ETV Bharat / business

ಮಾರ್ಚ್‌27ರಿಂದ 9 ದಿನಗಳಲ್ಲಿ 7 ದಿನ ಬ್ಯಾಂಕ್​ಗಳು ಬಂದ್.. ಅದಕ್ಕೆ ಕಾರಣವೂ ಇವೆ.. - 2021ರ ಮಾರ್ಚ್​ ಬ್ಯಾಂಕ್ ರಜಾದಿನಗಳು

ಅಗರ್ತಲಾ, ಐಜಾವ್ಲ್, ಬೆಂಗಳೂರು, ಚೆನ್ನೈ, ಗುವಾಹಟಿ, ಜಮ್ಮು, ಕೊಚ್ಚಿ, ಕೋಲ್ಕತಾ, ಶ್ರೀನಗರ ಮತ್ತು ತಿರುವನಂತಪುರಂ ಹೊಂದಿರುವ ರಾಜ್ಯಗಳಲ್ಲಿ 2021ರ ಮಾರ್ಚ್ 29ರಂದು ಹೋಳಿ ಹಬ್ಬದ ಪ್ರಯುಕ್ತ ಬ್ಯಾಂಕ್​ಗಳನ್ನು ಮುಚ್ಚುವುದಿಲ್ಲ..

Banks closed
Banks closed
author img

By

Published : Mar 24, 2021, 5:19 PM IST

ನವದೆಹಲಿ : ಎರಡು ದಿನಗಳ ವಾರಾಂತ್ಯ ಮತ್ತು ಹೋಳಿ ಹಬ್ಬ ಸೇರಿ ಮಾರ್ಚ್ 27-29ರ ಅವಧಿಯಲ್ಲಿ ಭಾರತದ ಎಲ್ಲಾ ಬ್ಯಾಂಕ್​ಗಳು ಸತತ ಮೂರು ದಿನಗಳವರೆಗೆ ಮುಚ್ಚಿರಲಿವೆ.

ಹಣಕಾಸು ವರ್ಷದ ಕೊನೆಯ ದಿನದ ಕಾರಣ ಬ್ಯಾಂಕ್ ಸೇವೆಗಳನ್ನು 2021ರ ಮಾರ್ಚ್ 31ರಂದು ಸ್ಥಗಿತಗೊಳಿಸಲಾಗುತ್ತದೆ. ತದ ನಂತರ 2021ರ ಏಪ್ರಿಲ್ 1, 2 ಮತ್ತು 4ರಂದು ಖಾತೆಗಳ ಸ್ಥಗಿತದಿಂದಾಗಿ ಬ್ಯಾಂಕ್​ಗಳು ಮುಚ್ಚಿರುತ್ತಿವೆ. ಗುಡ್​ ಫ್ರೈಡೇ ಮತ್ತು ಭಾನುವಾರದಂದು ರಜೆ ಇರಲಿದೆ.

ಇದನ್ನೂ ಓದಿ: ಕೊರೊನಾ ದಾಳಿಗೆ ಮತ್ತೆ ತಲ್ಲಣಿಸಿದ 'ಷೇರು' ಮಾರುಕಟ್ಟೆ: ಹೂಡಿಕೆದಾರನ ಚಿಂತೆಗೆ 871 ಅಂಕ ಲಾಸ್​

ಆದ್ದರಿಂದ ಜನ ತಮ್ಮ ಬ್ಯಾಂಕ್‌ಗೆ ಸಂಬಂಧಿತ ಕೆಲಸವನ್ನು ಮಾರ್ಚ್ 30(ಮಂಗಳವಾರ) ಮತ್ತು ಏಪ್ರಿಲ್ 3(ಶನಿವಾರ) ಎರಡು ದಿನಗಳಲ್ಲಿ ಮಾತ್ರ ಪೂರ್ಣಗೊಳಿಸಬಹುದು. ಕೆಳಗೆ ನೀಡಲಾದ ರಜಾದಿನಗಳ ಪಟ್ಟಿಯನ್ನು ಆರ್‌ಬಿಐ ನೆಗೋಷಬಲ್ ಇನ್​ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿ ತಿಳಿಸಿದೆ.

ರಾಷ್ಟ್ರೀಯ ರಜಾದಿನಗಳು :

2021ರ ಮಾರ್ಚ್ 27- ನಾಲ್ಕನೇ ಶನಿವಾರ

2021ರ ಮಾರ್ಚ್ 28- ವಾರದ ರಜೆ (ಭಾನುವಾರ)

2021ರ ಮಾರ್ಚ್ 29 ಹೋಳಿ (ಎರಡನೇ ದಿನ)

2021ರ ಮಾರ್ಚ್ 31- 2021ರ ಹಣಕಾಸು ವರ್ಷ ಮುಕ್ತಾಯ

2021ರ ಏಪ್ರಿಲ್ 01- ಬ್ಯಾಂಕ್​ಗಳು ತಮ್ಮ ವಾರ್ಷಿಕ ಖಾತೆಗಳನ್ನು ಸ್ಥಗಿತಗೊಳಿಸಲು ಆಂತರಿಕ ಕೆಲಸ

2021ರ ಏಪ್ರಿಲ್ 02 - ಗುಡ್​ ಫ್ರೈಡೇ

2021ರ ಏಪ್ರಿಲ್ 04- ವಾರದ ರಜೆ (ಭಾನುವಾರ)

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಾರ, ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಬಹುದು ಮತ್ತು ವಿವಿಧ ಬ್ಯಾಂಕ್​ಗಳಲ್ಲಿ ವ್ಯತ್ಯಾಸದಿಂದ ಕೂಡಿರಬಹುದು.

ಅಗರ್ತಲಾ, ಐಜಾವ್ಲ್, ಬೆಂಗಳೂರು, ಚೆನ್ನೈ, ಗುವಾಹಟಿ, ಜಮ್ಮು, ಕೊಚ್ಚಿ, ಕೋಲ್ಕತಾ, ಶ್ರೀನಗರ ಮತ್ತು ತಿರುವನಂತಪುರಂ ಹೊಂದಿರುವ ರಾಜ್ಯಗಳಲ್ಲಿ 2021ರ ಮಾರ್ಚ್ 29ರಂದು ಹೋಳಿ ಹಬ್ಬದ ಪ್ರಯುಕ್ತ ಬ್ಯಾಂಕ್​ಗಳನ್ನು ಮುಚ್ಚುವುದಿಲ್ಲ.

ಪಾಟ್ನಾದಲ್ಲಿ ಬ್ಯಾಂಕ್​ಗಳು 2021ರ ಮಾರ್ಚ್ 30ರಂದು ಹೋಳಿಯ ಕಾರಣದಿಂದಾಗಿ ಮುಚ್ಚುತ್ತವೆ ಎಂದು ಆರ್​ಬಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.