ETV Bharat / business

ಸೌದಿ-ರಷ್ಯಾ ತೈಲ ಜತೆ ಚೆಲ್ಲಾಟ.. ಇಂದು ಏಕಾಏಕಿ 345 ರೂ. ಬೆಲೆ ಏರಿಕೆಯಾಗಿದ್ದೇಕೆ? - ಅಲೆಕ್ಸಾಂಡರ್ ನೊವಾಕ್

ಬ್ರೆಂಟ್ ಕಚ್ಚಾತೈಲವು ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 38 ಡಾಲರ್​ನಂತೆ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ಅಂತ್ಯದ ವೇಳೆಗೆ ಶೇ.11ರಷ್ಟು ಹೆಚ್ಚಳವಾಗಿದೆ. ಆದರೆ, ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್‌ (ಡಬ್ಲ್ಯುಟಿಐ) ಪ್ರತಿ ಬ್ಯಾರೆಲ್​ ಮೇಲೆ ಶೇ.11ರಷ್ಟು ಏರಿಕೆ ಮಾಡಿ 34 ಡಾಲರ್​ನಲ್ಲಿ ಮಾರಾಟ ಮಾಡುತ್ತಿದೆ.

Crude Oil
ಕಚ್ಚಾ ತೈಲ
author img

By

Published : Mar 10, 2020, 9:17 PM IST

ನವದೆಹಲಿ : ತೈಲ ಮಾರುಕಟ್ಟೆಗಳು ರಕ್ತದೋಕುಳಿ ಕಂಡ ಒಂದು ದಿನದ ಬಳಿಕ ಮಂಗಳವಾರ ಕಚ್ಚಾ ತೈಲ ಬೆಲೆಯಲ್ಲಿ ಶೇ.11ರಷ್ಟು ಏರಿಕೆಯಾಗಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯೊಂದಿಗೆ (ಒಪೆಕ್) ಮಾತುಕತೆ ಮುಂದುವರಿಯಬಹುದು ಎಂದು ರಷ್ಯಾ ಸುಳಿವು ನೀಡಿದೆ.

ವರದಿಗಳ ಪ್ರಕಾರ 'ತೈಲ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಮಾಸ್ಕೋ ಒಪೆಕ್ ಜೊತೆಗಿನ ಕ್ರಮಗಳನ್ನು ತಳ್ಳಿಹಾಕಿಲ್ಲ' ಎಂದು ರಷ್ಯಾ ಇಂಧನ ಸಚಿವ ಅಲೆಕ್ಸಾಂಡರ್ ನೋವಾಕ್ ಹೇಳಿದ್ದಾರೆ. ಬ್ರೆಂಟ್ ಕಚ್ಚಾ ತೈಲವು ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 38 ಡಾಲರ್​ನಂತೆ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ಅಂತ್ಯದ ವೇಳೆಗೆ ಶೇ.11ರಷ್ಟು ಹೆಚ್ಚಳವಾಗಿದೆ. ಆದರೆ, ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ (ಡಬ್ಲ್ಯುಟಿಐ) ಪ್ರತಿ ಬ್ಯಾರೆಲ್​ ಮೇಲೆ ಶೇ. 11ರಷ್ಟು ಏರಿಕೆ ಮಾಡಿ 34 ಡಾಲರ್​ನಲ್ಲಿ ಮಾರಾಟ ಮಾಡುತ್ತಿದೆ.

ರಷ್ಯಾ ಇಂಧನ ಸಚಿವರ ಆಶಾವಾದಿ ಹೇಳಿಕೆಯ ಜೊತೆಗೆ ಕೊರೊನಾ ವೈರಸ್ ರೋಗದ ಪರಿಣಾಮವನ್ನು ಎದುರಿಸಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಕೂಡ ಮಾರುಕಟ್ಟೆಗೆ ಸಾಂತ್ವನ ಸಿಕ್ಕಂತಾಗಿದೆ.

ಸೋಮವಾರದಂದು ತೈಲ ಮಾರುಕಟ್ಟೆಯ ಬೆಲೆಯು 1991ರ ಕೊಲ್ಲಿ ಯುದ್ಧದ ಬಳಿಕ ಅತಿದೊಡ್ಡ ಕುಸಿತವಾದ ಶೇ.30ರಷ್ಟು ಇಳಿಕೆ ಕಂಡಿತು. ಒಪೆಕ್ ಮತ್ತು ರಷ್ಯಾ ನಡುವೆ ಯಾವುದೇ ಒಮ್ಮತ ಬರದ ನಂತರ ಸೌದಿ ಅರೇಬಿಯಾ ಬೆಲೆ ಇಳಿಕೆಯ ಸಮರ ಆರಂಭಿಸುವ ಮೂಲಕ ಮಾರುಕಟ್ಟೆಗೆ ಆಘಾತ ನೀಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.