ನವದೆಹಲಿ: ಕಳೆದ 7 ದಿನಗಳಲ್ಲಿ ಕಾಫಿ ಡೇ ಎಂಟರ್‌ಪ್ರೈಸಸ್‌ನ ಷೇರುಗಳ ಮೌಲ್ಯ ಶೇಕಡಾ 70 ರಷ್ಟು ಹೆಚ್ಚಾಗಿದೆ. ಹಿಂದಿನ ವಾರದ ಲಾಭವನ್ನು ಅನುಸರಿಸಿ, ವಹಿವಾಟಿನ ಮೊದಲ ದಿನದ ಅವಧಿಯಲ್ಲಿ 6 ಪ್ರತಿಶತದಷ್ಟು ಲಾಭದೊಂದಿಗೆ ಈ ವಾರವನ್ನು ಆರಂಭಗೊಳಿಸಿದೆ ಎಂದು ಗುಡ್ ರಿಟರ್ನ್ಸ್ ವರದಿ ಮಾಡಿದೆ.
ಇದನ್ನು ಓದಿ: ಸಿದ್ದಾರ್ಥ ಹೆಗ್ಡೆ ಕನಸಿನ ಕೂಸು 'ಕೆಫೆ ಕಾಫಿ ಡೇ' ಕಂಪನಿಗೆ ಮರುಜೀವ ನೀಡಿದ ಮಾಳವಿಕಾ ಹೆಗ್ಡೆ
ಕಂಪನಿಯ ಷೇರುಗಳ ಬೆಲೆ ಇಂದು ಮಧ್ಯಾಹ್ನ 1:36 ರ(ಮಂಗಳವಾರ) ವೇಳೆಗೆ 69 ರೂ. ನಲ್ಲಿ ವಹಿವಾಟು ನಡೆಸುತ್ತಿತ್ತು. 52 ವಾರಗಳ ಗರಿಷ್ಠ ಮೊತ್ತವನ್ನು ತಲುಪಿರುವ ಕಾಫಿ ಡೇ ಎಂಟರ್‌ಪ್ರೈಸಸ್, 52 ವಾರಗಳ ಹಿಂದೆ ಕೇವಲ 20 ರೂ. ಮೌಲ್ಯದೊಂದಿಗೆ ವ್ಯವಹಾರ ನಿರತವಾಗಿತ್ತು. ಕೆಫೆ ಕಾಫಿ ಡೇ ಅತ್ಯಂತ ಜನಪ್ರಿಯ ಭಾರತೀಯ ಬಹುರಾಷ್ಟ್ರೀಯ ಕಾಫಿಹೌಸ್ ಸರಣಿಯಾಗಿದೆ. ಇದು ಕಾಫಿ ಡೇ ಎಂಟರ್‌ಪ್ರೈಸಸ್‌ನ ಅಂಗಸಂಸ್ಥೆಯೂ ಆಗಿದೆ.
ಇದನ್ನೂ ಓದಿ:Today Gold Rate: ಬಂಗಾರ ಮತ್ತಷ್ಟು ತುಟ್ಟಿ.. ಚಿನ್ನಾಭರಣ ಪ್ರಿಯರಿಗೆ ಶಾಕ್