ETV Bharat / business

12,000 ನೌಕರರಿಗೆ ಗೇಟ್​ ಪಾಸ್​ ಕೊಟ್ಟು 23,000 ಪ್ರೆಶರ್​ಗಳ ನೇಮಕ: ಯಾವುದು ಈ ಐಟಿ ಕಂಪನಿ? - hire

ಅಮೆರಿಕ ಮೂಲದ ಸಾಫ್ಟ್‌ವೇರ್ ದೈತ್ಯ ಮತ್ತು ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯಾದ ಕಾಗ್ನಿಜೆಂಟ್​​, ಮುಂಬರುವ ತ್ರೈಮಾಸಿಕದಲ್ಲಿ ಜಾಗತಿಕವಾಗಿ 10,000 ರಿಂದ 12,000 ಮಧ್ಯಮ-ಹಿರಿಯ ಮಟ್ಟದ ಸಹವರ್ತಿಗಳನ್ನು ‘ತೆಗೆದುಹಾಕಲು’ ಯೋಜಿಸಿದೆ ಎಂದು ಕಳೆದ ವಾರ ವರದಿಯಾಗಿತ್ತು. 2020ರ ಶೈಕ್ಷಣಿಕ ವರ್ಷದಲ್ಲಿ ಸುಮಾರು 23,000 ತಾಂತ್ರಿಕ ಪರಿಣಿತ ಹೊಸಬರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ನೇಮಕಾತಿ
author img

By

Published : Nov 8, 2019, 8:27 AM IST

ನವದೆಹಲಿ: 2020ರ ಶೈಕ್ಷಣಿಕ ವರ್ಷದಲ್ಲಿ ದೇಶದ ವಿವಿಧ ಶೈಕ್ಷಣಿಕ ಸಂಸ್ಥೆಗಳಿಂದ ಸುಮಾರು 23,000 ತಾಂತ್ರಿಕ ಪರಿಣಿತ ಹೊಸಬರನ್ನು ನೇಮಕ ಮಾಡಿಕೊಳ್ಳಲು ಐಟಿ ಕಂಪನಿ ಕಾಗ್ನಿಜೆಂಟ್ ಸಿದ್ಧವಾಗಿದೆ.

ಅಮೆರಿಕ ಮೂಲದ ಸಾಫ್ಟ್‌ವೇರ್ ದೈತ್ಯ ಮತ್ತು ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯಾದ ಕಾಗ್ನಿಜೆಂಟ್​​, ಮುಂಬರುವ ತ್ರೈಮಾಸಿಕದಲ್ಲಿ ಜಾಗತಿಕವಾಗಿ 10,000 ರಿಂದ 12,000 ಮಧ್ಯಮ-ಹಿರಿಯ ಮಟ್ಟದ ಸಹವರ್ತಿಗಳನ್ನು ‘ತೆಗೆದುಹಾಕಲು’ ಯೋಜಿಸಿದೆ ಎಂದು ಕಳೆದ ವಾರ ವರದಿಯಾಗಿತ್ತು.

ಕಾಂಗ್ನಿಜೆಂಟ್ ಇಂಡಿಯಾದ ನಿರ್ದೇಶಕ ಆರ್​. ರಾಮಕುಮಾರ್ ಅವರು ಸಿಐಐ ಕನೆಕ್ಟ್ 2019 ಅಂತಾರಾಷ್ಟ್ರೀಯ ಮಾಹಿತಿ ಮತ್ತು ಸಂವಹನ ಸಮ್ಮೇಳನ ಹಾಗೂ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಂತಹ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಮಾನವ ಸಂಪನ್ಮೂಲ ವಿಶ್ವದಲ್ಲಿ ಬೇರೆ ದೇಶಗಳಲ್ಲಿ ಇಲ್ಲ. ಎಸ್‌ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಲಭ್ಯತೆಯಂತಹ ವಿಷಯಗಳಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಕಾಗ್ನಿಜೆಂಟ್ ತಂತ್ರಜ್ಞಾನ ಪ್ರತಿಭೆಯ ಅತಿದೊಡ್ಡ ಫಲಾನುಭವಿಗಳನ್ನು ಪಡೆಯಲಿದೆ ಎಂದರು.

2020ರ ನೇಮಕಾತಿ ಪಟ್ಟಿಯಲ್ಲಿ ಬಿಪಿಒ ಪ್ರತಿಭೆ ಒಳಗೊಂಡಿಲ್ಲ. ಎಂಜಿನಿಯರಿಂಗ್ ಕ್ಯಾಂಪಸ್‌ ನೇಮಕಾತಿಯಲ್ಲಿ ಕಂಪನಿಯು ಈವರೆಗೆ ಸುಮಾರು 50,000 ಆಫರ್​ಗಳನ್ನು ನೀಡಿದೆ. ಕಳೆದ ಐದು ವರ್ಷಗಳಲ್ಲಿ ಕಾಗ್ನಿಜೆಂಟ್ ಭಾರತದಲ್ಲಿ 66,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು. ಅದನ್ನು ಈ ವರ್ಷ 75,000ಕ್ಕೆ ಹೆಚ್ಚಿಸಿದೆ ಎಂದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.