ನವದೆಹಲಿ: ಕೆಫೆ ಕಾಫಿ ಡೇ ಮೂಲಕ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿದ್ದ ಕರ್ನಾಟಕದ ಯಶಸ್ವಿ ಉದ್ಯಮಿ ವಿ.ಜಿ.ಸಿದ್ಧಾರ್ಥ ಸಾವನ್ನಪ್ಪಿದ ಪರಿಣಾಮ ಇವರ ಒಡೆತನದ ಕಾಫಿ ಡೇ ಷೇರು ವ್ಯವಹಾರ ಎರಡನೇ ದಿನದ ಆರಂಭದಲ್ಲಿ ದೊಡ್ಡ ಕುಸಿತ ಅನುಭವಿಸಿದೆ.
ಸಿದ್ಧಾರ್ಥ ನಾಪತ್ತೆಯಾದ ಮರುದಿನ(ಜುಲೈ 30)ರ ವಹಿವಾಟಿನಲ್ಲಿ ಕಾಫಿ ಡೇ ಷೇರುಗಳು ಶೇ.20ರಷ್ಟು ಕುಸಿತ ಕಂಡಿತ್ತು. ಇಂದು ಸಿದ್ಧಾರ್ಥ ಮೃತದೇಹ ಪತ್ತೆಯಾದ ಬೆನ್ನಲ್ಲೇ ಇಂದಿನ ವಹಿವಾಟು ಸಹ ನೀರಸ ಆರಂಭ ಪಡೆದಿದೆ.
ಭಾರತೀಯರ ಮನಸ್ಸಿನಲ್ಲಿ ಕಾಫಿ ಬೀಜ ಬಿತ್ತಿದ ಸಿದ್ಧಾರ್ಥ್... ಇದು ಕಾಫಿ ಡೇ ಸಕ್ಸಸ್ ಸ್ಟೋರಿ!
ಬುಧವಾರದ ಇಂದಿನ ವಹಿವಾಟಿನಲ್ಲಿ ಕಾಫಿ ಡೇ ಷೇರು ಮತ್ತೆ ಶೇ.20ರಷ್ಟು ಇಳಿಕೆಯಾಗಿ 52 ವಾರದಲ್ಲೇ ಕನಿಷ್ಠ ವಹಿವಾಟು ನಡೆಸಿದೆ. ಮಂಗಳವಾರ 154ರೂ ಹೊಂದಿದ್ದ ಷೇರುಗಳು ಇಂದು 123 ರೂ.ಗೆ ಬಂದು ನಿಂತಿದೆ. ಒಟ್ಟಾರೆ 30ರೂ.ನಷ್ಟು ಇಳಿಕೆ ಕಂಡಿದೆ.