ETV Bharat / business

ಕೊರೊನಾ ಲಸಿಕೆ ಪಡೆದವರ ಸ್ಥಿರ ಠೇವಣಿಗಳಿಗೆ ಬ್ಯಾಂಕ್​ಗಳಿಂದ ಹೆಚ್ಚುವರಿ ಬಡ್ಡಿದರದ ಆಫರ್

author img

By

Published : Jun 8, 2021, 7:22 AM IST

ಕೊರೊನಾ ಲಸಿಕೆ ಪಡೆದವರಿಗೆ ಅನ್ವಯವಾಗುವ ಕಾರ್ಡ್ ದರಕ್ಕಿಂತ 25 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಬಡ್ಡಿದರದೊಂದಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಇಮ್ಯೂನ್ ಇಂಡಿಯಾ ಠೇವಣಿ ಯೋಜನೆ ಪ್ರಾರಂಭಿಸಿದೆ. ಈ ಬಳಿಕ ಯುಕೋ ಬ್ಯಾಂಕ್, ಸೆಪ್ಟೆಂಬರ್ 30ರವರೆಗೆ ಯುಕೋವಾಕ್ಸಿ -999 ಸೀಮಿತ ಅವಧಿಯ ಹೆಚ್ಚುವರಿ ಬಡ್ಡಿದರ​ ಘೋಷಿಸಿದೆ.

Banks
Banks

ಕೋಲ್ಕತ್ತಾ: ದೇಶದಲ್ಲಿ ವ್ಯಾಪಕವಾಗಿ ಕೋವಿಡ್​ -19 ವ್ಯಾಕ್ಸಿನೇಷನ್ ಉತ್ತೇಜಿಸುವ ಪ್ರಯತ್ನದ ಭಾಗವಾಗಿ, ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರ ಘೋಷಿಸಿದ್ದು, ಇದು ಸೀಮಿತ ಅವಧಿಗೆ ಮಾನ್ಯವಾಗಿರುತ್ತದೆ.

ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದ ಅರ್ಜಿದಾರರಿಗೆ 999 ದಿನಗಳ ಸ್ಥಿರ ಠೇವಣಿಗಳ ಮೇಲೆ 30 ಬೇಸಿಸ್ ಪಾಯಿಂಟ್ ಅಥವಾ ಶೇ 0.30ರಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುವುದಾಗಿ ಯುಕೋ ಬ್ಯಾಂಕ್ ತಿಳಿಸಿದೆ.

'ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ಉತ್ತೇಜಿಸಲು ನಾವು ಸಣ್ಣ-ಸಣ್ಣ ಪ್ರೋತ್ಸಾಹಕ ಕ್ರಮಗಳನ್ನು ಸಹ ತೆಗೆದುಕೊಳ್ಳುತ್ತಿದ್ದೇವೆ. ಸೆಪ್ಟೆಂಬರ್ 30ರವರೆಗೆ ನಾವು ಯುಕೋವಾಕ್ಸಿ -999 ಅನ್ನು ಸೀಮಿತ ಅವಧಿಗೆ ನೀಡುತ್ತಿದ್ದೇವೆ' ಎಂದು ಬ್ಯಾಂಕ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 100ರ ಅಂಚಿಗೆ ತಲುಪಿದ ಪೆಟ್ರೋಲ್.. ಹಲವು ಜಿಲ್ಲೆಗಳಲ್ಲಿ ಶತಕ ದಾಟಿದ ಇಂಧನ ದರಕ್ಕೆ ಗ್ರಾಹಕರು ಕಂಗಾಲು

ಲಸಿಕೆ ಪಡೆದವರಿಗೆ ಅನ್ವಯವಾಗುವ ಕಾರ್ಡ್ ದರಕ್ಕಿಂತ 25 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಬಡ್ಡಿದರದೊಂದಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಇಮ್ಯೂನ್ ಇಂಡಿಯಾ ಠೇವಣಿ ಯೋಜನೆ ಪ್ರಾರಂಭಿಸಿತ್ತು. ಈ ಬಳಿಕ ಯುಕೋ ಬ್ಯಾಂಕ್​ ಹೆಚ್ಚುವರಿ ಬಡ್ಡಿದರ ಪ್ರಕಟಿಸಿದೆ.

ಹೊಸ ಬಡ್ಡಿದರ ಸೇವೆಯು 1,111 ದಿನಗಳ ಮುಕ್ತಾಯ ಅವಧಿ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿ 23 ಕೋಟಿ ಜನರಿಗೆ ವ್ಯಾಕ್ಸಿನ್‌

ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್-19 ಲಸಿಕೆ ಪ್ರಮಾಣವು 23.59 ಕೋಟಿ ಮೀರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.