ನವದೆಹಲಿ: ಬಿಎಸ್ಎನ್ಎಲ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ(ವಿಆರ್ಎಸ್) ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ ಉದ್ಯೋಗಿಗಳು ಇಂದಿನಿಂದ ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಬಿಎಸ್ಎನ್ಎಲ್ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 58 ಇಳಿಸುವ ಬೆದರಿಕೆ ಹಾಕಿದೆ. ನಾವು ವಿಆರ್ಎಸ್ ವಿರೋಧಿಸುತ್ತಿಲ್ಲ. ಆದರೆ ಕೆಳಹಂತದಲ್ಲಿರುವ ಉದ್ಯೋಗಿಗಳಿಗೆ ವಿಆರ್ಎಸ್ ಆಯ್ಕೆ ಅತ್ಯಂತ ಕಷ್ಟಕರವಾಗಿದೆ. ಸಂಸ್ಥೆಯ ಈ ನಡೆ ಎಲ್ಲ ಉದ್ಯೋಗಿಗಳ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದು ಆಲ್ ಇಂಡಿಯಾ ಯೂನಿಯನ್ಸ್ ಆ್ಯಂಡ್ ಅಸೋಸಿಯೇಷನ್ಸ್ ಆಫ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಸಂಯೋಜಕ ಪಿ.ಅಭಿಮನ್ಯು ಹೇಳಿದ್ದಾರೆ.
ಯೂನಿಯನ್ ಹೇಳುವಂತೆ, ವಿಆರ್ಎಸ್ ಆಯ್ಕೆ ಮಾಡಿಕೊಳ್ಳುವ ಉದ್ಯೋಗಿಗಳಿಗೆ ಪಿಂಚಣಿ ದೊರೆಯುವುದಿಲ್ಲ. ಕನಿಷ್ಠ ಮೊತ್ತದ ಕುಟುಂಬ ಪಿಂಚಣಿ ಮಾತ್ರವೇ ದೊರೆಯುತ್ತದೆ ಎಂದಿದೆ.
1.6 ಲಕ್ಷದಲ್ಲಿ 77,000 ಉದ್ಯೋಗಿಗಳು ವಿಆರ್ಎಸ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಬಿಎಸ್ಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪರ್ವಾರ್ ಹೇಳಿದ್ದಾರೆ.