ETV Bharat / business

ಅಮೆರಿಕ​ ಮೇಲೆ​ 2009ರ ಮಹಾ ಅಸ್ತ್ರ ಮರುಪ್ರಯೋಗಿಸಿದ ಚೀನಾ - ಅಮೆರಿಕದಲ್ಲಿ ಚೀನಾ ಹೂಡಿಕೆ

ನೇರ ಹೂಡಿಕೆಯು ಕಚೇರಿ ಮತ್ತು ಕಾರ್ಖಾನೆಗಳ ವಿಲೀನ, ಸ್ವಾಧೀನ ಮತ್ತು ಹೂಡಿಕೆಗಳನ್ನು ಒಳಗೊಂಡಿರುತ್ತದೆ. ಆದರೆ, ಷೇರು ಮತ್ತು ಬಾಂಡ್‌ಗಳ ಖರೀದಿಯಂತಹ ಹಣಕಾಸಿನ ಹೂಡಿಕೆಗಳು ಒಳಗೊಂಡಿರುವುದಿಲ್ಲ.

US China Trade
ಅಮೆರಿಕ ಚೀನಾ ವಾಣಿಜ್ಯ ಸಂಬಂಧ
author img

By

Published : May 11, 2020, 4:38 PM IST

ವಾಷಿಂಗ್ಟನ್: ಕೊರೊನಾ ವೈರಸ್ ಸಾಂಕ್ರಾಮಿಕವು ಜಾಗತಿಕ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸುವ ಮುಂಚೆಯೇ ಅಮೆರಿಕದಲ್ಲಿ ಚೀನಾದ ನೇರ ಹೂಡಿಕೆಯು ದಶಕದ ಹಿಂದಿನ (2009) ಮಹಾ ಆರ್ಥಿಕ ಹಿಂಜರಿತದ ನಂತರದ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಅಮೆರಿಕದಲ್ಲಿನ ಬೀಜಿಂಗ್ ಹೂಡಿಕೆಯ ಕುಸಿತ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಉದ್ವಿಗ್ನತೆ ಮತ್ತು ಸಾಗರೋತ್ತರ ಹೂಡಿಕೆಯ ಮೇಲೆ ಡ್ರ್ಯಾಗನ್​ ಸರ್ಕಾರದ ನಿರ್ಬಂಧಗಳ ಪ್ರತಿಬಿಂಬವಾಗಿದೆ.

ಅಮೆರಿಕ- ಚೀನಾ ಸಂಬಂಧದ ರಾಷ್ಟ್ರೀಯ ಸಮಿತಿ ಮತ್ತು ರೋಡಿಯಮ್ ಗ್ರೂಪ್ ಕನ್ಸಲ್ಟೆನ್ಸಿಯಿಂದ ಸೋಮವಾರ ಹೊರಬಿದ್ದ ವರದಿಯ ಪ್ರಕಾರ, ಅಮೆರಿಕದಲ್ಲಿ ಚೀನಾದ ನೇರ ಹೂಡಿಕೆ 2018ಕ್ಕೆ 5.4 ಬಿಲಿಯನ್ ಅಮೆರಿಕನ್​ ಡಾಲರ್​ನಿಂದ ಕಳೆದ ವರ್ಷ 5 ಬಿಲಿಯನ್ ಡಾಲರ್​ಗೆ ಇಳಿದಿದೆ. ಇದು 2009ರ ಆರ್ಥಿಕ ಹಿಂಜರಿತದ ನಂತರದ ಕನಿಷ್ಠ ಮಟ್ಟವಾಗಿದೆ.

ಈ ವರ್ಷ ಜನವರಿ-ಮಾರ್ಚ್‌ನಿಂದ ಅಮೆರಿಕದಲ್ಲಿ ಚೀನಾದ ನೇರ ಹೂಡಿಕೆ ವಾಸ್ತವಿಕವಾಗಿ 200 ಮಿಲಿಯನ್ ಡಾಲರ್‌ ನಷ್ಟು ಕಣ್ಮರೆಯಾಗಿದೆ ಎಂದು ವರದಿ ಕಂಡುಕೊಂಡಿದೆ. ಕೊರೊನಾ ಸಾಂಕ್ರಾಮಿಕವು ವಿಶ್ವ ಆರ್ಥಿಕತೆಯನ್ನು ಮೂಲೆಗೆ ತಳ್ಳಿದೆ. ಕಳೆದ ವರ್ಷ ಚೀನಾದಲ್ಲಿ ಅಮೆರಿಕದ ಹೂಡಿಕೆ 2018ಕ್ಕೆ 13 ಬಿಲಿಯನ್ ಡಾಲರ್‌ನಿಂದ 14 ಬಿಲಿಯನ್ ಡಾಲರ್‌ಗೆ ಏರಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.