ETV Bharat / business

ಬಳಕೆಯಾಗದ ತರಂಗಾಂತರ ಖರೀದಿಸಿದ ಜಿಯೋ: ತನ್ನ ಹಕ್ಕು ಮಾರಾಟ ಮಾಡಿದ ಏರ್​ಟೆಲ್​ - ಭಾರ್ತಿ ಏರ್‌ಟೆಲ್‌ನ ಎಂಡಿ ಗೋಪಾಲ್ ವಿಟ್ಟಲ್

ಏರ್​ಟೆಲ್​ ಜಿಯೋಗೆ ಕೆಲವೊಂದು ಪ್ರದೇಶಗಳ ಬಳಕೆಯಾಗದ ತರಂಗಾಂತರಗಳ ಹಂಚಿಕೆ ಮಾಡಿದ್ದು, ಈ ಒಪ್ಪಂದ ಟೆಲಿಕಮ್ಯುನಿಕೇಷನ್​ ಇಲಾಖೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆದಿದೆ ಎಂದು ಏರ್​ಟೆಲ್ ಹೇಳಿದೆ.

Airtel, Jio announce spectrum trading agreement
ಜಿಯೋಗೆ ಬಳಕೆಯಾಗದ ತರಂಗಾಂತರ ಬಳಕೆಯ ಹಕ್ಕು ಮಾರಾಟ ಮಾಡಿದ ಏರ್​ಟೆಲ್​
author img

By

Published : Apr 6, 2021, 8:58 PM IST

ನವದೆಹಲಿ: ಭಾರ್ತಿ ಏರ್​ಟೆಲ್, ಜಿಯೋ ಇನ್ಫೋಕಾಮ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಏರ್​ಟೆಲ್​​ನ 800 ಮೆಗಾಹರ್ಟ್ಜ್ ತರಂಗಾಂತರದಲ್ಲಿರುವ ಆಂಧ್ರ ಪ್ರದೇಶದ 3.75 ಮೆಗಾಹರ್ಟ್ಜ್, ದೆಹಲಿಯ 1.25, ಮುಂಬೈನ 2.50 ಮೆಗಾಹರ್ಟ್ಜ್​ನ ತರಂಗಾಂತರದ ಬಳಕೆಯ ಹಕ್ಕನ್ನು ವರ್ಗಾಯಿಸಲಾಗಿದೆ ಎಂದು ಒಪ್ಪಂದ ಪತ್ರದಲ್ಲಿ ತಿಳಿಸಿದೆ.

ಈ ಒಪ್ಪಂದವು ಶಾಸನಬದ್ಧ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಏರ್​ಟೆಲ್​ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಈ ಮೂಲಕ ಒಟ್ಟು 7.50 ಮೆಗಾಹರ್ಟ್ಜ್​ ತರಂಗಾಂತರದ ವರ್ಗಾವಣೆಯಾಗಿದ್ದು, ಜಿಯೋದಿಂದ 1,037.6 ಕೋಟಿ ರೂಪಾಯಿ ಪಡೆದುಕೊಂಡಿದೆ.

ಇದನ್ನೂ ಓದಿ: ಲಾಕ್​ಡೌನ್ ಭೀತಿ: ಮತ್ತೆ ಆರ್ಥಿಕ ಹಿಂಜರಿಕೆಯ ಎಚ್ಚರಿಕೆ ನೀಡಿದ ಅಮೆರಿಕ

ಮುಂಬೈ, ಆಂಧ್ರ, ದೆಹಲಿಯಲ್ಲಿ ಬಳಕೆಯಾಗದ ತರಂಗಾಂತರವನ್ನು ನಾವು ಜಿಯೋಗೆ ನೀಡಿದ್ದು, ಈ ಮೂಲಕ ತರಂಗಾಂತರ ಮೌಲ್ಯ ಹೆಚ್ಚಾಗಲು ಸಹಕಾರಿಯಾಗಿದೆ. ಇವುಗಳ ಬಳಕೆಗೆ ಬೇರೆಯವರಿಗೆ ಅನುವು ಮಾಡಿಕೊಟ್ಟಿರುವುದರಿಂದ ನಮ್ಮ ಕಾರ್ಯತಂತ್ರಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎಂದು ಭಾರ್ತಿ ಏರ್‌ಟೆಲ್‌ನ ಎಂಡಿ ಮತ್ತು ಸಿಇಒ (ಭಾರತ ಮತ್ತು ದಕ್ಷಿಣ ಏಷ್ಯಾ) ಗೋಪಾಲ್ ವಿಟ್ಟಲ್ ಸ್ಪಷ್ಟನೆ ನೀಡಿದ್ದಾರೆ.

ಈಗ ಜಿಯೋದೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಟೆಲಿಕಮ್ಯುನಿಕೇಷನ್​ ಇಲಾಖೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಇದೆ ಎಂದು ಏರ್​ಟೆಲ್ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.