ನವದೆಹಲಿ: ಆನ್ಲೈನ್ ಶಾಪಿಂಗ್ ದೈತ್ಯ ಅಮೆಜಾನ್ ಇದೇ ಆಗಸ್ಟ್ 6 ಹಾಗೂ 7 ರಂದು ಭಾರತದಲ್ಲಿ ಪ್ರೈಂ ಡೇ ವಾರ್ಷಿಕ ಶಾಪಿಂಗ್ ಉತ್ಸವವನ್ನು ನಡೆಸಲಿದೆ ಎಂದು ಖಚಿತಪಡಿಸಿದೆ.
ಮನರಂಜನಾ ಕೊಡುಗೆಗಳನ್ನು ಒಳಗೊಂಡಂತೆ ಗ್ರಾಹಕರಿಗೆ ಉಳಿತಾಯದ ಭರವಸೆ ನೀಡುವ ಪ್ರೈಂ ಡೇ ಶಾಪಿಂಗ್ ಭಾರತದಲ್ಲಿ ಆಗಸ್ಟ್ 6ರ ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದ್ದು ಆಗಸ್ಟ್ 7 ರವರೆಗೆ ನಡೆಯಲಿದೆ.
ಕಳೆದ ಐದು ವರ್ಷಗಳಲ್ಲಿ ಪ್ರೈಮ್ ಡೇ ತನ್ನ ಗ್ರಾಹಕರಿಗೆ, ಅವರ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ನಂಬಲಾಗದ ಶಾಪಿಂಗ್ ಅನುಭವ ನೀಡಿದೆ. ಇದು ವಿಶೇಷ ಆಚರಣೆಯ ಸಮಯವಾಗಿದೆ. ಇದಕ್ಕಾಗಿ ನಾವು ಪ್ರತಿವರ್ಷ ಎದುರು ನೋಡುತ್ತಿದ್ದೇವೆ ಎಂದು ಅಮೆಜಾನ್ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತ ಪ್ರೈಂ ಸದಸ್ಯರು ಆಗಸ್ಟ್ 6-7ರಂದು ಭಾರೀ ಉಳಿತಾಯಕ್ಕೆ ಸಾಕ್ಷಿಯಾಗಲಿದ್ದಾರೆ. ವಿಶ್ವದ ಇತರ ಭಾಗದ ಸದಸ್ಯರು ಈ ವರ್ಷದ ಕೊನೆಯಲ್ಲಿ ಪ್ರೈಂ ಡೇ ಆಫರ್ ಪಡೆಯಲಿದ್ದಾರೆ. ಶೀಘ್ರದಲ್ಲೇ ಭಾರತದ ಪ್ರೈಂ ಡೇ ಬಗೆಗಿನ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಿದ್ದೇವೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ವರ್ಷ ಕೊರೊನಾ ಆರ್ಭಟದಿಂದಾಗ ಸಂಸ್ಥೆಯ ವೇಳಾಪಟ್ಟಿಗೆ ಅಡ್ಡಿಯಾಗಿತ್ತು. ಕೆಲ ವರದಿಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಒಂದೇ ದಿನ ಪ್ರೈಮ್ ಡೇ ನಡೆಯುವುತ್ತಿಲ್ಲ. ಅಲ್ಲದೆ ಪ್ರೈಮ್ ಡೇಯಲ್ಲಿ ಭಾಗವಹಿಸುವ ಇತರ ಮಾರುಕಟ್ಟೆಗಳ ದಿನಾಂಕಗಳು ಇನ್ನೂ ಹೊರಬಿದ್ದಿಲ್ಲ.