ETV Bharat / business

ಕೊರೊನಾ ಸಂಕಷ್ಟದಲ್ಲಿ ಸೀತಾರಾಮನ್ ಗತ್ತು, ತೆರಿಗೆದಾರರ ತಾಕತ್ತು: GST ಇತಿಹಾಸದಲ್ಲೇ ದಾಖಲೆ ಟ್ಯಾಕ್ಸ್​ ಸಂಗ್ರಹ!

ಮಾರ್ಚ್‌ನಲ್ಲಿ ಹಿಂದಿನ ಗರಿಷ್ಠ ಮಟ್ಟವನ್ನು ಮೀರಿ, ಏಪ್ರಿಲ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ಮತ್ತೊಂದು ಹೊಸ ದಾಖಲೆಯ 1.41 ಲಕ್ಷ ಕೋಟಿ ರೂ. ಖಜಾನೆಗೆ ಹರಿದು ಬಂದಿದೆ. ಹಿಂದಿನ ತಿಂಗಳ ಸಂಗ್ರಹಕ್ಕೆ ಹೋಲಿಸಿದರೆ ಏಪ್ರಿಲ್ ತಿಂಗಳ ಜಿಎಸ್‌ಟಿ ಆದಾಯವು ಶೇ 14ರಷ್ಟು ಹೆಚ್ಚಳವಾಗಿದೆ. ಜಿಎಸ್​ಟಿ ಸಂಗ್ರಹವು ಕಳೆದ ಏಳು ತಿಂಗಳಿಂದ ಸತತವಾಗಿ 1 ಟ್ರಿಲಿಯನ್ ರೂ. ಜಮೆ ಆಗುತ್ತಿದೆ.

GST
GST
author img

By

Published : May 1, 2021, 3:41 PM IST

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಆರ್ಥಿಕ ಅಡಚಣೆಯ ನಡುವೆ ಮಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಏಪ್ರಿಲ್​ನಲ್ಲಿ ದಾಖಲೆಯ ಪ್ರಮಾಣದಲ್ಲಿ ಹರಿದು ಬಂದಿದೆ.

ಮಾರ್ಚ್‌ನಲ್ಲಿ ಹಿಂದಿನ ಗರಿಷ್ಠ ಮಟ್ಟವನ್ನು ಮೀರಿ, ಏಪ್ರಿಲ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ಮತ್ತೊಂದು ಹೊಸ ದಾಖಲೆಯ 1.41 ಲಕ್ಷ ಕೋಟಿ ರೂ. ಖಜಾನೆಗೆ ಹರಿಬಂದಿದೆ. ಹಿಂದಿನ ತಿಂಗಳ ಸಂಗ್ರಹಕ್ಕೆ ಹೋಲಿಸಿದರೆ ಏಪ್ರಿಲ್ ತಿಂಗಳ ಜಿಎಸ್‌ಟಿ ಆದಾಯವು ಶೇ 14ರಷ್ಟು ಹೆಚ್ಚಳವಾಗಿದೆ.

ಜಿಎಸ್​ಟಿ ಸಂಗ್ರಹವು ಕಳೆದ ಏಳು ತಿಂಗಳಿಂದ ಸತತವಾಗಿ 1 ಟ್ರಿಲಿಯನ್ ರೂ. ಜಮೆ ಆಗುತ್ತಿದೆ.

ಕೊರೊನಾ ವೈರಸ್​ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ದೇಶದ ಹಲವು ಭಾಗಗಳ ಮೇಲೆ ಪರಿಣಾಮ ಬೀರುತ್ತಿದ್ದರೂ ಭಾರತೀಯ ವ್ಯವಹಾರಗಳು ರಿಟರ್ನ್ ಫೈಲಿಂಗ್ ಅವಶ್ಯಕತೆಗಳನ್ನು ಅನುಸರಿಸುವುದರ ಮೂಲಕ ಮಾತ್ರವಲ್ಲದೇ ತಿಂಗಳಲ್ಲಿ ತಮ್ಮ ಜಿಎಸ್​ಟಿ ಬಾಕಿಗಳನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಗಮನಾರ್ಹ ಸ್ಥಿರತೆ ತೋರಿಸಿದೆ ಎಂದು ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್ ತಿಂಗಳಲ್ಲಿ ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ತಿಂಗಳು ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ 21ರಷ್ಟು ಹೆಚ್ಚಾಗಿದೆ. ಒಟ್ಟು ಸಂಗ್ರಹಗಳಲ್ಲಿ ಸಿಜಿಎಸ್​ಟಿ ಸುಮಾರು 27,837 ಕೋಟಿ, ಎಸ್‌ಜಿಎಸ್‌ಟಿ 35,621 ಕೋಟಿ ರೂ., ಐಜಿಎಸ್‌ಟಿ 68,481 ಕೋಟಿ ರೂ. (ಸರಕುಗಳ ಆಮದು ಸಂಗ್ರಹ 29,599 ಕೋಟಿ ರೂ. ಸೇರಿ ಮತ್ತು ಸೆಸ್ 9,445 ಕೋಟಿ ರೂ.ಯಷ್ಟಾಗಿದೆ ಎಂದಿದೆ.

ಈ ಅವಧಿಯಲ್ಲಿ ನಿರಂತರ ಆರ್ಥಿಕ ಚೇತರಿಕೆಯ ಸ್ಪಷ್ಟ ಸೂಚಕಗಳು ಕಾಣಿಸುತ್ತಿವೆ. ಜಿಎಸ್​ಟಿ, ಆದಾಯ-ತೆರಿಗೆ ಮತ್ತು ಕಸ್ಟಮ್ಸ್ ಐಟಿ ವ್ಯವಸ್ಥೆಗಳು ಮತ್ತು ಪರಿಣಾಮಕಾರಿ ತೆರಿಗೆ ಆಡಳಿತ ಸೇರಿದಂತೆ ಅನೇಕ ಮೂಲಗಳಿಂದ ದತ್ತಾಂಶವನ್ನು ಬಳಸುವ ನಕಲಿ - ಬಿಲ್ಲಿಂಗ್ ತಡೆ, ದತ್ತಾಂಶಗಳ ವಿಶ್ಲೇಷಣೆ ವಿರುದ್ಧ ನಿಕಟ ಮೇಲ್ವಿಚಾರಣೆ ಸಹ ಸ್ಥಿರವಾದ ಆದಾಯ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ.

ತ್ರೈಮಾಸಿಕ ರಿಟರ್ನ್ ಮತ್ತು ಮಾಸಿಕ ಪಾವತಿ ಯೋಜನೆ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಸಣ್ಣ ತೆರಿಗೆದಾರರು ಈಗ ಪ್ರತಿ ಮೂರು ತಿಂಗಳಿಗೊಮ್ಮೆ ಕೇವಲ ಒಂದು ರಿಟರ್ನ್ ಮಾತ್ರ ಸಲ್ಲಿಸುತ್ತಾರೆ. ತೆರಿಗೆ ಪಾವತಿದಾರರಿಗೆ ಮೊದಲೇ ಭರ್ತಿ ಮಾಡಿದ ಜಿಎಸ್​ಟಿಆರ್ 2ಎ ಮತ್ತು 3 ಬಿ ರಿಟರ್ನ್ಸ್ ರೂಪದಲ್ಲಿ ಐಟಿ ಬೆಂಬಲ ಒದಗಿಸುವುದು ಮತ್ತು ಸಿಸ್ಟಮ್ ಸಾಮರ್ಥ್ಯ ಹೆಚ್ಚಿಸುವುದು ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಸರಾಗಗೊಳಿಸಿದೆ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.