ETV Bharat / business

ಜೋಡಣೆಯಾದ ಎಸಿ, ಎಲ್ಇ​ಡಿ ಲೈಟ್​ಗಳಿಗೆ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಇಲ್ಲ

ಎಸಿಗಳ ಘಟಕಗಳ ತಯಾರಿಕೆಯಲ್ಲಿ ತೊಡಗಿರುವ ಕಂಪನಿಗಳು ಅಥವಾ ಘಟಕಗಳಿಗೆ (ತಾಮ್ರದ ಕೊಳವೆ, ಅಲ್ಯೂಮಿನಿಯಂ ಫಾಯಿಲ್ ಮತ್ತು ಕಾಂಪ್ರೆಸರ್ಸ್​) ಮತ್ತು ಎಲ್ಇಡಿ ಲೈಟ್ಸ್​ (ಎಲ್ಇಡಿ ಚಿಪ್ ಪ್ಯಾಕೇಜಿಂಗ್, ರೆಸಿಸ್ಟರ್, ಐಸಿಗಳು ಮತ್ತು ಫ್ಯೂಸ್‌) ಯೋಜನೆಯಡಿಯಲ್ಲಿ ಬೆಂಬಲ ಒದಗಿಸಲಾಗುತ್ತದೆ.

Assembled ACs
Assembled ACs
author img

By

Published : Apr 17, 2021, 1:26 PM IST

ನವದೆಹಲಿ: ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜಕ ಇಲಾಖೆ (ಡಿಪಿಐಐಟಿ) ಎಸಿ ಮತ್ತು ಎಲ್‌ಇಡಿ ದೀಪಗಳಿಗೆ ಪಿಎಲ್‌ಐ ಯೋಜನೆಯ ಸೂಚನೆ ನೀಡಿದ್ದು, ಪ್ರೋತ್ಸಾಹವನ್ನು ಪಡೆಯಲು ಕಂಪನಿಗಳ ಆಯ್ಕೆ ಪ್ರಸ್ತುತ ಭಾರತದಲ್ಲಿ ತಯಾರಿಸದ ಘಟಕಗಳ ಉತ್ಪಾದನೆ ಬೆಂಬಲಿಸಲು ಆಗುವುದಿಲ್ಲ ಎಂದು ಹೇಳಿದೆ.

ಸಿದ್ಧಪಡಿಸಿದ ಸರಕುಗಳ ಜೋಡಣೆ ಪ್ರೋತ್ಸಾಹಿಸಲಾಗುವುದಿಲ್ಲ. ಮೂಲ / ಕೇಂದ್ರೀತ ಘಟಕಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂದಿದೆ.

ಈ ತಿಂಗಳ ಆರಂಭದಲ್ಲಿ 6,238 ಕೋಟಿ ರೂ. ಬಜೆಟ್ ವಿನಿಯೋಗದೊಂದಿಗೆ ಶ್ವೇತವರ್ಣದ ಸರಕುಗಳಾದ ಏರ್​ ಕಂಡಿಷನರ್​ (ಎಸಿ) ಮತ್ತು ಎಲ್ಇಡಿ ಲೈಟ್ಸ್​ಗೆ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಸರ್ಕಾರ ಅನುಮೋದನೆ ನೀಡಿತು. ಇದನ್ನು 2021-22ರಿಂದ 2028-29ರವರೆಗೆ ಜಾರಿಗೆ ತರಲಾಗುವುದು.

ಡಿಪಿಐಐಟಿಯ ಅಧಿಸೂಚನೆಯ ಪ್ರಕಾರ, ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇರುವ ಸಕ್ರಿಯ ತಂಡದ ಕಾರ್ಯದರ್ಶಿಗಳು ಪಿಎಲ್ಐ ಯೋಜನೆ ಮೇಲ್ವಿಚಾರಣೆ ಮಾಡುತ್ತಾರೆ. ಯೋಜನೆಯಡಿ ಹೊರಹೋಗುವ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸುತ್ತಾರೆ. ಎಲ್ಲಾ ಪಿಎಲ್ಐಗಳ ಏಕರೂಪತೆ ಖಚಿತಪಡಿಸಲಿದೆ.

ಒಟ್ಟಾರೆ 6,238 ಕೋಟಿ ರೂ. ಆರ್ಥಿಕ ವಿನಿಯೋಗದ ಒಳಗೆ ಯೋಜನೆಯ ವಿಧಾನಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಈ ತಂಡಕ್ಕೆ ಅಧಿಕಾರ ನೀಡಲಾಗುವುದು.

ಸೀಲಿಂಗ್‌ಗಳಿಗೆ ಒಳಪಟ್ಟ ಮೂಲ ವರ್ಷದಲ್ಲಿ (2019-20) ಉತ್ಪಾದಿತ ಸರಕುಗಳ ಹೆಚ್ಚುತ್ತಿರುವ ಮಾರಾಟದ (ತೆರಿಗೆಗಳ ನಿವ್ವಳ) ಮೇಲೆ (ಪ್ರತಿ ವಹಿವಾಟು ಮಾಡಿದ ಸರಕುಗಳಿಂದ ಭಿನ್ನವಾಗಿ) ಪ್ರತಿ ಫಲಾನುಭವಿಗೆ ಪ್ರೋತ್ಸಾಹಕ ಅನ್ವಯವಾಗುತ್ತದೆ ಎಂದು ಹೇಳಿದೆ.

ಸಿದ್ಧಪಡಿಸಿದ ಸರಕುಗಳ ಜೋಡಣೆ ಪ್ರೋತ್ಸಾಹಿಸಲು ಆಗುವುದಿಲ್ಲ. ಪ್ರಸ್ತುತ ಭಾರತದಲ್ಲಿ ಸಾಕಷ್ಟು ಸಾಮರ್ಥ್ಯದೊಂದಿಗೆ ಉತ್ಪಾದಿಸದ ಘಟಕಗಳು ಅಥವಾ ಸಬ್​ - ಅಸೆಂಬ್ಲಿಗಳ ಉತ್ಪಾದನೆ ಉತ್ತೇಜಿಸಲು ಕಂಪನಿಗಳ ಆಯ್ಕೆ ಮಾಡಲಾಗುತ್ತದೆ ಎಂದಿದೆ.

ಎಸಿಗಳ ಘಟಕಗಳ ತಯಾರಿಕೆಯಲ್ಲಿ ತೊಡಗಿರುವ ಕಂಪನಿಗಳು ಅಥವಾ ಘಟಕಗಳಿಗೆ (ತಾಮ್ರದ ಕೊಳವೆ, ಅಲ್ಯೂಮಿನಿಯಂ ಫಾಯಿಲ್ ಮತ್ತು ಕಾಂಪ್ರೆಸರ್ಸ್​) ಮತ್ತು ಎಲ್ಇಡಿ ಲೈಟ್ಸ್​ (ಎಲ್ಇಡಿ ಚಿಪ್ ಪ್ಯಾಕೇಜಿಂಗ್, ರೆಸಿಸ್ಟರ್, ಐಸಿಗಳು ಮತ್ತು ಫ್ಯೂಸ್‌) ಯೋಜನೆಯಡಿ ಬೆಂಬಲ ಒದಗಿಸಲಾಗುತ್ತದೆ.

ಪಿಎಲ್ಐ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಹತಾ ಮಾನದಂಡಗಳನ್ನು ದಾಖಲಿಸಿ, ಉತ್ಪಾದನೆಗಾಗಿ ಬ್ರೌನ್​-ಕ್ಷೇತ್ರ (ಅಸ್ತಿತ್ವದಲ್ಲಿ ಇರುವ ಸೌಲಭ್ಯ) ಅಥವಾ ಗ್ರೀನ್​-ಕ್ಷೇತ್ರ (ಹೊಸ) ಹೂಡಿಕೆ ಮಾಡುವ ಕಂಪನಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.