ನವದೆಹಲಿ: ಹೆಚ್ಚುತ್ತಿರುವ ಭಾರತ-ಚೀನಾ ಗಡಿ ಉದ್ವಿಗ್ನತೆಯಿಂದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಚೀನಾದಿಂದ ಫಿಶಿಂಗ್ ದಾಳಿ ಮುನ್ನೆಚ್ಚರಿಕೆ ಮಧ್ಯೆಯೂ ಚೀನಿ ಹ್ಯಾಕರ್, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರ ಇಲಾಖೆಯ ಪ್ರಮುಖ ವೆಬ್ಸೈಟ್ವೊಂದನ್ನು ಹ್ಯಾಕ್ ಮಾಡಿದೆ.
ಎಫ್‌ಡಿಐಯ ಮೂಲಕ ಭಾರತ ಪ್ರವೇಶಿಸುವ ವಿದೇಶಿ ಕಂಪನಿಗಳ ಚಟುವಟಿಕೆಯ ಹೊಣೆಗಾರಿಕೆಯನ್ನು ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ನೋಡಿಕೊಳ್ಳುತ್ತದೆ. ಡಿಪಿಐಐಟಿ ಸೈಟ್ ಪರದೆಯ ಮೇಲೆ ಚೀನಿ ಪತ್ರವೊಂದು ಕಾಣಿಸಿಕೊಂಡಿದೆ. ಅದು "ಧ್ಯಾನ"ನ (Meditation)ದಂತೆ ಕಾಣುತ್ತಿದೆ.
ಕೇಂದ್ರ ಸರ್ಕಾರದ ಕಣ್ಗಾವಲಿನಲ್ಲಿ ವಿದೇಶಿ ಕಂಪನಿಗಳು ಹೂಡಿಕೆ ಮಾಡಬೇಕು ಎಂಬ ಷರತ್ತನ್ನು ಇತ್ತೀಚೆಗೆ ಜಾರಿಗೆ ತರಲಾಯಿತು. ಚೀನಾ ಮೂಲದ ಕೆಲವು ಎಫ್ಡಿಐಗಳಿಗೆ ಕಡಿವಾಣ ಬಿದ್ದಿದ್ದರಿಂದ ಚೀನಿ ಹ್ಯಾಕರ್‌ಗಳು ಡಿಪಿಐಐಟಿಯ ವೆಬ್‌ಸೈಟ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಹ್ಯಾಕ್ ಬಳಿಕ ವೆಬ್‌ಸೈಟ್ ಪರಿಷ್ಕರಿಸಲಾಗಿದೆ.
ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಡಿಪಿಐಐಟಿಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ವೆಬ್‌ಸೈಟ್ ನಿಜಕ್ಕೂ ಹ್ಯಾಕ್ ಆಗಿದೆ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕಟಣೆ ಬಿಡುಗಡೆ ಮಾಡಲು ಸಚಿವಾಲಯ ಚಿಂತನೆ ನಡೆಸುತ್ತಿದೆ. ಹ್ಯಾಕ್ನ ಸ್ಕ್ರೀನ್ ಶಾಟ್ ತನ್ನ ಬಳಿ ಇರುವುದಾಗಿ ಸುದ್ದಿ ಸಂಸ್ಥೆಯೊಂದು ಹೇಳಿದೆ.