ಹೈದರಾಬಾದ್: 90ರ ದಶಕದಲ್ಲಿ ಭಾರತದ ಅತಿದೊಡ್ಡ ಕಾಫಿ ರಫ್ತುದಾರರಾಗಿದ್ದ ವಿ.ಜಿ ಸಿದ್ಧಾರ್ಥ್ ಅವರಿಗೆ ಕಾಫಿ ಡೇ ಮಾಡುವ ಕನಸು ಹೇಗೆ ಬಂತು ಎಂಬುದು ಕುತೂಹಲಕಾರಿ ಸಂಗತಿ.
ಕಾಫಿಡೇ ಒಂದು ಉದ್ಯಮವಷ್ಟೇ ಅಲ್ಲ ಸಿದ್ಧಾರ್ಥ್ ಅವರ ನೂರು ಬಿಲಿಯನ್ ಕನಸು. ವಿಶ್ವ ಶ್ರೇಷ್ಟ ಬ್ರಾಂಡ್ ಆಗಿ ಬೆಳೆದ ಕಾಫಿ ಡೇ ಜರ್ಮನಿಯ ಚಿಬೊ ಎನ್ನುವ ಕಾಫಿ ಚೈನ್ ಬ್ಯುಸಿನೆಸ್ನ ಭಾರತೀಯ ಅವತರಣಿಕೆ.
ಕಾಫಿ ಸಾಮ್ರಾಟನ ದುರಂತ ಅಂತ್ಯ... ಕಾಫಿ ಡೇ ಷೇರಿನಲ್ಲಿ ಸಾರ್ವಕಾಲಿಕ ಕುಸಿತ..!
ಒಮ್ಮೆ ಸಿದ್ಧಾರ್ಥ್ ಅವರು ಚಿಬೊ ಸಂಸ್ಥೆಯ ಮಾಲೀಕರನ್ನು ಭೇಟಿಯಾಗಿ ಚರ್ಚೆ ಮಾಡಿದ್ದರು. ನೂರು ವರ್ಷದಿಂದ ಕಾಫಿ ಉದ್ಯಮದಲ್ಲಿರುವ ನೀವು ಹೇಗೆ ಇಷ್ಟು ಶ್ರೀಮಂತರಾದಿರಿ ಎಂದು ಸಿದ್ಧಾರ್ಥ್ ಕೇಳಿದ್ದರಂತೆ. ಅದಕ್ಕೆ ಅವರು ನೂರಲ್ಲ 140 ವರ್ಷಗಳಿಂದ ನಾವು ಕಾಫಿ ಉದ್ಯಮದಲ್ಲಿದ್ದೇವೆ. ನಮ್ಮ ತಾತ ಎರಡನೇ ಮಹಾ ಯುದ್ಧದ ನಂತರ 1948ರಲ್ಲಿ ಹ್ಯಾಂಬರ್ಗ್ನಲ್ಲಿ ಕೇವಲ 10/10 ಜಾಗದಲ್ಲಿ ಕಾಫಿ ಉದ್ಯಮ ಆರಂಭಿಸಿದರು ಎನ್ನುವ ಮಾತು ಹೇಳಿದರು.
ಭಾರತೀಯರ ಮನಸ್ಸಿನಲ್ಲಿ ಕಾಫಿ ಬೀಜ ಬಿತ್ತಿದ ಸಿದ್ಧಾರ್ಥ್... ಇದು ಕಾಫಿ ಡೇ ಸಕ್ಸಸ್ ಸ್ಟೋರಿ!
ಚಿಬೊ ಒಡೆಯನ ಮಾತು ಕೇಳಿದ ಸಿದ್ಧಾರ್ಥ್ ಅವರ ಮಿದುಳಿನಲ್ಲಿ ಬಹಳಷ್ಟು ನಂಬರ್ಗಳು ಹಾದುಹೋದವು. ಆ ರಾತ್ರಿ ಅವರು ನಿದ್ರೆ ಮಾಡಲಿಲ್ಲ. ವಿಶ್ವದಲ್ಲಿ ವರ್ಷಕ್ಕೆ 120 ಮಿಲಿಯನ್ ಚೀಲ ಕಾಫಿ ಬೀಜ ಉತ್ಪಾದನೆಯಾಗುತ್ತದೆ. ಅದರ ಬೆಲೆ ಸರಿಸುಮಾರು 7 ಬಿಲಿಯನ್ ಡಾಲರ್. ಅದೇ ಬೀಜವನ್ನು ಸಂಸ್ಕರಿಸಿ ಕಪ್ ರೂಪದಲ್ಲಿ ಮಾರಾಟ ಮಾಡಿದರೆ ಅದರ ಬೆಲೆ ವರ್ಷಕ್ಕೆ 100 ಬಿಲಿಯನ್ ಡಾಲರ್.
ಈ ಅಂಕಿ ಅಂಶಗಳಿಂದ ಅಚ್ಚರಿಗೊಳಗಾದ ಸಿದ್ಧಾರ್ಥ್ ಜರ್ಮನಿಯ ಚಿಬೊ ಕಾಫಿ ಚೈನ್ನಂತೆ ಭಾರತದಲ್ಲಿ ಕಾಫಿ ಡೇ ಎಂಬ ಕಾಫಿ ಚೈನ್ ಆರಂಭಿಸಿದರು. ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆರಂಭವಾದ ಸುಸಜ್ಜಿತ ಕಾಫಿ ಡೇ ಶಾಖೆಯು ಇಂದು ವಿಶ್ವಾದ್ಯಂತ 1700ಕ್ಕೂ ಹೆಚ್ಚು ಶಾಖೆಗಳಿಗೆ ವಿಸ್ತರಣೆಯಾಗಿದೆ.