ETV Bharat / business

ಮಾತಿಗೆ ತಪ್ಪದ ಕೇಂದ್ರ: ಮಹಿಳೆಯರ ಜನ್​ ಧನ್​ ಖಾತೆಗೆ ಬರುತ್ತಿದೆ ಕೋವಿಡ್​ ಪ್ಯಾಕೇಜ್​ನ 500 ರೂ.​ - ಪಿಎಂಜೆಡಿವೈ

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ಫಲಾನುಭವಿಗಳಿಂದ ಹಣವನ್ನು ಕ್ರಮಬದ್ಧವಾಗಿ ಹಿಂತೆಗೆದುಕೊಳ್ಳುವುದನ್ನು ಖಚಿತಪಡಿಸಿಲು ಐಬಿಎ ಏಪ್ರಿಲ್ ತಿಂಗಳಲ್ಲಿ ಎಲ್ಲ ಬ್ಯಾಂಕ್​ಗಳು ಅನುಸರಿಸಬೇಕಾದ ವೇಳಾಪಟ್ಟಿಯನ್ನು ವಿನ್ಯಾಸಗೊಳಿಸಿದೆ. ಬ್ಯಾಂಕ್ ಶಾಖೆಗಳಲ್ಲಿ ದಟ್ಟಣೆಯನ್ನು ತಪ್ಪಿಸಲು ಕೆಲ ದಿನಗಳವರೆಗೆ ವರ್ಗಾವಣೆ ಅವಕಾಶ ನೀಡುತ್ತಿದೆ.

PMJD
ಜನ್​ ಧನ್​ ಖಾತೆ
author img

By

Published : Apr 2, 2020, 7:40 PM IST

Updated : Apr 2, 2020, 8:00 PM IST

ನವದೆಹಲಿ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕಳೆದ ವಾರ, ಪ್ರಧಾನ್ ಮಂತ್ರಿ ಜನ್​ ಧನ್​ ಯೋಜನೆ (ಪಿಎಂಜೆಡಿವೈ) ಅಡಿ ಮಹಿಳಾ ಬ್ಯಾಂಕ್ ಖಾತೆದಾರರಿಗೆ ಶುಕ್ರವಾರದಿಂದ ತಿಂಗಳಿಗೆ 500 ರೂ. ನೀಡಲಾಗುವುದು ಘೋಷಿಸಿದ್ದರು. ಈ ಮೊತ್ತ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಭಾರತೀಯ ಬ್ಯಾಂಕ್ ಸಂಘಟನೆ (ಐಬಿಎ) ಹೇಳಿದೆ.

ಕಳೆದ ವಾರ ಘೋಷಿಸಿದ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ 3 ಮಾಸಿಕ ಕಂತುಗಳಲ್ಲಿ ಇದು ಮೊದಲನೆಯ ಕಂತನ್ನು ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದು ಭಾರತೀಯ ಬ್ಯಾಂಕ್​ಗಳ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ಫಲಾನುಭವಿಗಳಿಂದ ಹಣವನ್ನು ಕ್ರಮಬದ್ಧವಾಗಿ ಹಿಂತೆಗೆದುಕೊಳ್ಳುವುದನ್ನು ಖಚಿತಪಡಿಸಿಲು ಐಬಿಎ ಏಪ್ರಿಲ್ ತಿಂಗಳಲ್ಲಿ ಎಲ್ಲ ಬ್ಯಾಂಕ್​ಗಳು ಅನುಸರಿಸಬೇಕಾದ ವೇಳಾಪಟ್ಟಿಯನ್ನು ವಿನ್ಯಾಸಗೊಳಿಸಿದೆ. ಬ್ಯಾಂಕ್ ಶಾಖೆಗಳಲ್ಲಿ ದಟ್ಟಣೆಯನ್ನು ತಪ್ಪಿಸಲು ಕೆಲ ದಿನಗಳವರೆಗೆ ವರ್ಗಾವಣೆ ಅವಕಾಶ ನೀಡುತ್ತಿದೆ.

ವೇಳಾಪಟ್ಟಿಯ ಪ್ರಕಾರ, 0 ಮತ್ತು 1ರಂತೆ ಕೊನೆಯ ಅಂಕಿಯೊಂದಿಗೆ ಖಾತೆ ಸಂಖ್ಯೆಯನ್ನು ಹೊಂದಿರುವ ಮಹಿಳಾ ಪಿಎಂಜೆಡಿವೈ ಖಾತೆದಾರರು ಏಪ್ರಿಲ್ 3 ರಂದು ತಮ್ಮ ಖಾತೆಯಲ್ಲಿ ಹಣವನ್ನು ಪಡೆಯುತ್ತಾರೆ. ಆದರೆ 2 ಅಥವಾ 3 ರೊಂದಿಗೆ ಕೊನೆಗೊಳ್ಳುವ ಖಾತೆ ಸಂಖ್ಯೆ ಏಪ್ರಿಲ್ 4 ರಂದು ಬ್ಯಾಂಕ್​ಗಳನ್ನು ಸಂಪರ್ಕಿಸಬಹುದು ಎಂದು ಹೇಳಿದೆ.

ಏಪ್ರಲ್ 7ರಂದು 4 ಅಥವಾ 5 ರೊಂದಿಗೆ ಕೊನೆಗೊಳ್ಳುವ ಖಾತೆ ಸಂಖ್ಯೆ ಹೊಂದಿರುವ ಫಲಾನುಭವಿಗಳು ತಮ್ಮ ಹಣ ಪಡೆಯಬಹುದು. ಖಾತೆ ಸಂಖ್ಯೆ 6 ಅಥವಾ 7ರ ಕೊನೆಯ ಅಂಕಿಯೊಂದಿಗೆ ಮರುದಿನ ಹಿಂತೆಗೆದುಕೊಳ್ಳಬಹುದು.

ಕೊನೆಯ ಸಾಲವನ್ನು ಏಪ್ರಿಲ್ 9ರಂದು 8 ರೊಂದಿಗೆ ಕೊನೆಗೊಳ್ಳುವ ಖಾತೆ ಸಂಖ್ಯೆಗೆ ಕಳುಹಿಸಲಾಗುತ್ತದೆ. ಏಪ್ರಿಲ್ 9ರ ನಂತರ ಫಲಾನುಭವಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ದಿನ ಹಿಂತೆಗೆದುಕೊಳ್ಳಬಹುದು. ಎಲ್ಲ ಫಲಾನುಭವಿಗಳಿಗೆ ಹಣವನ್ನು ಸುರಕ್ಷಿತವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವೀಕರಿಸುವಂತೆ ಐಬಿಎ ಮನವಿ ಮಾಡಿದೆ.

ಈ ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುತ್ತಿರುವುದರಿಂದ ಫಲಾನುಭವಿಗಳು ಹಿಂಪಡೆಯಲು ತಕ್ಷಣವೇ ಮುಂದಾಗಬೇಕಾಗಿಲ್ಲ. ಯಾವುದೇ ದಿನಾಂಕದಂದು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣವನ್ನು ಪಡೆಯಬಹುದು. ನೆರೆಹೊರೆಯ ಎಟಿಎಂಗಳಲ್ಲಿ ರುಪೇ ಕಾರ್ಡ್‌ಗಳು ಬಳಸಿ ಸ್ವೀಕರಿಸಬಹುದು. ಬ್ಯಾಂಕ್ ಶಾಖೆಗಳಲ್ಲಿ ಜನಸಂದಣಿ ಸರ್ಕಾರದ ನಿರ್ದೇಶನದಂತೆ ಇತರ ಬ್ಯಾಂಕ್ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಹೇಳಿದೆ.

Last Updated : Apr 2, 2020, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.