ETV Bharat / business

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ನಾಯಕತ್ವ ಶ್ಲಾಘಿಸಿದ ಬಿಲ್ ಗೇಟ್ಸ್

author img

By

Published : Jan 5, 2021, 12:51 PM IST

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಅಂತ್ಯಗೊಳಿಸಲು ಜಗತ್ತು ಕಾರ್ಯನಿರ್ವಹಿಸುತ್ತಿದ್ದು, ವೈಜ್ಞಾನಿಕ ಆವಿಷ್ಕಾರ ಹಾಗೂ ಲಸಿಕೆ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರತದ ನಾಯಕತ್ವ ಅದ್ಭುತವಾಗಿದೆ ಎಂದು ಬಿಲ್ ಗೇಟ್ಸ್ ಟ್ವೀಟ್​​ ಮಾಡಿದ್ದಾರೆ.

Bill Gates
ಭಾರತದ ನಾಯಕತ್ವ ಶ್ಲಾಘಿಸಿದ ಬಿಲ್ ಗೇಟ್ಸ್

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತದ ಪ್ರಯತ್ನವನ್ನು ಅಮೆರಿಕದ ಉದ್ಯಮಿ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ.

ತಮ್ಮ ಟ್ವಿಟರ್​ ಖಾತೆಯಲ್ಲಿ ವೈಜ್ಞಾನಿಕ ಆವಿಷ್ಕಾರ ಹಾಗೂ ಲಸಿಕೆ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರತದ ನಾಯಕತ್ವವನ್ನು ಪ್ರಶಂಸೆ ಮಾಡಿರುವ ಬಿಲ್ ಗೇಟ್ಸ್, ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಟ್ವೀಟರ್​ ಖಾತೆಯನ್ನು (PMO India) ಟ್ಯಾಗ್​ ಮಾಡಿ ಪೋಸ್ಟ್​ ಮಾಡಿದ್ದಾರೆ.

  • It’s great to see India’s leadership in scientific innovation and vaccine manufacturing capability as the world works to end the COVID-19 pandemic @PMOIndia https://t.co/Ds4f3tmrm3

    — Bill Gates (@BillGates) January 4, 2021 " class="align-text-top noRightClick twitterSection" data=" ">

It’s great to see India’s leadership in scientific innovation and vaccine manufacturing capability as the world works to end the COVID-19 pandemic @PMOIndia https://t.co/Ds4f3tmrm3

— Bill Gates (@BillGates) January 4, 2021

"ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಅಂತ್ಯಗೊಳಿಸಲು ಜಗತ್ತು ಕಾರ್ಯನಿರ್ವಹಿಸುತ್ತಿದ್ದು, ವೈಜ್ಞಾನಿಕ ಆವಿಷ್ಕಾರ ಹಾಗೂ ಲಸಿಕೆ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರತದ ನಾಯಕತ್ವ ಅದ್ಭುತವಾಗಿದೆ" ಎಂದು ಬಿಲ್ ಗೇಟ್ಸ್ ಟ್ವೀಟ್​​ ಮಾಡಿದ್ದಾರೆ.

ಕಳೆದ ಏಪ್ರಿಲ್​ನಲ್ಲಿ ಪಿಎಂ ಮೋದಿಗೆ ಪತ್ರ ಬರೆದಿದ್ದ ಬಿಲ್ ಗೇಟ್ಸ್, ಕೊರೊನಾ ಸಂಬಂಧಿತ ಆರೋಗ್ಯ ಸೇವೆ, ಮಾಹಿತಿ, ಸೋಂಕಿತರ ಪತ್ತೆಗಾಗಿ ಭಾರತ ಸರ್ಕಾರ 'ಆರೋಗ್ಯ ಸೇತು' ಆ್ಯಪ್​ ಜೊತೆಗೆ ಅಸಾಧಾರಣ ಡಿಜಿಟಲ್ ಸಾಮರ್ಥ್ಯಗಳನ್ನು ಬಳಸಿಕೊಂಡಿರುವುದನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ: ಕೋವಿಡ್​ ಲಸಿಕೆ ವಿತರಿಸುವಲ್ಲಿ ಭಾರತದ ನಡೆ ಕೊಂಡಾಡಿದ ಡಬ್ಲ್ಯುಹೆಚ್‌ಒ ಮಹಾನಿರ್ದೇಶಕ!

ಇಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೂಡ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರಾಗಿ ಭಾರತ ಹೊರಹೊಮ್ಮುತ್ತಿರುವುದಕ್ಕೆ ಹಾಗೂ ಕೊರೊನಾ ಕೊನೆಗೊಳಿಸಲು ಭಾರತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತದ ಪ್ರಯತ್ನವನ್ನು ಅಮೆರಿಕದ ಉದ್ಯಮಿ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ.

ತಮ್ಮ ಟ್ವಿಟರ್​ ಖಾತೆಯಲ್ಲಿ ವೈಜ್ಞಾನಿಕ ಆವಿಷ್ಕಾರ ಹಾಗೂ ಲಸಿಕೆ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರತದ ನಾಯಕತ್ವವನ್ನು ಪ್ರಶಂಸೆ ಮಾಡಿರುವ ಬಿಲ್ ಗೇಟ್ಸ್, ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಟ್ವೀಟರ್​ ಖಾತೆಯನ್ನು (PMO India) ಟ್ಯಾಗ್​ ಮಾಡಿ ಪೋಸ್ಟ್​ ಮಾಡಿದ್ದಾರೆ.

  • It’s great to see India’s leadership in scientific innovation and vaccine manufacturing capability as the world works to end the COVID-19 pandemic @PMOIndia https://t.co/Ds4f3tmrm3

    — Bill Gates (@BillGates) January 4, 2021 " class="align-text-top noRightClick twitterSection" data=" ">

"ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಅಂತ್ಯಗೊಳಿಸಲು ಜಗತ್ತು ಕಾರ್ಯನಿರ್ವಹಿಸುತ್ತಿದ್ದು, ವೈಜ್ಞಾನಿಕ ಆವಿಷ್ಕಾರ ಹಾಗೂ ಲಸಿಕೆ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರತದ ನಾಯಕತ್ವ ಅದ್ಭುತವಾಗಿದೆ" ಎಂದು ಬಿಲ್ ಗೇಟ್ಸ್ ಟ್ವೀಟ್​​ ಮಾಡಿದ್ದಾರೆ.

ಕಳೆದ ಏಪ್ರಿಲ್​ನಲ್ಲಿ ಪಿಎಂ ಮೋದಿಗೆ ಪತ್ರ ಬರೆದಿದ್ದ ಬಿಲ್ ಗೇಟ್ಸ್, ಕೊರೊನಾ ಸಂಬಂಧಿತ ಆರೋಗ್ಯ ಸೇವೆ, ಮಾಹಿತಿ, ಸೋಂಕಿತರ ಪತ್ತೆಗಾಗಿ ಭಾರತ ಸರ್ಕಾರ 'ಆರೋಗ್ಯ ಸೇತು' ಆ್ಯಪ್​ ಜೊತೆಗೆ ಅಸಾಧಾರಣ ಡಿಜಿಟಲ್ ಸಾಮರ್ಥ್ಯಗಳನ್ನು ಬಳಸಿಕೊಂಡಿರುವುದನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ: ಕೋವಿಡ್​ ಲಸಿಕೆ ವಿತರಿಸುವಲ್ಲಿ ಭಾರತದ ನಡೆ ಕೊಂಡಾಡಿದ ಡಬ್ಲ್ಯುಹೆಚ್‌ಒ ಮಹಾನಿರ್ದೇಶಕ!

ಇಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೂಡ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರಾಗಿ ಭಾರತ ಹೊರಹೊಮ್ಮುತ್ತಿರುವುದಕ್ಕೆ ಹಾಗೂ ಕೊರೊನಾ ಕೊನೆಗೊಳಿಸಲು ಭಾರತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.