ನವದೆಹಲಿ : 13,500 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಡೊಮಿನಿಕಾ ನ್ಯಾಯಾಲಯ ತಡೆಯೊಡ್ಡಿದೆ.
ಡೊಮಿನಿಕಾದಲ್ಲಿ ಚೋಕ್ಸಿ ಅವರು ಬಂಧನಕ್ಕೆ ಒಳಗಾಗಿದ್ದು, ಡೊಮಿನಿಕಾ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ನ್ಯಾಯಾಲಯ ಚೋಕ್ಸಿ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿದೆ ಎಂದು ಅವರ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.
ಆಂಟಿಗುವಾದಿಂದ ಹಡಗಿನಲ್ಲಿ ಡೊಮಿನಿಕಾಗೆ ಕರೆದೊಯ್ಯಲಾಯಿತು. ಸೋಮವಾರವಷ್ಟೇ ಚೋಕ್ಸಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ಸುದ್ದಿ ಬುಧವಾರ ಹೊರ ಬಿದ್ದಿದೆ. ಅವರ ದೇಹದಲ್ಲಿ ಗುರುತುಗಳಿವೆ ಎಂದು ಹೇಳಿದರು.
ಕಾನೂನು ತಂಡವು ಡೊಮಿನಿಕಾದಲ್ಲಿ ಮೆಹುಲಿ ಚೋಕ್ಸಿಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದೆ. ಮೆಹುಲ್ ಚೋಕ್ಸಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನಿರಾಕರಿಸಲಾಗಿದೆ. ಇದು ಸಾಂವಿಧಾನಿಕ ಹಕ್ಕುಗಳ ಅಭಾವವನ್ನು ಎತ್ತಿತೋರಿಸಿದೆ ಎಂದು ಕಾನೂನು ಸಲಹೆಗಾರ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ.
ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಬೇಕಾದ ಚೋಕ್ಸಿಯನ್ನು ಡೊಮಿನಿಕಾದಲ್ಲಿ ವಶಕ್ಕೆ ತೆಗೆದುಕೊಂಡ ನಂತರ, ವಕೀಲರ ಹೇಳಿಕೆಗಳು ಹೊರ ಬಿದ್ದಿವೆ. ಆಂಟಿಗುವಾ ಮತ್ತು ಬಾರ್ಬುಡಾದಿಂದ ಚೋಕ್ಸಿ ಭಾನುವಾರ ಕಾಣೆಯಾಗಿದ್ದರು. ಅಲ್ಲಿ ಅವರು ಪೌರತ್ವ ಪಡೆದಿದ್ದರು.
ಆಂಟಿಗುವಾ ಮತ್ತು ಡೊಮಿನಿಕಾದ ವಕೀಲರು ಡೊಮಿನಿಕಾದಲ್ಲಿ ಅವರ ಹಕ್ಕುಗಳ ಪ್ರಕಾರವೇ ಚೋಕ್ಸಿ ಅವರೊಂದಿಗೆ ಕಾನೂನು ಸಂದರ್ಶನ ನಡೆಸಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಅವರಿಗೆ ಯಾವುದೇ ರೀತಿಯ ಕಾನೂನು ಸಲಹೆಯ ಅನುಮತಿ ನಿರಾಕರಿಸಲಾಗಿದೆ. ಹೆಚ್ಚಿನ ಪ್ರಯತ್ನದ ನಂತರ, ಅವರು ಅವರೊಂದಿಗೆ ಮಾತನಾಡಲು ಎರಡು ನಿಮಿಷಗಳ ಕಾಲ ಅವಕಾಶ ನೀಡಲಾಗಿದೆ ಎಂದು ಎಂದರು.