ನವದೆಹಲಿ: ಸಾಂಕ್ರಾಮಿಕ ರೋಗದ ಮಧ್ಯೆ ಕೇಂದ್ರವು ಬುಧವಾರ ದೇಶೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಸಮಾಲೋಚನಾ ಸಭೆ ನಡೆಸಲಿದೆ.
ಕೋವಿಡ್ -19 ಪ್ರಭಾವವನ್ನು ಅರಿಯಲು ಮತ್ತು ಪ್ರಾದೇಶಿಕ ಸಂಪರ್ಕ ಪುನಃಸ್ಥಾಪಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಉದ್ಯಮದ ಮೂಲಗಳು ಹೇಳುತ್ತವೆ.
ಕೇಂದ್ರವು ವಿಮಾನಯಾನ ಸಂಸ್ಥೆಗಳಿಗೆ ತಮ್ಮ ಪೂರ್ವ ಕೋವಿಡ್ ಹಾರಾಟದ ಶೇ 80ರಷ್ಟು ವಿಮಾನಗಳನ್ನು ನಿಯೋಜಿಸಲು ಅವಕಾಶ ಮಾಡಿಕೊಟ್ಟಿದೆ. ದೇಶೀಯ ಪ್ರಯಾಣಿಕರ ದಟ್ಟಣೆ ಕ್ರಮೇಣ ಮೇ 25ರಂದು 30,000ದಿಂದ ನವೆಂಬರ್ 30ತ ವೇಳೆಗೆ 2.52 ಲಕ್ಷಕ್ಕೆ ಏರಿಕೆಯಾಗಿದೆ.
ಓದಿ: ಏರ್ಟೆಲ್, ಐಡಿಯಾ - ವೊಡಾ ಹಿಂದಿಕ್ಕಿ ಜಿಯೋ ಭಾರತದ ಅತ್ಯಂತ ವೇಗದ ನೆಟ್ವರ್ಕ್!
ದೇಶೀಯ ವಿಮಾನ ಸೇವೆಗಳನ್ನು ಮಾರ್ಚ್ 25 ರಿಂದ ಮೇ 25 ರವರೆಗೆ ಸ್ಥಗಿತಗೊಳಿಸಲಾಗಿತ್ತು. ವಿಶೇಷ ಮತ್ತು 'ಏರ್ ಬಬಲ್' ವಿಮಾನ ಹೊರತುಪಡಿಸಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಈಗಲೂ ಸ್ಥಗಿತಗೊಳಿಸಲಾಗಿದೆ.