಿಷೇಧಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸಾಲದಿಂದಾಗಿ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡ ನಂತರ ಸರ್ಕಾರವು ಇತ್ತೀಚೆಗೆ ಆನ್‌ಲೈನ್ ರಮ್ಮಿ ಆ್ಯಪ್ ಸೇರಿದಂತೆ ಹಲವು ಆ್ಯಪ್‌ಗಳನ್ನು ನಿಷೇಧಿಸಿತ್ತು. ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಮಾಹಿತಿ ಸೋರಿಕೆ ಮಾಡಿಕೊಳ್ಳಲಾಗುತ್ತೆ. ಅಂತಹ ಅಪ್ಲಿಕೇಶನ್‌ಗಳಿಗೆ ಅನುಮತಿ ಮತ್ತು ಅನುಮೋದನೆ ನೀಡುವಾಗ ನಾವು ಜಾಗರೂಕರಾಗಿರಬೇಕು. ಸಾಲದ ಅಪ್ಲಿಕೇಶನ್ ಮತ್ತು ಆನ್‌ಲೈನ್ ಜೂಜಿನ ಅಪ್ಲಿಕೇಷನ್‌ಗಳನ್ನು ಡೌನ್​​ ಮಾಡಿಕೊಳ್ಳದಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 60 ಅಕ್ರಮ ಆನ್‌ಲೈನ್ ಸಾಲ ಆ್ಯಪ್‌ಗಳನ್ನು ನಿಷೇಧಿಸಿತ್ತು. ಈ ಅಪ್ಲಿಕೇಷನ್‌ಗಳು ವ್ಯಕ್ತಿಯಿಂದ ಮಾಹಿತಿಯನ್ನು ಕದ್ದು ಮತ್ತು ಅದನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿವೆ. ಆದ್ದರಿಂದ ಯಾರೂ ಈ ಅಕ್ರಮ ಆ್ಯಪ್‌ಗಳನ್ನು ಬಳಸಬಾರದು ಮತ್ತು ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಸೈಬರ್ ಕ್ರೈಮ್ ಪೊಲೀಸರು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.