ನವದೆಹಲಿ: ಪ್ರಸ್ತುತ ದೇಶದ ಆರ್ಥಿಕತೆಯ ಹಿಡಿತ ತಪ್ಪಿದೆ. ವಿತ್ತೀಯ ನೀತಿ ಪರಾಮರ್ಶಕರು ಇದರ ಆರ್ಥಿಕತೆಯ ಬೆಳವಣಿಗೆಯನ್ನು ಪ್ರಚೋದಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ಲೇಷಿಸಿದ್ದಾರೆ.
ಇಂದು ನಡೆದ ವಿತ್ತೀಯ ನೀತಿ ಪರಾಮರ್ಶೆ ಸಭೆಗೂ ಮುನ್ನ ಸುದ್ದಿಗಾರರೊಂದಿ ಮಾತನಾಡಿದ ಅವರು, ದೊಡ್ಡ ಆರ್ಥಿಕ ವಲಯದ ಚಟುವಟಿಕೆಗಳು ಕಳೆಗುಂದುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. 2019ರ ಏಪ್ರಿಲ್ ತಿಂಗಳ ವಿತ್ತೀಯ ನೀತಿ ಪರಾಮರ್ಶೆ ಸಭೆಯಿಂದಲೂ ರೆಪೊ ದರವನ್ನು ಇಳಿಕೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಆರ್ಥಿಕ ಚಟುವಟಿಕೆಗಳು ಕುಸಿತ ಆಗುತ್ತಿರುವುದರಿಂದಾಗಿ ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 5.8ಕ್ಕೆ ತಲುಪಿತ್ತು ಎಂದು ಕುಸಿತದ ಪ್ರಮಾಣ ಉಲ್ಲೇಖಿಸಿದರು.
2019-20ರ ಹಣಕಾಸು ವರ್ಷದಲ್ಲಿ ಹಣದುಬ್ಬರವನ್ನು ಶೇ 4ರ ಕೆಳಗೆ ಕಾಪಾಡಿಕೊಳ್ಳಲು ಈ ಹಿಂದಿನ ಎರಡೂ ವಿತ್ತೀಯ ನೀತಿ ಪರಾಮರ್ಶೆ ಸಭೆಗಳಲ್ಲಿ ರೆಪೊ ದರ ತಗ್ಗಿಸಿದ್ದೇವು. ಇದು ನಿಧಾನಗತಿಯ ಆರ್ಥಿಕತೆಯ ಸೂಚಕವಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.