ETV Bharat / business

ನಾಳೆಯಿಂದ ಬ್ಯಾಂಕ್​ಗಳಿಗೆ ಸಾಲು - ಸಾಲು ರಜೆ: ಅವುಗಳ ವಿವರ ಇಲ್ಲಿದೆ

author img

By

Published : Apr 12, 2021, 2:46 PM IST

ಪ್ರತಿ ವರ್ಷವೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​​​ಬಿಐ) ದೇಶಾದ್ಯಂತದ ಎಲ್ಲ ಬ್ಯಾಂಕ್​ಗಳು ಕೆಲ ಸಂದರ್ಭಗಳಲ್ಲಿ ಮುಚ್ಚಲ್ಪಡುತ್ತವೆ ಎಂದು ಹೇಳುತ್ತದೆ. ನೆಗೋಷಬಲ್ ಇನ್​ಸ್ಟ್ರುಮೆಂಟ್ಸ್ ಆ್ಯಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಅಡಿ ರಜಾದಿನಗಳಾಗಿ ಘೋಷಿಸಬಹುದು.

Bank
Bank

ಮುಂಬೈ: 2021-22ರ ಹಣಕಾಸು ವರ್ಷದ ಆರಂಭಿಕ ಏಪ್ರಿಲ್ ಮಾಸಿಕದಲ್ಲಿ ಬ್ಯಾಂಕ್​​ಗಳಿಗೆ ಸಾಕಷ್ಟು ರಜೆಗಳು ಇರುವಾಗಲೇ ದೇಶದ ಬೇರೆ ಭಾಗದಲ್ಲಿ ಏ.13ರಿಂದ 16ರ ತನಲ ಸಾಲು ರಜೆಗಳಿವೆ. ಹೀಗಾಗಿ, ಬ್ಯಾಂಕ್ ಗ್ರಾಹಕರು ತಮ್ಮ ಸಂಬಂಧಿತ ಶಾಖೆಗಳಿಗೆ ತೆರಳುವ ಮುನ್ನ ಒಮ್ಮೆ ಕ್ಯಾಲೆಂಡರ್ ನೋಡುವುದು ಉತ್ತಮ.

ಪ್ರತಿ ವರ್ಷವೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳು ಕೆಲ ಸಂದರ್ಭಗಳಲ್ಲಿ ಮುಚ್ಚಲ್ಪಡುತ್ತವೆ ಎಂದು ಹೇಳುತ್ತದೆ. ನೆಗೋಷಬಲ್ ಇನ್​ಸ್ಟ್ರುಮೆಂಟ್ಸ್ ಆ್ಯಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಅಡಿ ರಜಾದಿನಗಳಾಗಿ ಘೋಷಿಸಬಹುದು.

ಇದನ್ನೂ ಓದಿ: ದಾಸ್ತಾನು ಖಾಲಿಯಾಗುವವರೆಗೂ ಹಳೆ ದರದಲ್ಲೇ ರಸಗೊಬ್ಬರ ಮಾರಾಟಕ್ಕೆ ಒಪ್ಪಿಗೆ

ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತವೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿರುತ್ತವೆ ಎಂಬುದನ್ನು ಗ್ರಾಹಕರು ಗಮನದಲ್ಲಿರಿಸಿಕೊಳ್ಳಬೇಕು. ಎಲ್ಲ ಅಂಶಗಳನ್ನು ಪರಿಗಣಿಸಿ 2021ರ ಏಪ್ರಿಲ್ 13ರ ನಂತರದ ಬ್ಯಾಂಕ್ ರಜಾದಿನಗಳ ಪಟ್ಟಿ ಈ ರೀತಿಯಾಗಿದೆ.

ಏಪ್ರಿಲ್ 13: ಗುಡಿಪಾಡ್ಯ', ತೆಲುಗು ಹೊಸ ವರ್ಷದ ದಿನ, ಯುಗಾದಿ

ಏಪ್ರಿಲ್ 14: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ಕರ್ನಾಟಕದ ದಕ್ಷಿಣ ಕನ್ನಡ ಭಾಗದ ಕೆಲ ಸಮುದಾಯದಲ್ಲಿ ವಿಷು (ಬಿಸು) ಹಬ್ಬ ಆಚರಣೆ/ ತಮಿಳು ಹೊಸ ವರ್ಷದ ದಿನ/ ಬಿಜು ಉತ್ಸವ/ ಕೇರಳದಲ್ಲಿ ವಿಷು

ಏಪ್ರಿಲ್ 15: ಹಿಮಾಚಲ ದಿನ/ಬಂಗಾಳಿ ಹೊಸ ವರ್ಷದ ದಿನ

ಏಪ್ರಿಲ್​ 16: ಅಸ್ಸೋಂನಲ್ಲಿ ಬೋಹಗ್ ಬಿಹು ಹಬ್ಬ

ಈ ನಂತರ ಏಪ್ರಿಲ್ 21ರಂದು ಶ್ರೀರಾಮ ನವಮಿ/ಗರಿಯಾ ಪೂಜಾ. ಇದು ಪಶ್ಚಿಮ ಬಂಗಾಳ, ಅಸ್ಸೋಂ, ಗೋವಾ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ, ಪುದುಚೇರಿ, ತಮಿಳುನಾಡುಗಳಲ್ಲಿ ರಾಷ್ಟ್ರೀಯ ರಜಾ ಇರಲಿದೆ. ಏಪ್ರಿಲ್ 24ರಂದು ತಿಂಗಳ ನಾಲ್ಕನೇ ಶನಿವಾರವಾರ ಹಾಗೂ ಏಪ್ರಿಲ್ 25ರಂದು ಮಹರ್ಷಿ ಪರಶುರಾಮರ ಜಯಂತಿ. ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನಗಳ ನಿರ್ದಿಷ್ಟ ರಜಾದಿನ ಇರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.