ಮುಂಬೈ: ಸೆಮಿ ಲಾಕ್ಡೌನ್ ನಡುವೆಯೂ ಮುಂದಿನ ಮೇ ತಿಂಗಳಲ್ಲಿ ಬ್ಯಾಂಕ್ಗಳಿಗೆ ಹೆಚ್ಚಿನ ರಜಾ ದಿನಗಳಿದ್ದು, ಗ್ರಾಹಕರು ಅಗತ್ಯವಿರುವಷ್ಟು ಹಣ ಹಾಗೂ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಳ್ಳಲು ಮೊದಲೇ ಯೋಜನೆ ರೂಪಿಸಿಕೊಳ್ಳುವುದು ಸೂಕ್ತ.
ಮೇ ಮೊದಲ ದಿನವೇ ವಿಶ್ವ ಕಾರ್ಮಿಕರ ದಿನಾಚರಣೆಯೊಂದಿಗೆ ರಜೆ ಆರಂಭವಾಗುತ್ತಿದೆ. ಮೇ 7ರಂದು ಜುಮಾತ್ - ಉಲ್ - ವಿದಾ ಇರಲಿದೆ. 13ರಂದು ರಂಜಾನ್ ಈದ್ಗೆ (ಇದ್-ಉಲ್-ಫಿತರ್) ಹಾಲಿಡೇ ಘೋಷಣೆ ಮಾಡಲಾಗುತ್ತದೆ.
ಮೇ 14ರಂದು ಭಗವಾನ್ ಪರಶುರಾಮರ ಜಯಂತಿ, ರಂಜಾನ್ ಈದ್, ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಒಟ್ಟಾಗಿ ಬಂದಿವೆ. ಹೀಗಾಗಿ, ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್ಗಳ ವಹಿವಾಟು ಸ್ಥಗಿತಗೊಳ್ಳಬಹುದು.
ಮೇ 26ರಂದು ಭಗವಾನ್ ಬುದ್ಧ ಪೂರ್ಣಿಮಾ ಇರುವ ಕಾರಣ ಕೆಲವು ಬ್ಯಾಂಕ್ಗಳ ಬಾಗಿಲು ತೆರೆಯುವ ಸಾಧ್ಯತೆ ತೀರಾ ಕಡಿಮೆ. ಉಳಿದಂತೆ ಮೇ ತಿಂಗಳಲ್ಲಿ ವಾರಾಂತ್ಯದ ರಜಾದಿನಗಳು ಇರಲಿವೆ.
2021ರ ಮೇ ತಿಂಗಳಲ್ಲಿ ವಾರಾಂತ್ಯದ ರಜಾದಿನಗಳು
ಮೇ 2 ಸಾಪ್ತಾಹಿಕ ರಜೆ (ಭಾನುವಾರ)
ಮೇ 8 - ಎರಡನೇ ಶನಿವಾರ
ಮೇ 9 - ಸಾಪ್ತಾಹಿಕ ರಜೆ (ಭಾನುವಾರ)
ಮೇ 16 - ವಾರದ ರಜೆ (ಭಾನುವಾರ)
ಮೇ 22 - ನಾಲ್ಕನೇ ಶನಿವಾರ
ಮೇ 23 - ಸಾಪ್ತಾಹಿಕ ರಜೆ (ಭಾನುವಾರ)
ಮೇ 30 ಸಾಪ್ತಾಹಿಕ ರಜೆ (ಭಾನುವಾರ)
ಒಟ್ಟಾರೆ ಪ್ರಸ್ತಕ ಸಾಲಿನ ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ಗಳಿಗೆ ರಜೆ ಇರಲಿದ್ದು, ಗ್ರಾಹಕರು, ವ್ಯಾಪಾರಿಗಳು ಬ್ಯಾಂಕ್ ವ್ಯವಹಾರಗಳ ನಿರ್ವಹಣೆಗಾಗಿ ಇಂದಿನಿಂದಲೇ ಯೋಜನೆ ರೂಪಿಸಿಕೊಳ್ಳುವುದು ಉತ್ತಮ. ಇದು ರಾಜ್ಯಗಳಿಂದ ರಾಜ್ಯಗಳಿಗೆ ವ್ಯತ್ಯಾಸವಾಗಿ ಇರಲಿದೆ.