ಪಾಣಿಪತ್ : ಕೋಟ್ಯಂತರ ರೂಪಾಯಿ ನಕಲಿ ವ್ಯವಹಾರ ಮತ್ತು ಜಿಎಸ್‌ಟಿ ವಂಚನೆ ಎಸಗಿದ ಪ್ರಕರಣವೊಂದು ಪಾಣಿಪತ್‌ನಲ್ಲಿ ಬೆಳಕಿಗೆ ಬಂದಿದೆ. ಕಲ್ಲಿದ್ದಲು ಉದ್ಯಮಿಯೊಬ್ಬರು 105 ಕೋಟಿ ರೂ. ಮೌಲ್ಯದ ನಕಲಿ ಬಿಲ್ ಕಡಿತಗೊಳಿಸಿ 19.25 ಕೋಟಿ ರೂ. ಜಿಎಸ್‌ಟಿ ವಂಚನೆ ಎಸಗಿದ್ದನ್ನು ಆದಾಯ ತರಿಗೆ ಇಲಾಖೆ ಅಧಿಕಾರಿಗಳು ದಾಳಿ ಮೂಲಕ ಬಹಿರಂಗಪಡಿಸಿದ್ದಾರೆ. ಪ್ರಕರಣ ಸಂಬಂಧ ಉದ್ಯಮಿ ಮೋಹಿತ್ ಬಾತ್ಲಾ ಅವರನ್ನು ಬಂಧಿಸಲಾಗಿದೆ.
ಜಿಎಸ್‌ಟಿಯ ಕೇಂದ್ರ ತಂಡ ದಾಳಿ ನಡೆಸಿ ಸುಮಾರು 2 ದಿನಗಳ ಕಾಲ ಲೆಕ್ಕ ಪರಿಶೋಧ ನಡೆಸಿತು. ಗುಜರಾತ್ ಕಂಪನಿಯೊಂದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಕಲ್ಲಿದ್ದಲು ಖರೀದಿ ವಹಿವಾಟಿನಲ್ಲಿ ಕಂಪನಿಯು ನಕಲಿ ಬಿಲ್ ಸೃಷ್ಟಿದೆ. ಅಧಿಕಾರಿಗಳ ತಂಡವು ಶುಕ್ರವಾರ ರಾತ್ರಿಯವರೆಗೆ ದಾಖಲೆಗಳನ್ನು ಪರಿಶೀಲಿಸುತ್ತಲೇ ಇತ್ತು.
ಇದನ್ನೂ ಓದಿ: ಜ.1ರಿಂದ ಬದಲಾಗುವ ಈ 10 ರೂಲ್ಸ್ ಬಗ್ಗೆ ಇರಲಿ ಎಚ್ಚರ : ಸ್ವಲ್ಪ ಯಾಮಾರಿದ್ರೂ ಜೇಬಿಗೆ ಕತ್ತರಿ!!
ಮುಂದಿನ ದಿನಗಳಲ್ಲಿ ಹೆಚ್ಚಿನ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಂಡು ಬಂಧಿಸುವ ಸಾಧ್ಯತೆ ಇದೆ. ದಂಧೆಯಲ್ಲಿ ಬಳಸಲಾದ ಅನೇಕ ಕಾಲ್ಪನಿಕ ಕಂಪನಿಗಳ ಜಾಲವನ್ನು ಇಲಾಖೆ ಪತ್ತೆ ಮಾಡಿದೆ. ಇದರಲ್ಲಿ ಹಲವು ಉದ್ಯಮಿಗಳು, ಪಾಲುದಾರರು ಇದ್ದಾರೆ ಎಂದು ಹೇಳಲಾಗುತ್ತಿದೆ.