ETV Bharat / business

'ಮಲ್ಯ, ನೀರವ್, ಚೋಕ್ಸಿ ವಂಚನೆ ಪ್ರಕರಣ: 18,000 ಕೋಟಿ ರೂ. ಬ್ಯಾಂಕ್​​ಗೆ ಮರಳಿಸಲಾಗಿದೆ.. ಸುಪ್ರೀಂಗೆ ಸರ್ಕಾರದ ಹೇಳಿಕೆ - ನೀರವ್ ಮೋದಿ ವಂಚನೆ ಪ್ರಕರಣ

ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ 18,000 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ.

big amount  returned to banks from Mallya, Nirav & Choksi cases
ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ವಂಚನೆ ಪ್ರಕರಣ
author img

By

Published : Feb 23, 2022, 4:57 PM IST

Updated : Feb 23, 2022, 8:03 PM IST

ನವದೆಹಲಿ: ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ 18,000 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ಸಾಲಿಸಿಟರ್​ ಜನರಲ್​ ತುಷಾರ್ ಮೆಹ್ತಾ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​​ಗೆ ಅಫಿಡವಿಟ್​ ಸಲ್ಲಿಸಿರುವ ಕೇಂದ್ರ ಸರ್ಕಾರ, ನೀರವ್​​​​ ಮೋದಿ, ಮೆಹುಲ್​ ಚೋಕ್ಸಿ ಮತ್ತು ವಿಜಯ್​ ಮಲ್ಯರಿಂದ ಸುಮಾರು 18 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ- ಪಾಸ್ತಿ ವಶಕ್ಕೆ ಪಡೆದು ಬ್ಯಾಂಕ್​ಗೆ ಒಪ್ಪಿಸಲಾಗಿದೆ ಎಂದು ತುಷಾರ್​ ಮೆಹ್ತಾ ಹೇಳಿದ್ದಾರೆ.

ನ್ಯಾಯಮೂರ್ತಿ ಎ.ಎಂ, ಖಾನ್ವಿಲ್ಕರ್​​ ಅವರ ನೇತೃತ್ವದ ಪೀಠದ ಮುಂದೆ ವಿವರಣೆ ನೀಡಿದ ತುಷಾರ್ ಮೆಹ್ತಾ, ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣಗಳಲ್ಲಿನ ಅಪರಾಧಗಳ ಒಟ್ಟಾರೆ ಮೌಲ್ಯ 67 ಸಾವಿರಕೋಟಿ ರೂಗಳಾಗಿದ್ದು, ಜಾರಿ ನಿರ್ದೇಶನಾಲಯ ಸುಮಾರು 4,700 ಪ್ರಕರಣಗಳನ್ನು ತನಿಖೆ ಮಾಡುತ್ತಿದೆ.

ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷ ತನಿಖೆಗೆ ತೆಗೆದುಕೊಂಡ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಾ ಸಾಗಿದೆ. 2015-16 ರಲ್ಲಿ 111 ಪ್ರಕರಣಗಳಿದ್ದರೆ, 2020-21 ರಲ್ಲಿ 981 ಹೊಸ ಪ್ರಕರಣಗಳು ದಾಖಲಾಗಿವೆ ಎಂಬ ವಿಷಯವನ್ನು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದರು. ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ 18,000 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ಮೆಹ್ತಾ, ನ್ಯಾ ಖಾನ್ವಿಲ್ಕರ್​ ನೇತೃತ್ವದ ಪೀಠದ ಮುಂದೆ ಲಿಖಿತ ದಾಖಲೆ ಸಲ್ಲಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿಯ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ ಹಾಗೂ ಈ ಸಂಬಂಧಿತ ನಾನಾ ಕೇಸ್​​ಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​​ ವಿಚಾರಣೆ ನಡೆಸುತ್ತಿದೆ. ಕಳೆದ ಐದು ವರ್ಷಗಳಲ್ಲಿ (2016-17 ರಿಂದ 2020-21), ಪೊಲೀಸರು ಮತ್ತು ಜಾರಿ ನಿರ್ದೇಶನಾಲಯ ಹಾಗೂ ಸಂಬಂಧಿತ ಸಂಸ್ಥೆಗಳಿಂದ ಅಂದಾಜು 33 ಲಕ್ಷ ಕೇಸ್​ಗಳನ್ನು ದಾಖಲಿಸಲಾಗಿದೆ. ಪಿಎಂಎಲ್‌ಎ ಕಾಯ್ದೆ ಅಡಿ ಕೇವಲ 2,086 ಪ್ರಕರಣಗಳನ್ನು ತನಿಖೆಗೆ ತೆಗೆದುಕೊಳ್ಳಲಾಗಿದೆ ಎಂಬ ವಿಷಯವನ್ನು ಮೆಹ್ತಾ ಇದೇ ವೇಳೆ ಕೋರ್ಟ್​ ಗಮನಕ್ಕೆ ತಂದರು.

ಇದನ್ನೂ ಓದಿ: ಮನಿ ಲಾಂಡ್ರಿಂಗ್​ ಕೇಸ್​: ಎನ್​ಸಿಪಿ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ

Last Updated : Feb 23, 2022, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.