ETV Bharat / business

ಭಾರತದಲ್ಲಿ ಬ್ಯಾನ್​ ಆಗದ ಚೀನಾ ಆ್ಯಪ್​ಗಳಿವು.. ಕಾರಣ ಗೊತ್ತೇ? - PUBG Mobile

ರಾಷ್ಟ್ರೀಯ ಭದ್ರತೆ ಮತ್ತು ಗೌಪ್ಯತೆ ದೃಷ್ಟಿಯಿಂದ ಭಾರತ ಸರ್ಕಾರ ಸೋಮವಾರ ಚೀನಾದ 59 ಆ್ಯಪ್​ಗಳನ್ನು​ ಬ್ಯಾನ್​ ಮಾಡಿ ಆದೇಶ ನೀಡಿದೆ. ಆದರೂ ಚೀನಾದ ಹಲವಾರು ಜನಪ್ರಿಯ ಆ್ಯಪ್​ಗಳು ಇನ್ನೂ ನಿಷೇಧವಾಗಿಲ್ಲ.

PUBG
ಪಬ್‌ಜಿ
author img

By

Published : Jun 30, 2020, 2:07 PM IST

ನವದೆಹಲಿ: ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ದೇಶದೆಲ್ಲೆಡೆ ಕೂಗು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆ ಮತ್ತು ಗೌಪ್ಯತೆ ದೃಷ್ಟಿಯಿಂದ ಭಾರತ ಸರ್ಕಾರ ಸೋಮವಾರ ಟಿಕ್​ ಟಾಕ್, ಯುಸಿ ಬ್ರೌಸರ್​​​ ಸೇರಿದಂತೆ ಚೀನಾದ 59 ಆ್ಯಪ್​ಗಳನ್ನು​ ಬ್ಯಾನ್​ ಮಾಡಿ ಆದೇಶ ನೀಡಿದೆ. ಆದರೂ ಹಲವಾರು ಜನಪ್ರಿಯ ಆ್ಯಪ್​ಗಳು ಈ ಪಟ್ಟಿಯಲ್ಲಿಲ್ಲ.

ಭಾರತದಲ್ಲಿ ಬ್ಯಾನ್​ ಆಗದ ಚೀನಾ ಆ್ಯಪ್​ಗಳು:

  • ಪಬ್‌ಜಿ ಮೊಬೈಲ್ (PUBG Mobile)
  • ಎಂವಿ ಮಾಸ್ಟರ್ (MV Master)
  • ಅಲಿ ಎಕ್ಸ್ಪ್ರೆಸ್​ ( AliExpress)
  • ಟರ್ಬೊ ವಿಪಿಎನ್ (TurboVPN)
  • ಡೊಮೊಬೈಲ್​ನ ಆ್ಯಪ್​ಲಾಕ್ (App Lock by DoMobile)
  • ರೋಜ್ ಬುಜ್​ ವಿ ಮೀಡಿಯಾ (Rozz Buzz we media)
  • 360 ಸೆಕ್ಯುರಿಟಿ ( 360 Security)
  • ಆ್ಯಪ್​ಲಾಕ್ಸ್​ (App locks)
  • ನೊನೊ ಲೈವ್ (Nono live)
  • ಗೇಮ್ ಆಫ್ ಸುಲ್ತಾನ್ಸ್ (Game of Sultans)
  • ಮಾಫಿಯಾ ಸಿಟಿ (Mafia City)
  • ಬ್ಯಾಟಲ್ ಆಫ್ ಎಂಪೈರ್ಸ್ (Battle of Empires)

ಭಾರತದ ಸಾರ್ವಭೌಮತ್ವ, ರಕ್ಷಣೆ, ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ 59 ಆ್ಯಪ್​ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸ್ಪಷ್ಟನೆ ನೀಡಿದೆ.

ಭಾರತದಲ್ಲಿ ವಿವಾದಾತ್ಮಕ PUBG ಏಕೆ ನಿಷೇಧವಾಗಿಲ್ಲ?

ಪಬ್‌ಜಿ, ಸಂಪೂರ್ಣವಾಗಿ ಚೀನಾ ಆ್ಯಪ್​ ಅಲ್ಲ. ದಕ್ಷಿಣ ಕೊರಿಯಾದ ಬ್ಲೂ ಹೋಲ್ ಎಂಬ ಕಂಪನಿ ಇದನ್ನು ರಚಿಸಿ, ನಿರ್ವಹಿಸುತ್ತಿತ್ತು. ಆದರೆ PUBG ಜನಪ್ರಿಯವಾದ ಬಳಿಕ ಬ್ಲೂ ಹೋಲ್‌ ಜೊತೆ ಚೀನಾ ಕಂಪನಿ ಟೆನ್ಸೆಂಟ್ ಕೈಜೋಡಿಸಿತು. ಆನಂತರ ಪಬ್‌ಜಿಯ ಹೆಚ್ಚಿನ ನಿರ್ವಹಣೆಯನ್ನು ಚೀನಾ ವಹಿಸಿಕೊಂಡಿತು. ಹೀಗಾಗಿ ಸದ್ಯ ಪಬ್​ಜಿ ಜಂಟಿ ಮಾಲೀಕತ್ವದಲ್ಲಿರುವುದರಿಂದ ಭಾರತ ಸರ್ಕಾರ ಇದನ್ನು ನಿಷೇಧಿಸುವ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ.

ಇದು ಪಬ್‌ಜಿ ವಿಷಯವಾದರೆ ಉಳಿದ ಈ ಮೇಲಿನ ಆ್ಯಪ್​ಗಳು ಬ್ಯಾನ್ ಆಗದಿರಲು ಕೆಲ ಕಾರಣಗಳಿವೆ. ಈ ಆ್ಯಪ್​ಗಳು ಬಳಕೆದಾರರ ಸುರಕ್ಷತೆಗೆ ಅಪಾಯವನ್ನುಂಟುಮಾಡಲಿಲ್ಲ. ಆದರೂ ಈ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಮುಂದೆ ಇದನ್ನು ನಿಷೇಧಿಸುವ ಸಾಧ್ಯತೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.