ನವದೆಹಲಿ : ಖಾಸಗಿ ಆಸ್ಪತ್ರೆಗಳು ಕೋವಿಡ್-19 ಲಸಿಕೆಯ ಪ್ರತಿ ಡೋಸ್‌ಗೆ 250 ರೂ.ವರೆಗೆ ಶುಲ್ಕ ವಿಧಿಸಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಭಾರತವು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಕ ಬಹು ಖಾಯಿಲೆ ಪೀಡಿತರಿಗೆ ಮಾರ್ಚ್ 1ರಿಂದ ಲಸಿಕೆ ನೀಡಲು ಸಿದ್ಧತೆ ನಡೆಸುತ್ತಿದೆ.
ಕೋವಿಡ್-19 ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು. ಆದರೆ, ಜನರು ಅದನ್ನು ಖಾಸಗಿ ಸೌಲಭ್ಯಗಳಲ್ಲಿ ಪಾವತಿಸಬೇಕಾಗುತ್ತದೆ. 250 ರೂ.ಗೆ ಕೋವಿಡ್ ಲಸಿಕೆ ಸೀಲಿಂಗ್ ಲಭ್ಯವಾಗಲಿದೆ. ಲಸಿಕೆಯ ವೆಚ್ಚ 150 ರೂ. ಇದ್ದರೇ 100 ರೂ. ಸೇವಾ ಶುಲ್ಕ ವಿಧಿಸಲಾಗುತ್ತದೆ.
ಮುಂದಿನ ಆದೇಶದವರೆಗೆ ಈ ವ್ಯವಸ್ಥೆಯು ಪರಿಣಾಮಕಾರಿಯಾಗಿ ಜಾರಿಯಲ್ಲಿರುತ್ತದೆ. ಮೂಲಗಳ ಪ್ರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಕೋ-ವಿನ್ 2.0 ಪೋರ್ಟಲ್ ಡೌನ್‌ಲೋಡ್ ಮೂಲಕ ಮತ್ತು ಆರೋಗ್ಯ ಸೇತು ಸೇರಿ ಇತರ ಐಟಿ ಅಪ್ಲಿಕೇಷನ್‌ಗಳ ಮೂಲಕ ಫಲಾನುಭವಿಗಳು ಮುಂಚಿತವಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಇದನ್ನೂ ಓದಿ: ಚೀನಾ ಜತೆ ವ್ಯಾಪಾರ ಮಾಡದಿದ್ದರೆ ಮುಂದೆ ನಾವೆಲ್ಲಾ ಬಡವರಾಗುತ್ತೇವೆ : ರಾಜೀವ್ ಬಜಾಜ್
ಫಲಾನುಭವಿಯು ತನ್ನ ಆಯ್ಕೆಯ ಲಸಿಕೆಯ ಕೇಂದ್ರವನ್ನು (ಸಿವಿಸಿ) ಆಯ್ಕೆ ಮಾಡಲು ಮತ್ತು ವ್ಯಾಕ್ಸಿನೇಷನ್ಗೆ ಅನುಮತಿ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಆನ್-ಸೈಟ್ ನೋಂದಣಿಯ ಸೌಲಭ್ಯ ಸಹ ಲಭ್ಯವಿರುತ್ತದೆ.
ಇದರಿಂದಾಗಿ ಅರ್ಹ ಫಲಾನುಭವಿಗಳು ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಕಾಲಿಡಬಹುದು. ತಮ್ಮ ಹೆಸರು ನೋಂದಾಯಿಸಿಕೊಂಡು ಚುಚ್ಚುಮದ್ದು ಪಡೆಯಬಹುದು. ಅರ್ಹ ಫಲಾನುಭವಿಗಳು ಮಾರ್ಚ್ 1ರಿಂದ ಕೋ-ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೋವಿಡ್-19 ಲಸಿಕೆ ಎಂಪವರ್ಡ್ ಗ್ರೂಪ್‌ನ ಅಧ್ಯಕ್ಷ ಆರ್ ಎಸ್ ಶರ್ಮಾ ಹೇಳಿದ್ದಾರೆ.