ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಐಟಿ ಇಲಾಖೆ ನಿಗದಿಪಡಿಸಿದ್ದ ಜುಲೈ 31ರ ಗಡುವನ್ನು ಆಗಸ್ಟ್ 31ರ ವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿಯು ಐಟಿಆರ್ ಸಲ್ಲಿಕೆಗೆ ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ಒಂದು ತಿಂಗಳ ಕಾಲ ಮುಂದೂಡಿದೆ. ಈ ಮೊದಲು 2019ರ ಜುಲೈ 31ಕ್ಕೆ ಕೊನೆಯ ದಿನಾಂಕವಾಗಿತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಪರಿಷ್ಕೃತ ಆದೇಶದ ಪ್ರಕಾರ 31ರ ಆಗಸ್ಟ್ 2019 ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಇದರಿಂದ ತೆರಿಗೆ ಪಾವತಿದಾರರಿಗೆ ಇನ್ನಷ್ಟು ಅನುಕೂಲವಾಗಲಿದೆ. ನಿಗದಿತ ದಿನಾಂಕದ ನಂತರದಿಂದ ಡಿಸೆಂಬರ್ 31ರ ವರೆಗಿನ ಪಾವತಿಗೆ ₹ 5,000 ವರೆಗೆ ದಂಡ ವಿಧಿಸಲಾಗುತ್ತಿದೆ. ಈ ಬಳಿಕ ದಂಡದ ಮೊತ್ತ ದ್ವಿಗುಣಗೊಳ್ಳಲಿದೆ ಎಂದು ಎಚ್ಚರಿಸಿದೆ.